ಕರಾವಳಿ

ಗಾಂಜಾ ಮಾರಾಟಕ್ಕೆ ಯತ್ನ : 1 ಕೆ.ಜಿ ಗಾಂಜಾ ಸಹಿತಾ ಆರೋಪಿ ಸೆರೆ

Pinterest LinkedIn Tumblr

ಮಂಗಳೂರು : ಗಾಂಜಾ ಮಾರಾಟ ಮಾಡಲು ಸಾಗಟ ಮಾಡುತ್ತಿದ್ದ ಆರೋಪಿಯನ್ನು ಉಳ್ಳಾಲ ಠಾಣಾ ಹಾಗೂ ಮಂ.ದಕ್ಷಿಣ ಉಪ ವಿಭಾಗದ ರೌಡಿ ನಿಗ್ರಹ ದಳದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ತಲಪಾಡಿ ಸಮೀಪದ ಕೆ.ಸಿ.ರೋಡ್ ನಿವಾಸಿ ಮುನಾವರ್ (32 ) ಬಂಧಿತ ಆರೋಪಿ

ಆರೋಪಿಯು ಗಾಂಜಾವನ್ನು ಕೇರಳ ರಾಜ್ಯದ ಕಡೆಯಿಂದ ಖರೀದಿಸಿ ಉಳ್ಳಾಲ ಪೊಲೀಸ್ ಠಾಣಾ ಸರಹದ್ದಿನ ತಲಪಾಡಿ ಎಂಬಲ್ಲಿ ಗಾಂಜಾ ಮಾರಾಟ ಮಾಡಲು ಸಾಗಟ ಮಾಡುತ್ತಿದ್ದ ಸಂದರ್ಭ ಪೊಲೀಸರು ಆರೋಪಿಯನ್ನು ಸೊತ್ತು ಸಮೇತಾ ಬಂಧಿಸಿದ್ದಾರೆ.ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಆರೋಪಿ ಬಳಿಯಿಂದ ಸುಮಾರು 1 ಕೆ.ಜಿ 50 ಗ್ರಾಮ್ ತೂಕದ ಗಾಂಜಾ, ಮೋಟಾರು ಸೈಕಲ್‌, ಮೊಬೈಲ್ ಸ್ವಾಧೀನಪಡಿಸಲಾಗಿದ್ದು, ವಶಪಡಿಸಿರುವ ಸೊತ್ತುಗಳ ಒಟ್ಟು ಮೌಲ್ಯ ರೂ 20,000/- ಆಗಿರುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗಾಂಜಾದ ಮೂಲದ ಬಗ್ಗೆ ತನಿಖೆಯನ್ನು ತೀವ್ರಗೊಳಿಸಲಾಗಿದೆ. ಆರೋಪಿತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಆರೋಪಿತನಿಗೆ 15 ದಿನಗಳ ನ್ಯಾಯಾಂಗಬಂಧನ ವಿಧಿಸಲಾಗಿದೆ.

ಮಂಗಳೂರು ದಕ್ಷಿಣ ಉಪ ವಿಭಾಗದ ಸಹಾಯಕ ಪೊಲೀಸ್‌ ಅಯುಕ್ತರಾದ ರಾಮರಾವ್‌ ರವರ ಸೂಚನೆಯಂತೆ ನಡೆದ ಪತ್ತೆ ಕಾರ್ಯದಲ್ಲಿ ಉಳ್ಳಾಲ ಪೊಲೀಸ್‌ ಠಾಣಾ ಪೊಲೀಸ್‌ ನಿರೀಕ್ಷಕರಾದ ಗೋಪಿಕೃಷ್ಣ ಕೆ.ಅರ್‌, ಠಾಣಾ ಪಿಎಸ್‌ಐ ಗುರಪ್ಪ ಕಾಂತಿ, ಹಾಗೂ ಸಿಬ್ಬಂದಿಗಳು ಸಹಕರಿಸಿರುತ್ತಾರೆ.

Comments are closed.