ಕರಾವಳಿ

ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ : ಆರೋಪಿ ಅಂದರ್

Pinterest LinkedIn Tumblr

ಮಂಗಳೂರು : ಕಸಬಾ ಬೆಂಗ್ರೆಯ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವಿಸುತ್ತಿದ್ದ ಆರೋಪಿಯೋರ್ವನನ್ನು ಪಣಂಬೂರು ಠಾಣಾ ಪೊಲೀಸರು ಬಂಧಿಸಿ ಎನ್.ಡಿ.ಪಿ.ಎಸ್ ಆಕ್ಟ್ ರಂತೆ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.

ಕಸಬಾ ಬೆಂಗ್ರೆ ನಿವಾಸಿ ಮೊಯಿದ್ದಿನ್ ಶಫೀಜ್ (19) ಬಂಧಿತ ಆರೋಪಿ.

ಆರೋಪಿಯು ದಿನಾಂಕ 27-02-2019 ರಂದು ಪಣಂಬೂರು ಠಾಣಾ ವ್ಯಾಪ್ತಿಯ ಕಸಬಾ ಬೆಂಗ್ರೆ ಯೂಸೂಫ್ ಸ್ಟೋರ್ ಬಳಿ ಗಾಂಜಾ ಅಮಲು ಪದಾರ್ಥವನ್ನು ಸೇವಿಸುತ್ತಿದ್ದ ಸಂದರ್ಭ ಪೊಲೀಸ್ ಉಪನಿರೀಕ್ಷಕರಾದ ಉಮೇಶ್ ಕುಮಾರ್ ಎಮ್.ಎನ್ ಹಾಗೂ ಸಿಬ್ಬಂದಿಗಳು ಬಂಧಿಸಿದ್ದಾರೆ.

ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀನಿವಾಸ್ ಗೌಡ. ಆರ್ .ಐ.ಪಿ.ಎಸ್ ಇವರ ಮಾರ್ಗದರ್ಶನದಂತೆ ನಡೆದ ಕಾರ್ಯಾಚರಣೆಯಲ್ಲಿ ಪಣಂಬೂರು ಠಾಣಾ ಪಿಐ ರಫೀಕ್ ಕೆ.ಎಮ್ ನೇತೃತ್ವ್ವದಲ್ಲಿ ಪಿ.ಎಸ್.ಐ(ಕಾ.ಸು) ಶ್ರೀ ಉಮೇಶ್ ಕುಮಾರ್.ಎಂ.ಎನ್ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದರು.

Comments are closed.