ಕರಾವಳಿ

ಸಂಸದ ನಳಿನ್ ಕುಮಾರ್ ಜೊತೆ ತೊಕ್ಕೊಟ್ಟು ಫ್ಲೈಓವರ್ ಕಾಮಗಾರಿ ವೀಕ್ಷಿಸಿದ ಕೇಂದ್ರ ಸಚಿವರ ಕಾರ್ಯದರ್ಶಿ ವೈಭವ್ ದಾಂಘೆ

Pinterest LinkedIn Tumblr

ಮಂಗಳೂರು, ಫೆಬ್ರವರಿ.28: ಕೇಂದ್ರ ರಸ್ತೆ ಸಾರಿಗೆ ಹಾಗೂ ರಾಷ್ಟ್ರೀಯ ಹೆದ್ದಾರಿ ಸಚಿವರ ಕಾರ್ಯದರ್ಶಿ ವೈಭವ ದಾಂಘೇ ಹಾಗೂ ಸಂಸದ ನಳಿನ್ ಕುಮಾರ್ ಕಟೀಲ್ ಇವರು ಜಂಟಿಯಾಗಿ ಗುರುವಾರ ತೊಕ್ಕೊಟು ಮೇಲ್ಸೇತುವೆ ಕಾಮಗಾರಿಯನ್ನು ವೀಕ್ಷಿಸಿದರು.

ಮಂಗಳೂರಿಗೆ ಇಂದು ಆಗಮಿಸಿದ್ದ ವೈಭವ್ ದಾಂಘೆಯವರು ಸಂಸದ ನಳಿನ್ ಕಟೀಲು ಹಾಗೂ ಸ್ಥಳಿಯ ಜನಪ್ರತಿನಿದಿಗಳು ಮತ್ತು ಸಂಬಂಧಪಟ್ಟ ಅಧಿಕಾರಿಗಳ ಜೊತೆ ತೊಕ್ಕೊಟ್ಟಿಗೆ ತೆರಳಿ ಮೇಲ್ಸೇತುವ ಕಾಮಗಾರಿಯನ್ನು ಪರಿಶೀಲಿಸಿದರು.

ಇವರೊಂದಿಗೆ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್, ಮಂಗಳೂರು ಮಂಡಲ ಬಿಜೆಪಿ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್, ಚಂದ್ರಹಾಸ್ ಉಳ್ಳಾಲ್, ಚಂದ್ರಶೇಖರ್, ರಾಮಚಂದ್ರ ಬೈಕಂಪಾಡಿ, ಸತೀಶ್ ಕುಂಪಲ, ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಧಿಕಾರಿಗಳ ಹಾಗೂ ನವಯುಗ ಕಂಪೆನಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Comments are closed.