ಕುಂದಾಪುರ : ಇಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗೆ ಕಾಲೇಜ್ ಮೈದಾನದಲ್ಲೇ ಚೂರಿಯಿಂದ ಇರಿದು ಪರಾರಿಯಾಗಿದ್ದ ಅದೇ ಕಾಲೇಜಿನ 17 ವರ್ಷ ಪ್ರಾಯದ ಹಳೆ ವಿದ್ಯಾರ್ಥಿ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನ ಪೊಲೀಸರು ಸೋಮವಾರ ಕರೆತಂದು ಉಡುಪಿ ಬಾಲ ನ್ಯಾಯಮಂಡಳಿಗೆ ಒಪ್ಪಿಸಿದ್ದಾರೆ. ಅನುಪ್ ಎನ್ನುವ ವಿದ್ಯಾರ್ಥಿ ಗಂಭೀರ ಇರಿತಕ್ಕೊಳಗಾಗಿ ಆಸ್ಪತ್ರೆ ಸೇರಿದ್ದ.
ಕೊಪ್ಪಳ ಜಿಲ್ಲೆ, ಕುಷ್ಟಗಿಯ ತುಗಲ್ ದೋಣಿ ಎಂಬಲ್ಲಿ ತನ್ನ ಸಂಬಂಧಿಯ ಮನೆಯಲ್ಲಿದ್ದ ಬಾಲಕನನ್ನು ಕರೆತಂದು ಪೊಲೀಸರು ವಿಚಾರಣೆ ನಡೆಸಿದ್ದು ಆತ ಮಹತ್ವದ ಹಲವು ಸಂಗತಿಗಳನ್ನು ಪೊಲೀಸರೆದುರು ಒಪ್ಪಿಕೊಂಡಿದ್ದಾನೆ.
(ಚೂರಿಯಿರಿತಕ್ಕೊಳಗಾಗಿದ್ದ ಅನುಪ್ ಶೇರಿಗಾರ್)
ಪದವಿಪೂರ್ವ ಕಾಲೇಜ್ ವಿದ್ಯಾರ್ಥಿಗಳ ನಡುವೆ ಬಾಲಕನ ಪ್ರೇಯಸಿ ವಿಚಾರದಲ್ಲಿ ಹೊಡೆದಾಟ ನಡೆದಿತ್ತು. ಇದೇ ಹಿನ್ನೆಲೆಯಲ್ಲಿ ಅನುಪ್ ಎನ್ನುವ ವಿದ್ಯಾರ್ಥಿಯನ್ನು ಕೊಲ್ಲಲು ಕೋಟೇಶ್ವರದ ಸಂಘಟನೆಯೊಂದರಲ್ಲಿ ಸಕ್ರೀಯನಾದ ಯುವಕನೊಬ್ಬ ಹಾಗೂ ಇತರೆ ನಾಲ್ವರು ಸೇರಿ ಸ್ಕೆಚ್ ರೂಪಿಸಿದ್ದರು. ಅದರಂತೆಯೇ ಮಾರನೇ ದಿನ ಕಾಲೇಜಿಗೆ ಬಂದ ಬಾಲಕನಿಗೆ ಅನುಪ್ ಸಿಕ್ಕಿರಲಿಲ್ಲ. ನ.೨೯ರಂದು ಬೆಳಿಗ್ಗೆ ೯ ಗಂಟೇ ಸುಮಾರಿಗೆ ಕಾಲೇಜು ಮೈದಾನದಲ್ಲಿ ನಿಂತು ಕಾಯುತ್ತಿದ್ದಾಗ ಅಲಿಗೆ ಬಂದ ಅನುಪ್ ಮೇಲೆ ಹಲ್ಲೆ ನಡೆಸಿ ಬಳಿಕ ಚೂರಿಯಿಂದ ಮನಸ್ಸೋಇಚ್ಚೆ ಇರಿದಿದ್ದ. ಅದೇ ವೇಳೆ ಇತರೇ ವಿದ್ಯಾರ್ಥಿಗಳು ಆಗಮಿಸಿದಾಗ ಅಲ್ಲಿಂದ ಆತ ತಪ್ಪಿಸಿಕೊಂಡಿದ್ದು ಕೈಗೆ ಗಾಯವಾಗಿತ್ತು.
