ಕರಾವಳಿ

ಶಿರ್ವ: ಬೈಕಿನಲ್ಲಿ ತೆರಳುತ್ತಿದ್ದಾಗ ಹಾರ್ಟ್ ಅಟ್ಯಾಕ್: ಮುಖ್ಯಶಿಕ್ಷಕ ಮೃತ

Pinterest LinkedIn Tumblr

ಉಡುಪಿ: ಬೈಕಿನಲ್ಲಿ ಉಡುಪಿಗೆ ತೆರಳುತ್ತಿದ್ದ ವೇಳೆ ಮುಖ್ಯ ಶಿಕ್ಷಕರೊಬ್ಬರು ಹೃದಯಾಘಾತವಾಗಿ ಮೃತಪಟ್ಟ ದಾರುಣ ಘಟನೆ ಉಡುಪಿ ಜಿಲ್ಲೆ ಶಂಕರಪುರದ ಸಾಲ್ಮರ ಬಳಿ ಗುರುವಾರ ಸಂಭವಿಸಿದೆ.

ಬಂಟಕಲ್ಲು ಶ್ರೀ ದುರ್ಗಾಪರಮೇಶ್ವರಿ ಹಿ.ಪ್ರಾ.ಶಾಲೆಯ ಮುಖ್ಯ ಶಿಕ್ಷಕ ಚೋಮ ನಾಯ್ಕ (46) ಮೃತ ದುರ್ದೈವಿ.

ಉಡುಪಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಕರ್ತವ್ಯ ನಿಮಿತ್ತ ತೆರಳುತ್ತಿದ್ದ ವೇಳೆ ಶಂಕರಪುರ ಸಾಲ್ಮರದ ಬರೋಡಾ ಬ್ಯಾಂಕ್‌ ಬಳಿ ತೀವ್ರ ಎದೆನೋವು ಕಾಣಿಸಿಕೊಂಡಿದ್ದು ಬೈಕ್‌ ನಿಲ್ಲಿಸಿ ಸಹಾಯಕ್ಕಾಗಿ ಸ್ಥಳೀಯರನ್ನು ಕೂಗಿದ್ದು ಸ್ಥಳೀಯರು ಅವರನ್ನು ಆ್ಯಂಬುಲೆನ್ಸ್‌ನಲ್ಲಿ ಶಿರ್ವ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯುವ ಮಾರ್ಗ ಮದ್ಯೆ ಮೃತಪಟ್ಟಿದ್ದಾರೆ.

ಮೂಲತಃ ಕಾಸರಗೋಡು ಜಿಲ್ಲೆಯ ಕಾಟುಕುಕ್ಕೆ ಕುರಿಯತಡ್ಕ ನಿವಾಸಿಯಾಗಿದ್ದ ಅವರು ಬೆಳ್ಮಣ್‌ ಜಂತ್ರ ಬಳಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಮೃತರು ಗೌರವ ಶಿಕ್ಷಕಿಯಾಗಿರುವ  ಪತ್ನಿ ಮತ್ತು ಎರಡನೇ ತರಗತಿ ಓದುತ್ತಿರುವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

Comments are closed.