ಕರಾವಳಿ

23ನೇ ಕನ್ನಡ ಸಾಹಿತ್ಯ ಸಮ್ಮೇಳನ : ಮೆರುಗು ನೀಡಿದ ಕನ್ನಡ ಭುವನೇಶ್ವರಿಯ ದಿಬ್ಬಣ

Pinterest LinkedIn Tumblr

ಮಂಗಳೂರು, ಜನವರಿ.29: ದ.ಕ. ಜಿಲ್ಲಾ 23ನೇ ಕನ್ನಡ ಸಾಹಿತ್ಯ ಸಮ್ಮೇಳನ ಇಂದಿನಿಂದ ಆರಂಭವಾಗಿದ್ದು, ‘ವ್ಯಸನ ಮುಕ್ತ ಬದುಕು-ಸ್ವಸ್ಥ ಸಮಾಜ’ಎಂಬ ಆಶಯದೊಂದಿಗೆ ಜ.29, 30, 31ರಂದು ಮೂರು ದಿನಗಳ ಕಾಲ ಮಂಗಳೂರು ಪುರಭವನದ ಕುದ್ಮುಲ್ ರಂಗರಾವ್ ಸಭಾಂಗಣ, ಕಮಲಾದೇವಿ ಚಟ್ಟೋಪಾಧ್ಯಾಯ ಪ್ರಾಂಗಣ, ಬಿ.ಎಂ. ಇದಿನಬ್ಬ ವೇದಿಕೆಯಲ್ಲಿ ಸಮ್ಮೇಳನ ನಡೆಯಲಿದೆ.

ಕನ್ನಡ ಭುವನೇಶ್ವರಿಯ ದಿಬ್ಬಣ :

ಸಮ್ಮೇಳನದ ಪೂರ್ವಬಾವಿಯಾಗಿ ಇಂದು ಸಂಜೆ 3ಗಂಟೆಗೆ ಸಾಂಸ್ಕೃತಿಕ ತಂಡಗಳ ಜೊತೆಗೆ ಕನ್ನಡ ಭುವನೇಶ್ವರಿಯ ದಿಬ್ಬಣ ನಡೆಯಿತು.

ಮಂಗಳೂರು ಬಂಟ್ಸ್ ಹಾಸ್ಟೆಲ್ ಆವರಣದಿಂದ ಅಂಬೇಡ್ಕರ್ (ಜ್ಯೋತಿ) ವೃತ್ತ, ಡಾ.ಕೋಟ ಶಿವರಾಮ ಕಾರಂತ ಮಾರ್ಗ, ಉಳ್ಳಾಲ ಪದ್ಮನಾಭ ಮಲ್ಯ (ಯು. ಪಿ. ಮಲ್ಯ) ರಸ್ತೆ ಮೂಲಕ ಕುದ್ಮುಲ್ ರಂಗರಾವ್ ಪುರಭವನ (ಟೌನ್ ಹಾಲ್) ಮಂಗಳೂರುವರೆಗೆ ವೈಶಿಷ್ಟ ಪೂರ್ಣವಾದ ಸಾಂಸ್ಕತಿಕ ಮೆರವಣಿಗೆ ನಡೆಯಿತು.

ಮೆರವಣಿಗೆ ಉದ್ಘಾಟಿಸಿದ ಮಾಜಿ ಸಚಿವ ಕೆ. ಅಮರ್‌ನಾಥ ಶೆಟ್ಟಿ ಭುವನೇಶ್ವರಿಗೆ ಪುಷ್ಪಾರ್ಚನೆ ಗೈಯುವವ ಮೂಲಕ ಕನ್ನಡ ಭುವನೇಶ್ವರಿಯ ದಿಬ್ಬಣಕ್ಕೆ ಚಾಲನೆ ನೀಡಿದರು. ಜಿಲ್ಲಾ ಕಸಾಪ ಅಧ್ಯಕ್ಷ ಎಸ್.ಪ್ರದೀಪ ಕುಮಾರ ಕಲ್ಕೂರ ಕನ್ನಡ ಭುವನೇಶ್ವರಿಯ ದಿಬ್ಬಣದ ಬಗ್ಗೆ ಮಾಹಿತಿ ನೀಡಿದರು. ಪ್ರಮುಖರಾದ ಡಾ, ಬಿ.ಎಂ.ಹೆಗ್ಡೆ, ಪ್ರೋ.ಎಂ.ಬಿ.ಪುರಾಣಿಕ್, ಕಸಾಪ ಮಾಜಿ ರಾಜ್ಯಧ್ಯಕ್ಷ ಹರಿಕೃಷ್ಣ ಪೂನರೂರು, ಕರ್ನಾಟಕ ತುಳು ಸಾಹಿತ್ಯ ಆಕಾಡಮಿ ಅಧ್ಯಕ್ಷ ಎ.ಸಿ. ಭಂಡಾರಿ ಮೊದಲಾದವರು ಅತಿಥಿಗಳಾಗಿದ್ದರು.

Comments are closed.