ಕರಾವಳಿ

ದಕ್ಷಿಣ ಕನ್ನಡ ಜಿಲ್ಲೆಯ ನಿರುದ್ಯೋಗಿ ಯುವಕ, ಯುವತಿಯರಿಗೆ ಮೈಸೂರಿನಲ್ಲಿ ಉಚಿತ ತರಬೇತಿ

Pinterest LinkedIn Tumblr

(ಸಾಂದರ್ಭಿಕ ಚಿತ್ರ)

ಮಂಗಳೂರು ಮಾರ್ಚ್.19 : ಕರ್ನಾಟಕದ ಏಕೈಕ ಕೇಂದ್ರೀಯ ಪ್ಲಾಸ್ಟಿಕ್ಸ್ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಸಂಸ್ಥೆ, ಮೈಸೂರು ಕಾಲೇಜಿನಲ್ಲಿ 2018-19 ನೇ ಸಾಲಿನ ದಕ್ಷಿಣ ಕನ್ನಡ ಜಿಲ್ಲೆಯ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡಗಳಿಗೆ ಸೇರಿದ ನಿರುದ್ಯೋಗಿ ಯುವಕ ಯುವತಿಯರಿಗೆ ಉಚಿತ ಊಟ , ವಸತಿ ಹಾಗೂ ಮಾಸಿಕ ರೂ. 500 ಶಿಷ್ಯ ವೇತನದೊಂದಿಗೆ ವಿವಿಧ ವೃತ್ತಿಪರ ಕೌಶಲ್ಯಾಭಿವೃದ್ಧಿ ತರಬೇತಿ ಹಾಗೂ ಉದ್ಯೋಗಾವಕಾಶವನ್ನು ಕಲ್ಪಿಸಿ ಕೊಡಲಾಗುವುದು.

ತರಬೇತಿಯ ಅವಧಿ 6 ತಿಂಗಳು. ಎಸ್‌ಎಸ್‌ಎಲ್‌ಸಿ,  ಪಿಯುಸಿ, ಐಟಿ‌ಐ, ಡಿಪ್ಲೋಮ ಹಾಗೂ ಡಿಗ್ರಿ ಅಭ್ಯರ್ಥಿಗಳು ತರಬೇತಿ ಪಡೆಯಲು ಅರ್ಹರಾಗಿರುತ್ತಾರೆ. ಅಭ್ಯರ್ಥಿಯ ಪ್ರಾಯ 18ರಿಂದ 35 ವರ್ಷದ ಮಿತಿಯೊಳಗಾಗಿರಬೇಕು.

ನೇರ ಆಯ್ಕೆಗೆ ಅಂಕಪಟ್ಟಿ(ಎಸ್‌ಎಸ್‌ಎಲ್‌ಸಿ, ಪಿಯುಸಿ, ಐಟಿ‌ಐ, ಡಿಪ್ಲೋಮ ಹಾಗೂ ಡಿಗ್ರಿ), ಜಾತಿ, ಆದಾಯ ಪ್ರಮಾಣಪತ್ರ, ಆಧಾರ್ ಕಾರ್ಡ್, 5 ಫೋಟೊ ಇತ್ಯಾದಿ ಮೂಲ ದಾಖಲೆಗಳೊಂದಿಗೆ ಮಾರ್ಚ್ 22 ರಂದು ಸಂಜೆ 5 ಗಂಟೆಯೊಳಗೆ CIPET, ನಂ. 437/A , ಹೆಬ್ಬಾಳ್ ಇಂಡಸ್ಟ್ರೀಯಲ್ ಏರಿಯಾ, ಮೈಸೂರು -570016 ಇಲ್ಲಿ ಹಾಜರಿರಬೇಕು.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ;–0821-2510618, 2511903, ಮೊಬೈಲ್ ಸಂಖ್ಯೆ 9632688884/ 8762342432/ 9466146001 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

Comments are closed.