ಕರ್ನಾಟಕ

ಧಾರವಾಡದಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿತ: ಇಬ್ಬರ ಸಾವು, ಹಲವರು ಅವಶೇಷಗಳಡಿ ಸಿಲುಕಿದ ಶಂಕೆ

Pinterest LinkedIn Tumblr

ಧಾರವಾಡ: ನಿರ್ಮಾಣದ ಹಂತದ ಮೂರು ಅಂತಸ್ತಿನ ಕಟ್ಟದ ಕುಸಿದಿದ್ದು ಪರಿಣಾಮ 2 ಸಾವನ್ನಪ್ಪಿದ್ದು 50ಕ್ಕೂ ಹೆಚ್ಚು ಜನರು ಅವಶೇಷದಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.

ಇಲ್ಲಿನ ಕುಮಾರೇಶ್ವರ ನಗರ ಬಡಾವಣೆಯ ಬಳಿಯ ನಿರ್ಮಾಣ ಹಂತದ ಕಟ್ಟಡ ಕುಸಿದಿದೆ. ಕಟ್ಟಡ ಅವಶೇಷಗಳಡಿ 100ಕ್ಕೂ ಹೆಚ್ಚು ಜನರು ಸಿಲುಕಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಐದೂವರೆ ಗುಂಟೆ ಜಾಗದಲ್ಲಿ ಕಟ್ಟಡ ನಿರ್ಮಾಣಗೊಳ್ಳುತ್ತಿತ್ತು. ನೆಲಮಹಡಿಯ ಮೇಲೆ ಹೆಚ್ಚುವರಿ ಮಹಡಿಗಳನ್ನು ಕಟ್ಟಲಾಗುತ್ತಿತ್ತು ಎನ್ನಲಾಗಿದೆ.

ಒಟ್ಟು ನಾಲ್ಕು ಅಂತಸ್ತುಗಳ ಕಟ್ಟಡ ಇದಾಗಿದ್ದು, ನೆಲಮಹಡಿ, ಮೊದಲ ಮಹಡಿ ಹಾಗೂ ಎರಡನೇ ಮಹಡಿಗಳಲ್ಲಿ ಅಂಗಡಿ ಮುಂಗಟ್ಟುಗಳು ಕಾರ್ಯಾರಂಭಿಸಿದ್ದವು ಎನ್ನಲಾಗಿದೆ. ಅಪೋಲೋ ಫಾರ್ಮಸಿಯ ಔಷಧ ಅಂಗಡಿ, ಟೀ ಅಂಗಡಿ, ಹೋಟೆಲ್​, ರೊಟ್ಟಿ ಅಂಗಡಿ, ಸಲೂನ್​ ಸೇರಿ 10ಕ್ಕೂ ಹೆಚ್ಚು ಕಟ್ಟಡಗಳಿದ್ದವು. ಈ ಅಂಗಡಿ, ಹೋಟೆಲ್​ಗಳಲ್ಲಿ ಸಾಕಷ್ಟು ಜನರು ಇದ್ದರು. ಹಾಗಾಗಿ ಸಾವುನೋವು ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಸ್ಥಳೀಯರು ಸದ್ಯ ಇಬ್ಬರನ್ನು ರಕ್ಷಿಸಿದ್ದಾರೆ. ಅಗ್ನಿಶಾಮಕ ದಳ ಸಿಬ್ಬಂದಿ, ಪೊಲೀಸರು ತಂಡ ಸ್ಥಳಕ್ಕೆ ಬಂದಿದ್ದು ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ. ಸದರಿ ಕಟ್ಟಡ ಮಾಜಿ ಸಚಿವ ವಿನಯ್​ ಕುಲಕರ್ಣಿ ಅವರ ಸಂಬಂಧಿ ಶಿಂತ್ರೆ ಎಂಬುವವರಿಗೆ ಸೇರಿದ್ದು ಎನ್ನಲಾಗಿದೆ.

7-8 ಪಾಲುದಾರರು ಇದ್ದರು: ವಿನಯ್​ ಕುಲಕರ್ಣಿ
ಸದರಿ ಕಟ್ಟಡವು 7ರಿಂದ 8 ಜನರ ಪಾಲುದಾರಿಕೆಯಲ್ಲಿ ನಿರ್ಮಾಣಗೊಳ್ಳುತ್ತಿತ್ತು. ಆ ಪಾಲುದಾರರಲ್ಲಿ ಶಿಂತ್ರೆ ಕೂಡ ಒಬ್ಬರು ಅಷ್ಟೇ. ಅವರೇ ಆ ಕಟ್ಟಡದ ಸಂಪೂರ್ಣ ಮಾಲೀಕರಲ್ಲ ಎಂದು ಮಾಜಿ ಸಚಿವ ವಿನಯ್​ ಕುಲಕರ್ಣಿ ಸ್ಪಷ್ಟಪಡಿಸಿದ್ದಾರೆ.

8 ಜೆಸಿಬಿಗಳ ಬಳಕೆ
ಸ್ಥಳಕ್ಕೆ ಬಂದಿರುವ ಅಂದಾಜು 8ಕ್ಕೂ ಹೆಚ್ಚು ಜೆಸಿಬಿಗಳ ಸಹಾಯದಿಂದ ಕಟ್ಟಡದ ಅವಶೇಷಗಳನ್ನು ತೆರವುಗೊಳಿಸಲಾಗುತ್ತಿದೆ. ಇದುವರೆಗೆ ಹಲವರನ್ನು ರಕ್ಷಿಸಲಾಗಿದ್ದು, ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ. ಮೋಟಾರ್​ಬೈಕ್​ ಸೇರಿ ಹಲವು ದ್ವಿಚಕ್ರ ವಾಹನಗಳು ಅವಶೇಷಗಳಡಿ ಸಿಲುಕಿಕೊಂಡಿವೆ ಎನ್ನಲಾಗಿದೆ.

Comments are closed.