ಕರಾವಳಿ

ಮಂಗಳೂರು ಸಬ್ ಜೈಲಿಗೆ ನೂತನ ಪೊಲೀಸ್ ಕಮಿಷನರ್ ತಂಡ ದಾಳಿ : 7 ಮೊಬೈಲ್, 4 ಚಾಕು ವಶ

Pinterest LinkedIn Tumblr

ಮಂಗಳೂರು, ಫೆಬ್ರವರಿ 24: ಮಂಗಳೂರಿನ ನೂತನ ಪೊಲೀಸ್ ಕಮಿಷನರ್ ಸಂದೀಪ್ ಪಾಟೀಲ್ ಅವರು ಅಧಿಕಾರ ವಹಿಸಿಕೊಂಡ ಒಂದೇ ದಿನದಲ್ಲಿ ತಮ್ಮ ಪೊಲೀಸ್ ತಂಡದೊಂದಿಗೆ ರವಿವಾರ ಬೆಳಗ್ಗೆ ಜಿಲ್ಲಾ ಕಾರಾಗೃಹಕ್ಕೆ ದಾಳಿ ನಡೆಸಿ, ವಿವಿಧ ಸೆಲ್ ಗಳಲ್ಲಿ ತೀವ್ರ ತಪಾಸಣೆ ನಡೆಸಿದೆ.

ಜಿಲ್ಲಾ ಕಾರಾಗೃಹದಲ್ಲಿ ನಿರಂತರವಾಗಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಮಂಗಳೂರಿನ ನೂತನ ಪೊಲೀಸ್ ಕಮಿಷನರ್ ಆಗಿ ಅಧಿಕಾರ ವಹಿಸಿಕೊಂಡ ತಕ್ಷಣ ಸಂದೀಪ್ ಪಾಟೀಲ್ ಅವರ ನೇತ್ರತ್ವದಲ್ಲಿ ಇಬ್ಬರು ಡಿಸಿಪಿಗಳು ಹಾಗೂ ಪೊಲೀಸರ ತಂಡ ಜಿಲ್ಲಾ ಕಾರಾಗೃಹಕ್ಕೆ ಧಿಡೀರ್ ದಾಳಿ ನಡೆಸಿದ್ದಾರೆ.

ದಾಳಿ ಸಂದರ್ಭ ಕಾರಾಗೃಹದಲ್ಲಿ ತಪಾಸಣೆ ಮಾಡಿದಾಗ ವಿಚಾರಣಾಧೀನ ಕೈದಿಗಳು ಅಡಗಿಸಿಟ್ಟಿದ್ದ 7 ಮೊಬೈಲ್ ಫೋನ್‌ಗಳು, 4 ಚಾಕುಗಳು ಸಿಕ್ಕಿದ್ದು, ಇವುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕಾರ್ಯಾಚರಣೆಯಲ್ಲಿ ಡಿಸಿಪಿ, ಎಸಿಪಿ, ಇನ್ಸ್ ಪೆಕ್ಟರ್ ಗಳು ಸೇರಿದಂತೆ 60ಕ್ಕೂ ಹೆಚ್ಚು ಪೊಲೀಸರು ಪಾಲ್ಗೊಂಡಿದ್ದರು.

ಇಂದು ನಗರದ ಸಬ್ ಜೈಲಿಗೆ ನಡೆದ ದಾಳಿ ಸಂದರ್ಭದಲ್ಲಿ ಮೊಬೈಲ್ ಫೋನ್‌ಗಳು ಹಾಗೂ ಮಾರಕಾಸ್ತ್ರಗಳು ಸಿಕ್ಕಿದ್ದು, ಇದರ ಪತ್ತೆಗೆ ತನಿಖೆ ನಡೆಸಲಾಗುವುದು ಎಂದು ದಾಳಿ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಪೊಲೀಸ್ ಕಮಿಷನರ್ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

Comments are closed.