ಕರಾವಳಿ

ಪ್ರೇಯಸಿ ವಿಚಾರದಲ್ಲಿ ವಿದ್ಯಾರ್ಥಿಗೆ ಚೂರಿಯಿರಿತ ಪ್ರಕರಣ: ಇನ್ನೋರ್ವ ಆರೋಪಿ ಅರೆಸ್ಟ್!

Pinterest LinkedIn Tumblr

ಕುಂದಾಪುರ: ಇಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗೆ ಕಾಲೇಜ್ ಮೈದಾನದಲ್ಲೇ ಚೂರಿಯಿಂದ ಇರಿದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೋರ್ವ ಆರೋಪಿಯನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ.

ಕೋಟೇಶ್ವರ ಸಮೀಪದ ಹಳೆ‌ಅಳಿವೆ ನಿವಾಸಿ ಮಂಜ ಅಲಿಯಾಸ್ ಬೆಂಕಿ ಮಂಜ ಎಂಬಾತನೇ ಬಂಧಿತ ಆರೋಪಿ.

ಪದವಿಪೂರ್ವ ಕಾಲೇಜ್ ವಿದ್ಯಾರ್ಥಿಗಳ ನಡುವೆ ಹುಡುಗಿ ವಿಚಾರದಲ್ಲಿ ಹೊಡೆದಾಟ ನಡೆದಿತ್ತು. ಇದೇ ಹಿನ್ನೆಲೆಯಲ್ಲಿ ಅನುಪ್ ಎನ್ನುವ ವಿದ್ಯಾರ್ಥಿಯನ್ನು ಕೊಲ್ಲಲು ಕಾನೂನಿನೊಂದಿಗೆ ಸಂಘರ್ಷಕ್ಕಿಳಿದ ಬಾಲಕನೋರ್ವ ಮತ್ತು ಆತನ ಸ್ನೇಹಿತ ಮಂಜ ಹಾಗೂ ಇತರೆ ನಾಲ್ವರು ಸೇರಿ ಮಾಡಿದ ಉಪಾಯದಂತೆ ನ.29ರಂದು 9 ಗಂಟೇ ಸುಮಾರಿಗೆ ಕಾಲೇಜು ಮೈದಾನದಲ್ಲಿ ನಿಂತು ಕಾಯುತ್ತಿದ್ದಾಗ ಅಲ್ಲಿಗೆ ಬಂದ ಕಾನೂನಿನೊಂದಿಗೆ ಸಂಘರ್ಷಕ್ಕಿಳಿದ ಬಾಲಕ ಅನುಪ್ ಮೇಲೆ ಹಲ್ಲೆ ನಡೆಸಿ ಬಳಿಕ ಚೂರಿಯಿಂದ ಮನಸ್ಸೋ‌ಇಚ್ಚೆ ಇರಿದಿದ್ದ. ಅದೇ ವೇಳೆ ಇತರೇ ವಿದ್ಯಾರ್ಥಿಗಳು ಆಗಮಿಸಿದಾಗ ಅಲ್ಲಿಂದ ಆತ ತಪ್ಪಿಸಿಕೊಂಡಿದ್ದ ಎಂದು ಆರೋಪಿಸಲಾಗಿತ್ತು. ಪ್ರಕರಣದ ಬೆನ್ನತ್ತಿದ್ದ ಪೊಲೀಸರು ಕೆಲವೇ ದಿನಗಳಲ್ಲಿ ಬಾಲಕನನ್ನು ವಶಕ್ಕೆ ಪಡೆದು ಬಾಲನ್ಯಾಯಮಂಡಳಿಯೆದುರು ಹಾಜರುಪಡಿಸಿದ್ದರು. ಆತ ನೀಡಿದ ಮಾಹಿತಿಯಂತೆ ಇತರರ ವಿರುದ್ಧವೂ ಪ್ರಕರಣ ದಾಖಲಾಗಿದ್ದು ಎಲ್ಲರೂ ತಲೆಮರೆಸಿಕೊಂಡಿದ್ದರು.

(ಚೂರಿಯಿರತಕ್ಕೊಳಗಾದ ಅನುಪ್)

ಬೆಂಕಿ ಮಂಜನ ಚಲನವಲನದ ಬಗ್ಗೆ ನಿಗಾ ಇಟ್ಟಿದ್ದ ಕುಂದಾಪುರ ಪಿಎಸ್ಐ ಹರೀಶ್ ಆರ್. ನಾಯ್ಕ್ ಹಾಗೂ ಸಿಬ್ಬಂದಿಗಳಿಗೆ ಗುರುವಾರದಂದು ಬೆಂಕಿ ಮಂಜ ಕುಂದಾಪುರದಲ್ಲಿರುವುದು ತಿಳಿದಿದ್ದು ಶಾಸ್ತ್ರಿ ಸರ್ಕಲ್ ಬಳಿ ಆತನನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯವು ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಇದನ್ನೂ ಓದಿರಿ:

ಕಾಲೇಜ್ ಕ್ಯಾಂಪಸ್‌ನಲ್ಲೇ ವಿದ್ಯಾರ್ಥಿಗೆ ಮನಸ್ಸೋಇಚ್ಚೆ ಚೂರಿ ಇರಿದು ಪರಾರಿಯಾದ ‘ಯಮ’!

‘ಪ್ರೇಯಸಿಗಾಗಿ 307’; ವಿದ್ಯಾರ್ಥಿಗೆ ಚೂರಿಯಿರಿದ ಪ್ರಕರಣದಲ್ಲಿ ಓರ್ವ ವಶಕ್ಕೆ

Comments are closed.