ಮನೋರಂಜನೆ

ಚುನಾವಣಾ ಸಮರಕ್ಕಾಗಿ ತೆಲುಗಿನ ಸೂಪರ್ ಸ್ಟಾರ್ ಮಹೇಶ್ ಬಾಬುರ ನೂತನ ಚಿತ್ರದ ಆಫರ್ ತಿರಸ್ಕರಿಸಿದ ಉಪೇಂದ್ರ

Pinterest LinkedIn Tumblr

ಬೆಂಗಳೂರು: ತಮ್ಮ ಪ್ರಜಾಕೀಯ ಪಕ್ಷದ ಮೂಲಕ ಲೋಕಸಭಾ ಚುನಾವಣಾ ಸಮರಕ್ಕೆ ಸಿದ್ಧರಾಗಿರುವ ನಟ ರಿಯಲ್ ಸ್ಟಾರ್ ಉಪೇಂದ್ರ ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು ಅವರ ಬಹು ನಿರೀಕ್ಷಿತ ಚಿತ್ರದ ಆಫರ್ ಗೆ ನೋ ಎಂದು ಹೇಳಿದ್ದಾರೆ.

ಹೌದು.. ಪ್ರಸ್ತುತ ಪ್ರಜಾಕೀಯದಲ್ಲಿ ಬಿಸಿಯಾಗಿರುವ ನಟ ಉಪೇಂದ್ರ ಚಿತ್ರೀಕರಣಕ್ಕೆ ತಾತ್ಕಾಲಿಕ ವಿರಾಮ ಹಾಕಿದ್ದು, ಇದೇ ಕಾರಣಕ್ಕೆ ತಮ್ಮದೇ ಚಿತ್ರಗಳನ್ನು ಮುಂದೂಡಿದ್ದಾರೆ ಎನ್ನಲಾಗಿದೆ. ಅಲ್ಲದೇ ಪ್ರಜಾಕೀಯದತ್ತ ಗಮನ ಕೇಂದ್ರೀಕರಿಸುವ ನಟ ಉಪೇಂದ್ರ ತೆಲುಗಿನ ಸೂಪರ್ ಸ್ಟಾರ್ ಮಹೇಶ್ ಬಾಬು ಅವರ ನೂತನ ಚಿತ್ರದ ಆಫರ್ ಅನ್ನೂ ಕೂಡ ನಯವಾಗಿ ತಿರಸ್ಕರಿಸಿದ್ದಾರೆ.

ನಿರ್ದೇಶಕ ಅನಿಲ್ ರವಿಪುಡಿ ನಿರ್ದೇಶನ ಈ ಬಹು ನಿರೀಕ್ಷಿತ ಚಿತ್ರದಲ್ಲಿ ನಟ ಮಹೇಶ್ ಬಾಬು ಎದುರಿಗೆ ಖಡಕ್ ಪಾತ್ರದ ಆಫರ್ ನೀಡಲಾಗಿದೆಯಾದರೂ ಇದಕ್ಕೆ ಉಪೇಂದ್ರ ನೋ ಎಂದಿದ್ದಾರೆ. ಅಲ್ಲದೇ ಲೋಕಸಭಾ ಚುನಾನಣೆ ಮುಗಿಯುವವರೆಗೂ ತಾವು ಯಾವುದೇ ಹೊಸ ಚಿತ್ರಗಳಿಗೆ ಸಹಿ ಹಾಕುವುದಿಲ್ಲ ಎಂದು ಉಪೇಂದ್ರ ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಇನ್ನು ಅನಿಲ್ ರವಿ ಪುಡಿ ನಿರ್ದೇಶನದ ಈ ಚಿತ್ರದಲ್ಲಿ ಮಹೇಶ್ ಬಾಬು ಖಡಕ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಇದೇ ಚಿತ್ರದ ನಾಯಕ ನಟಿಯ ಪಾತ್ರಕ್ಕಾಗಿ ಈ ಹಿಂದೆ ಚಿತ್ರದ ನಿರ್ಮಾಪಕರು ನಟಿ ಸಾಯಿ ಪಲ್ಲವಿ ಅವರನ್ನು ಸಂಪರ್ಕಿಸಿದ್ದರು. ಆದರೆ ಚಿತ್ರದ ಪಾತ್ರವಿಷ್ಟವಾದರೂ ಚಿತ್ರದಲ್ಲಿ ಪಾತ್ರ ಕಾಲಾವಧಿ ಕೊಂಚವೇ ಇದೆ ಎಂದು ನಟಿ ಸಾಯಿಪಲ್ಲವಿ ಈ ಚಿತ್ರ ಬೇಡ ಎಂದು ಹೇಳಿದ್ದರು. ಇದೀಗ ಇದೇ ಪಾತ್ರಕ್ಕಾಗಿ ಚಿತ್ರತಂಡ ಕಿರಿಕ್ ನಟಿ ರಶ್ಮಿಕಾ ಮಂದಣ್ಣರನ್ನು ಸಂಪರ್ಕಿಸುತ್ತಿದೆ.

ಇನ್ನು ಇದೇ ಚಿತ್ರದ ಮತ್ತೊಂದು ಮಹಿಳಾ ಪೊಲೀಸ್ ಅಧಿಕಾರಿಯ ಪಾತ್ರಕ್ಕಾಗಿ ಚಿತ್ರತಂಡ ಖ್ಯಾತ ನಟೆ ವಿಜಯ ಶಾಂತಿ ಅವರನ್ನು ಸಂಪರ್ಕಿಸಿದ್ದು, ಅವರಿಂದ ಒಪ್ಪಿಗೆ ದೊರೆತ ಬಳಿಕ ಅವರ ಪಾತ್ರದ ಚಿತ್ರೀಕರಣ ಆರಂಭವಾಗಲಿದೆ ಎಂದು ಚಿತ್ರತಂಡ ಹೇಳಿದೆ.

Comments are closed.