ಕರಾವಳಿ

ಶಿವರಾತ್ರಿ ಕಾರ್ಯಕ್ರಮಕ್ಕೆ ಅಡ್ಡಿ : ಹಿಂದೂ ವಿರೋಧಿ ಪೊಲೀಸ್ ಅಧಿಕಾರಿಗಳ ವಿರುದ್ಧ ಶಿಸ್ತಕ್ರಮಕ್ಕೆ ಸಂಸದ ನಳಿನ್ ಆಗ್ರಹ

Pinterest LinkedIn Tumblr

ಮಂಗಳೂರು : ಮಂಗಳೂರು ನಗರದಲ್ಲಿ ಶಿವರಾತ್ರಿ ಆಚರಣೆ ಸಂದರ್ಭಯಕ್ಷಗಾನ ಮತ್ತು ಭಜನಾಕಾರ್ಯಕ್ರಮವನ್ನು ನಿಲ್ಲಿಸುವ ಮೂಲಕ ಕೆಲವು ಪೊಲೀಸ್ ಅಧಿಕಾರಿಗಳು ಉದ್ಧಟತನದಿಂದ ವರ್ತಿಸಿದ್ದಾರೆ. ಹಿಂದೂಗಳ ಆಚರಣೆಗೆ‌ಅಡ್ಡಿ ಪಡಿಸುವ ಅಧಿಕಾರಿಗಳ ಇಂತಹದರ್ಪದ ನೀತಿಯನ್ನು ಸಹಿಸಲು ಸಾಧ್ಯವಿಲ್ಲ. ಮೇಲಾಧಿಕಾರಿಗಳು ಈ ಬಗ್ಗೆ ತನಿಖೆ ನಡೆಸಿ ಹಿಂದೂ ವಿರೋಧಿ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಸಂಸದ ನಳಿನ್‌ಕುಮಾರ್ ಕಟೀಲ್ ಆಗ್ರಹಿಸಿದ್ದಾರೆ.

ಕಾವೂರು, ಪಾಂಡೇಶ್ವರ ಸಹಿತ‌ಎಲ್ಲ ಶಿವ ದೇವಾಲಯಗಳಲ್ಲಿ ಪ್ರತಿ ವರ್ಷ ಶಿವರಾತ್ರಿ ಕಾರ್ಯಕ್ರಮ ನಡೆಯುತ್ತದೆ.ಈ ಸಂದರ್ಭ ಶಾಂತಿಕಾಪಾಡಬೇಕಾದ ಪೊಲೀಸರೇಕಾರ್ಯಕ್ರಮಕ್ಕೆ‌ಅಡ್ಡಿ ಪಡಿಸುವ ಮೂಲಕ ಶಾಂತಿಕದಡಲು ಯತ್ನಿಸಿದ್ದಾರೆ.ಯಕ್ಷಗಾನದಂತಹ ಪವಿತ್ರಕಲೆಯನ್ನು‌ಅರ್ಧದಲ್ಲಿತಡೆದ ಪೊಲೀಸ್‌ಅಧಿಕಾರಿಯ ವಿರುದ್ಧಕ್ರಮ ಕೈಗೊಳ್ಳದಿದ್ದರೆ ಹೋರಾಟ ನಡೆಸುವುದು ಅನಿವಾರ್ಯ ವಾಗಬಹುದೆಂದು ಸಂಸದರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments are closed.