ಕರಾವಳಿ

ದ.ಕ.ಜಿಲ್ಲೆ :ಮತದಾನಕ್ಕೆ ಆಮಿಷ ಆಮಿಷ ಒಡ್ಡುವವರ ವಿರುದ್ಧ ಕಾರ್ಯಾಚರಣೆಗೆ 73 ಫ್ಲಯಿಂಗ್ ಸ್ಕ್ವಾಡ್

Pinterest LinkedIn Tumblr

ಮಂಗಳೂರು ಮಾರ್ಚ್ 12 : ದಿನಾಂಕ 10-03-2019ರಂದು ಲೋಕಸಭಾ ಸಾರ್ವತ್ರಿಕ ಚುನಾವಣೆ ಘೋಷಣೆಯಾಗಿದ್ದು, ಚುನಾವಣಾ ಪ್ರಕ್ರಿಯೆಯು ಜ್ಯಾರಿಯಲ್ಲಿರುವಾಗ, ಮತದಾನದ ಹಕ್ಕನ್ನು ಪ್ರೇರೇಪಿಸುವ ದೃಷ್ಟಿಯಿಂದ, ಯಾವುದೇ ವ್ಯಕ್ತಿಯಿಂದ ಹಣದ ಅಥವಾ ಇನ್ಯಾವುದೇ ರೂಪದಲ್ಲಿ ಉಡುಗೊರೆಯನ್ನು ಪಡೆದದ್ದೇ ಆದಲ್ಲಿ ಭಾರತೀಯ ದಂಡ ಪ್ರಕ್ರಿಯಾ ಸಂಹಿತೆ 1960ರ ಕಲಂ 171 ಬಿ ರನ್ವಯ ಒಂದು ವರ್ಷದ ವರೆಗಿನ ಸೆರೆಮನೆ ವಾಸ ದಂಡ ಅಥವಾ ಇವೆರಡನ್ನೂ ಒಳಗೊಂಡಿರುವ ಶಿಕ್ಷೆಗೆ ಗುರಿಯಾಗುತ್ತಾರೆ ಎಂದು ಜಿಲ್ಲಾಧಿಕಾರಿ ಶಸಿಕಾಂತ್ ಸೆಂಥಿಲ್ ತಿಳಿಸಿದ್ದಾರೆ.

ಇದಲ್ಲದೇ ಯಾವುದೇ ವ್ಯಕ್ತಿಯು ಮತದಾರರನ್ನಾಗಲೀ, ಅಭ್ಯರ್ಥಿಯನ್ನಾಗಲೀ ಅಥವಾ ಇತರೆ ಯಾವುದೇ ವ್ಯಕ್ತಿಗೆ ಬೆದರಿಕೆಯೊಡ್ಡಿದಲ್ಲಿ, ಗಾಯಗೊಳಿಸಿದಲ್ಲಿ ಕಲಂ 171 ಸಿ ರನ್ವಯ ರನ್ವಯ ಒಂದು ವರ್ಷದ ವರೆಗಿನ ಸೆರೆಮನೆ ವಾಸ ದಂಡ ಅಥವಾ ಇವೆರಡನ್ನೂ ಒಳಗೊಂಡಿರುವ ಶಿಕ್ಷೆಗೆ ಗುರಿಯಾಗುತ್ತಾರೆ.

ಮತದಾನ ಕೋರಿಕೆಯ ದೃಷ್ಟಿಯಿಂದ ಲಂಚ ನೀಡುವ ಮತ್ತು ತೆಗೆದುಕೊಳ್ಳುವ ವ್ಯಕ್ತಿಗಳ ವಿರುದ್ಧ , ಬೆದರಿಕೆ ಹಾಗೂ ಆಮಿಷ ಒಡ್ಡುವವರಿ ವಿರುದ್ದ ಪ್ರಕರಣಗಳನ್ನು ದಾಖಲಿಸಲು 17-ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 73 ಫ್ಲಯಿಂಗ್ ಸ್ಕ್ವಾಡ್ ಗಳನ್ನು ರಚಿಸಲಾಗಿರುತ್ತದೆ.

ಆದುದರಿಂದ ಈ ನಿಟ್ಟಿನಲ್ಲಿ ಸಾರ್ವಜನಿಕರು ಮತದಾನ ಕೋರುವ ಪ್ರಕ್ರಿಯೆಯಲ್ಲಿ ಲಂಚ ನೀಡುವುದರಿಂದ ಹಾಗೂ ಪಡೆಯುವುದರಿಂದ ದೂರವಿರಲು ಕೋರಿದೆ. ಹಾಗೆಯೇ ಲಂಚ ನೀಡುವುದು, ಆಮಿಷ ಒಡ್ಡುವುದು ಬೆದರಿಕೆ ಹಾಕುವುದು ತಮ್ಮ ಗಮನಕ್ಕೆ ಬಂದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರದಲ್ಲಿ 24 x 7 ಕಾರ್ಯ ನಿರ್ವಹಿಸುತ್ತಿರುವ ಕಂಟ್ರೋಲ್ ರೂಮ್ ನ ಉಚಿತ ಕರೆ ಸಂಖ್ಯೆ 1950 ಕ್ಕೆ ಕರೆ ಮಾಡಬಹುದಾಗಿದೆ ಎಂದು ದ.ಕ. ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ತಮ್ಮ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Comments are closed.