ಕರಾವಳಿ

ಮಂಗಳೂರು ವಿಮಾನ ನಿಲ್ದಾಣದಲ್ಲಿ ದುಬೈ ಪ್ರಯಾಣಿಕರಿಬ್ಬರಿಂದ ಭಾರಿ ಪ್ರಮಾಣದ ಚಿನ್ನ ಮತ್ತು ವಿದೇಶಿ ಕರೆನ್ಸಿ ವಶ

Pinterest LinkedIn Tumblr

ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರಿಬ್ಬರು ಅಕ್ರಮವಾಗಿ ಸಾಗಿಸುತ್ತಿದ್ದ ಭಾರಿ ಪ್ರಮಾಣದ ಚಿನ್ನ ಮತ್ತು ವಿದೇಶಿ ಕರೆನ್ಸಿಗಳನ್ನು ಕಸ್ಟಮ್ಸ್​ನ ಏರ್ ಇಂಟೆಲಿಜೆನ್ಸ್ ವಿಭಾಗದ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಪ್ರತ್ಯೇಕ ಎರಡು ಪ್ರಕರಣದಲ್ಲಿ ಒಟ್ಟು 19,14 ಲಕ್ಷ ರೂ ಮೌಲ್ಯದ 579.98 ಗ್ರಾಂ ಚಿನ್ನ ಹಾಗೂ 18.10 ಲಕ್ಷ ರೂ. ವಿದೇಶಿ ಕರೆನ್ಸಿಯನ್ನು ಕಸ್ಟಮ್ಸ್​ನ ಏರ್ ಇಂಟೆಲಿಜೆನ್ಸ್ ವಿಭಾಗದ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ವಶಪಡಿಸಿಕೊಂಡಿದ್ದಾರೆ.

ಒಂದು ಪ್ರಕರಣದಲ್ಲಿ ದುಬೈಯಿಂದ ಬರುತ್ತಿದ್ದ ಪ್ರಯಾಣಿಕನೊಬ್ಬನನ್ನು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪರಿಶೀಲಿಸಿದಾಗ ವಿದೇಶೀ ಮೂಲದ 24 ಕ್ಯಾರೆಟ್ ಶುದ್ಧತೆಯ 232.62 ಗ್ರಾಂ (7.68 ಲಕ್ಷ ರೂ. ಮೌಲ್ಯ) ಚಿನ್ನವನ್ನು ಬೆಳ್ಳಿ ಲೇಪನದ ವೃತ್ತಾಕಾರದ ಪ್ಲೇಟ್‌ನಲ್ಲಿ ಟ್ರಾವೆಲ್ ಕುಕ್ಕರ್‌ನ ಒಳಗೆ ಅಡಗಿಸಿ ತಂದಿರುವುದು ಪತ್ತೆಯಾಗಿದೆ.

ಎರಡನೇ ಪ್ರಕರಣದಲ್ಲಿ 24 ಕ್ಯಾರೆಟ್ ಶುದ್ಧತೆಯ ವಿದೇಶಿ ಮೂಲದ ಹುಡಿ ರೂಪದ 317.360 ಗ್ರಾಂ (11.46 ಲಕ್ಷ ರೂ. ಮೌಲ್ಯ) ಚಿನ್ನವನ್ನು ಪ್ರಯಾಣಿಕನೋರ್ವ ಗುದದ್ವಾರದೊಳಗೆ ಇರಿಸಿಕೊಂಡು ಸಾಗಿಸುತ್ತಿದಿದ್ದು ಪತ್ತೆ ಮಾಡಲಾಗಿದೆ. ದುಬೈನಿಂದ ಬಂದ ಆರೋಪಿಯನ್ನು ತಪಾಸಣೆಗೊಳಪಡಿಸಿದಾಗ ಯುಎಸ್ ಡಾಲರ್, ಯೂರೋ, ಓಮಾನಿ ರಿಯಾ ಹಾಗೂ ಕುವೈಟ್ ದಿನಾರ್ ಕರೆನ್ಸಿಯನ್ನು ಅಕ್ರಮವಾಗಿ ಸಾಗಿಸುತ್ತಿದ್ದದನ್ನು ಕಸ್ಟಮ್ ಪೊಲೀಸರು ಪತ್ತೆ ಹಚ್ಚಿದ್ದಾರೆ.

Comments are closed.