ಕರಾವಳಿ

ಎಸೆಸೆಲ್ಸಿ ಪರೀಕ್ಷೆ ಆರಂಭ ; ದ.ಕ. ಜಿಲ್ಲೆಯಲ್ಲಿ 29,097 ವಿದ್ಯಾರ್ಥಿಗಳಲ್ಲಿ 392 ವಿದ್ಯಾರ್ಥಿಗಳು ಗೈರು

Pinterest LinkedIn Tumblr

ಮಂಗಳೂರು, ಮಾರ್ಚ್.21: ಕರ್ನಾಟಕ ರಾಜ್ಯದಲ್ಲಿ ಗುರುವಾರದಿಂದ ಎಸೆಸೆಲ್ಸಿ ಪರೀಕ್ಷೆ ಆರಂಭಗೊಂಡಿದ್ದು, ಇಂದು ನಡೆದ ಮೊದಲ ದಿನದ ಪರೀಕ್ಷೆಯಲ್ಲಿ ದ.ಕ. ಜಿಲ್ಲೆಯಿಂದ ಹೆಸರು ನೋಂದಾಯಿಸಿಕೊಂಡಿದ್ದವರ ಪೈಕಿ 392 ಮಂದಿ ಗೈರು ಹಾಜರಾಗಿದ್ದಾರೆ.

ಕನ್ನಡ ಮತ್ತು ಇಂಗ್ಲಿಷ್ ಭಾಷಾ ಪರೀಕ್ಷೆಗೆ ದ.ಕ. ಜಿಲ್ಲೆಯಲ್ಲಿ 29,097 ವಿದ್ಯಾರ್ಥಿಗಳು ಹೆಸರು ನೋಂದಾಯಿಸಿಕೊಂಡಿದ್ದರು. ಈ ಪೈಕಿ 28,705 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.

ದ.ಕ. ಜಿಲ್ಲೆಯ 95 ಕೇಂದ್ರಗಳಲ್ಲಿ ಇಂದು ಪರೀಕ್ಷೆ ನಡೆದಿದ್ದು, 29,097 ವಿದ್ಯಾರ್ಥಿಗಳು ಹೆಸರು ನೋಂದಾಯಿಸಿಕೊಂಡಿದ್ದರಾದರೂ ಇಂದು ನಡೆದ ಮೊದಲ ದಿನದ ಪರೀಕ್ಷೆಯಲ್ಲಿ ಒಟ್ಟು 392 ಮಂದಿ ಗೈರು ಹಾಜರಾಗಿದ್ದರು.

ಪರೀಕ್ಷೆ ಸಂದರ್ಭ ಜಿಲ್ಲೆಯಲ್ಲಿ ಯಾವುದೇ ಅಕ್ರಮಗಳು ನಡೆದಿರುವ ಬಗ್ಗೆ ವರದಿಯಾಗಿಲ್ಲ ಎಂದು ಇಲಾಖೆಯ ಪ್ರಕಟಣೆ ತಿಳಿಸಿದೆ.

Comments are closed.