ಕರಾವಳಿ

ಸಂಚಾರಿ ನಿಯಯ ಉಲ್ಲಂಘನೆ ವಿರುದ್ಧ ಪೊಲೀಸ್ ಕಾರ್ಯಾಚರಣೆ : 300ಕ್ಕೂ ಹೆಚ್ಚು ಪ್ರಕರಣ ದಾಖಲು

Pinterest LinkedIn Tumblr

ಮಂಗಳೂರು, ಮಾರ್ಚ್.15: ನಗರದಲ್ಲಿ ಸಂಚಾರಿ ನಿಯಯ ಉಲ್ಲಂಘನೆ ವಿರುದ್ಧ ಕಾರ್ಯಾಚರಣೆ ಆರಂಭಿಸಿರುವ ಮಂಗಳೂರು ನಗರ ಸಂಚಾರಿ ಪೊಲೀಸರು ಜೀಬ್ರಾ ಕ್ರಾಸ್ ಉಲ್ಲಂಘನೆ ಮಾಡಿದ 138 ಪ್ರಕರಣ ಹಾಗೂ ಕರ್ಕಶ ಹಾರ್ನ್ ಸಹಿತ ಚಾಲನೆ ಮಾಡುತ್ತಿದ್ದ 40 ಪ್ರಕರಣಗಳನ್ನು ಗುರುವಾರ ಪತ್ತೆ ಹಚ್ಚಿ ಕ್ರಮ ಕೈಗೊಂಡಿದ್ದಾರೆ.

ನಗರದೆಲ್ಲೆಡೆ ಎಗ್ಗಿಲ್ಲದೆ ನಡೆಯುತ್ತಿದ್ದ ಜೀಬ್ರಾ ಕ್ರಾಸ್ ಉಲ್ಲಂಘನೆ ಹಾಗೂ ವಾಹನಗಳ ಕರ್ಕಶ ಹಾರ್ನ್​ಗಳ ಬಗ್ಗೆ ಪೊಲೀಸರು ಕ್ರಮ ಜರುಗಿಸಿದ್ದಾರೆ. ಸುಮಾರು 40 ವಾಹನಗಳ ಹಾರ್ನ್ ಕಳಚಿದ್ದಾರೆ.

ಇಂದು ನಡೆದ ಕಾರ್ಯಾಚರಣೆಯಲ್ಲಿ ಸಂಚಾರ ನಿಯಮವನ್ನು ಉಲ್ಲಂಘನೆ ಮಾಡಿರುವ ಬಸ್ಸುಗಳ ವಿರುದ್ದ ವಿಶೇಷ ಕಾರ್ಯಚಾರಣೆ ಯನ್ನು ನಡೆಸಿ ಒಟ್ಟು 271 ಪ್ರಕರಣಗಳನ್ನು ದಾಖಲಿಸಿ ಒಟ್ಟು 32,600/- ರೂ ದಂಡವನ್ನು ವಸೂಲಿ ಮಾಡಲಾಗಿದೆ.

ಇದರಲ್ಲಿ ಕರ್ಕಶ ಹಾರ್ನ್ ಬಳಸಿದವರ ವಿರುದ್ದ 95 ಪ್ರಕರಣ, ಅತೀ ವೇಗ ಹಾಗೂ ಅಜಾಗರುಕತೆಯಿಂದ ಬಸ್ಸನ್ನು ಚಲಾಯಿಸಿದವರ ವಿರುದ್ದ 38 ಪ್ರಕರಣ, ಪ್ರಯಾಣಿಕರಿಗೆ ಟಿಕೇಟ್ ನೀಡದೇ ಇರುವ ಕುರಿತು 79 ಪ್ರಕರಣ, ಫುಟ್ ಬೋರ್ಡ್ ನ ಮೇಲೆ ಪ್ರಯಾಣ ಮಾಡಿದ ಬಸ್ಸುಗಳ ಮೇಲೆ 9 ಪ್ರಕರಣ, ಇತರೆ 50 ಪ್ರಕರಣವನ್ನು ದಾಖಲಿಸಲಾಗಿರುತ್ತದೆ ಎಂದು ಸಂಚಾರಿ ವಿಭಾಗದ ಡಿಸಿಪಿಯವರು ತಿಳಿಸಿರುತ್ತಾರೆ.

Comments are closed.