ಪ್ರಮುಖ ವರದಿಗಳು

ಪುಲ್ವಾಮಾ ದಾಳಿಗೆ ಪ್ರತಿಕಾರ : ಉಗ್ರರ ನೆಲೆ ಮೇಲೆ 1000 ಕೆಜಿ ಬಾಂಬ್ ದಾಳಿ

Pinterest LinkedIn Tumblr

ನವದೆಹಲಿ ಫೆ.26: ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಭಾರತೀಯ ಸೇನೆಯ ಮೇಲೆ ನಡೆದಿದ್ದ ದಾಳಿಯ ಎರಡು ವಾರಗಳೊಳಗೆ ಭಾರತೀಯ ಸೇನೆಯು ಉಗ್ರರಿಗೆ ಪ್ರತ್ಯುತ್ತರ ನೀಡಿದೆ. ಪಾಕ್ ಅಕ್ರಮಿತ ಕಾಶ್ಮೀರದೊಳಗೆ ನುಗ್ಗಿ ವಾಯು ಸೇನಾ ವಿಮಾನಗಳು ಉಗ್ರ ನೆಲೆಗಳ ಮೇಲೆ ಎರ್ ಸರ್ಜಿಕಲ್ ಸ್ಟ್ರೈಕ್ ನಡೆಸಿದ ಘಟನೆ ಇಂದು ಮುಂಜಾನೆ ನಡೆದಿದೆ.

ಗಡಿ ನಿಯಂತ್ರಣಾ ರೇಖೆ ದಾಟಿದ ಭಾರತೀಯ ವಾಯುಸೇನೆಯು ಜೈಷ್-ಎ-ಮೊಹಮ್ಮದ್ ಸಂಘಟನೆಯ ಕ್ಯಾಂಪ್ ಗಳ ಮೇಲೆ 1000ಕೆಜಿ ತೂಕದ ಸುಮಾರು 10 ಬಾಂಬ್ ದಾಳಿ ನಡೆಸಿದೆ. ಈ ಮೂಲಕ ಉಗ್ರರು ನಡೆಸಿದ್ದ 350 ಕೆಜಿ ಸ್ಫೋಟಕ್ಕಕೆ 1000 ಕೆಜಿ ಬಾಂಬ್ ದಾಳಿ ನಡೆಸಿ ಪ್ರತೀಕಾರ ಪಡೆದಿದೆ.

ಲಭ್ಯವಾದ ಮಾಹಿತಿ ಅನ್ವಯ ಮಂಗಳವಾರ ಮುಂಜಾನೆ ಸುಮಾರು 3.48ಕ್ಕೆ ಭಾರತೀಯ ವಾಯುಸೇನೆಯು ಗಡಿ ನಿಯಂತ್ರಣಾ ರೇಖೆ ದಾಟಿದ ವಿರಾಜ್ ಫೈಟರ್ ಜೆಟ್ ಗಳು ಪಾಕಿಸ್ತಾನದ ರಾಡಾರ್ ವ್ಯವಸ್ಥೆಯನ್ನು ಜಾಮ್ ಗೊಳಿಸಿ ಜೈಶ್ ನ ಉಗ್ರ ಶಿಬಿರಗಳ ಮೇಲೆ 11000ಕೆಜಿ ತೂಕದ ಸುಮಾರು 10 ಬಾಂಬ್ ದಾಳಿ ನಡೆಸಿ ಸುರಕ್ಷಿತವಾಗಿ ತಮ್ಮ ಮೂಲ ನೆಲೆಗಳಿಗೆ ವಾಪಾಸು ಬಂದಿವೆ. ಕೇವಲ 21 ನಿಮಿಷಗಳ ಕಾಲ ನಡೆದ ಕ್ಷಿಪ್ರ ವಾಯುದಾಳಿಯಲ್ಲಿ ಭಾರತೀಯ ವಾಯುಸೇನೆಯ 12 ಮಿರಾಜ್ 2000 ಫೈಟರ್ ಜೆಟ್ ಗಳು ಭಾಗವಹಿಸಿದ್ದವು.

Comments are closed.