(ಪಿಎಸ್ಸೈ ಹರೀಶ್ ಆರ್. ನಾಯ್ಕ್)
ಆ ಬಳಿಕ ಆತ ಕೋಡಿಗೆ ತೆರಳಿ ಅಲ್ಲಿಂದ ಕುಂದಾಪುರಕ್ಕೆ ಬಂದು ತೆಕ್ಕಟ್ಟೆಗೆ ತೆರಳಿ ಅಲ್ಲಿನ ಕ್ಲಿನಿಕ್ ಒಂದರಲ್ಲಿ ಕೈಗೆ ಆದ ಗಾಯಕ್ಕೆ ಚಿಕಿತ್ಸೆ ಪಡೆದಿದ್ದು ತನ್ನ ಕ್ರತ್ಯಕ್ಕೆ ಪ್ರೇರಣೆ ನೀಡಿದ್ದ ಕೋಟೇಶ್ವರ ಸಮೀಪದ ಯುವಕನಿಗೆ ಫೋನಾಯಿಸಿದ್ದ. ಆತ ಈತನಿಗೆ ವ್ಯವಸ್ಥೆ ಕಲ್ಪಿಸುವುದಾಗಿ ತಿಳಿಸಿದ್ದು ರೈಲು ನಿಲ್ದಾಣಕ್ಕೆ ಬರುವಂತೆ ಸೂಚಿಸಿದ ಹಿನ್ನೆಲೆ ಕುಂದಾಪುರ ರೈಲು ನಿಲ್ದಾಣಕ್ಕೆ ಬಾಲಕ ತೆರಳಿದ್ದ, ಸಂಜೆ ಸುಮಾರಿಗೆ ಬಾಲಕ, ಕೋಟೇಶ್ವರ ಮೂಲದ ಯುವಕ ಹಾಗೂ ಆತನ ಸಹೋದರ ಬೆಂಗಳೂರು ರೈಲು ಏರಿದ್ದರು. ಮಾರನೇ ದಿನ ಬೆಂಗಳುರು ತಲುಪಿ ಅಲ್ಲಿ ಕುಂದಾಪುರದ ಯುವಕನೊಬ್ಬನ ರೂಂನಲ್ಲಿ ಉಳಿದಿದ್ದು 2-3 ದಿವಸಗಳ ಕಾಲ ಬೆಂಗಳುರು-ರಾಮನಗರ, ಯಲಹಂಕ ಮೊದಲಾದೆಡೆ ಸುತ್ತಾಟ ನಡೆಸಿ ಕೆಲಸಕ್ಕಾಗಿ ಅಲೆದಿದ್ದರು. ಕೆಲಸ ಸಿಗದಿದ್ದಾಗ ಡಿ3ರಂದು ಬಾದಾಮಿ ರೈಲು ಏರಿ ನಾಲ್ಕನೇ ತಾರಿಖು ತನ್ನ ಸಂಬಂಧಿಗಳ ಮನೆ ಸೇರಿದ್ದ. ಅಷ್ಟೂ ದಿನಗಳ ಕಾಲ ಬೆಳಿಗ್ಗೆ ಉಪಹಾರ, ಮಧ್ಯಾಹ್ನ ಹಾಗೂ ರಾತ್ರಿಯೂಟ ವಿವಿದೆಡೆ ಇಂದಿರಾ ಕ್ಯಾಂಟಿನಿನಲ್ಲಿ ಮಾಡಿದ್ದರು ಎನ್ನಲಾಗಿದೆ.
ಚೂರಿಯಿರಿತ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸರು ಪ್ರಕರಣವನ್ನು ಭೇದಿಸಲು ವಿವಿಧ ತಂಡ ರಚಿಸಿದ್ದರು. ಅಂತೆಯೇ ಬಾಲಕ ಸಂಬಂಧಿಗಲ ಮನೆಯಲ್ಲಿರುವುದು ಖಚಿತವಾಗುತ್ತಿದ್ದಂತೆಯೇ ಅಲ್ಲಿಗೆ ತೆರಳಿದ ಪೊಲೀಸರ ತಂಡ ಆತನನ್ನು ಕರೆತಂದಿದೆ.
ಉಡುಪಿ ಎಸ್ಪಿ ಲಕ್ಞ್ಮಣ ನಿಂಬರ್ಗಿ ನಿರ್ದೇಶನದಲ್ಲಿ ಕುಂದಾಪುರ ಡಿವೈಎಸ್ಪಿ ಬಿ.ಪಿ.ದಿನೇಶ್ ಕುಮಾರ್ ಹಾಗೂ ವೃತ್ತ ನಿರೀಕ್ಷಕ ಮಂಜಪ್ಪ ಮಾರ್ಗದರ್ಶನದಲ್ಲಿ ಪಿಎಸ್ಸೈ ಹರೀಶ್ ಆರ್. ನಾಯ್ಕ್ ನೇತೃತ್ದಲ್ಲಿ ಕ್ರೈಮ್ ವಿಭಾಗದವರು ಕಾನೂನು ಸಂಘರ್ಷದಲ್ಲಿರುವ ಬಾಲಕನ ಕರೆತಂದಿದ್ದು ಉಡುಪಿಯಲ್ಲಿನ ಬಾಲನ್ಯಾಯ ಮಂಡಳಿಯೆದುರು ಹಾಜರುಪಡಿಸಿದ್ದಾರೆ.
Comments are closed.