ಕರಾವಳಿ

ಜಾರ್ಜ್ ಕೊಡುಗೆ ಸದಾ ಸ್ಮರಣೀಯ : ಸಂಸದ ನಳಿನ್ ಸಂತಾಪ

Pinterest LinkedIn Tumblr

ಮಂಗಳೂರು : ತುರ್ತು ಪರಿಸ್ಥಿತಿ ವಿರುದ್ದ ದಿಟ್ಟತನದಿಂದ ಹೋರಾಡಿದ ಜಾರ್ಜ್ ಫೆರ್ನಾಂಡಿಸ್ ಅವರು ಕರಾವಳಿಯ ಹೆಮ್ಮೆಯ ನಾಯಕ. ರೈಲ್ವೆ ಸಚಿವರಾಗಿ ಅವರು ನಾಡಿಗೆ ನೀಡಿದ ಕೊಡುಗೆ ಸದಾ ಸ್ಮರಣೀಯ. ಕಾರ್ಮಿಕರ ಏಳಿಗೆಗಾಗಿ ತನ್ನ ಬದುಕನ್ನು ಮುಡಿಪಾಗಿರಿಸಿದ ಜಾರ್ಜ್ ಅವರ ಮಾನವೀಯ ಗುಣ, ದೇಶಪ್ರೇಮ ರಾಜಕಾರಣಿಗಳಿಗೆ ಮಾದರಿ ಎಂದು ಸಂಸದ ನಳಿನ್‌ಕುಮಾರ್ ಕಟೀಲ್ ಸಂತಾಪ ವ್ಯಕ್ತಪಡಿಸಿದ್ದಾರೆ.

ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿಯವರ ಸಂಪುಟದಲ್ಲಿ ರಕ್ಷಣಾ ಸಚಿವರಾಗಿ, ಒಂಭತ್ತು ಬಾರಿ ಲೋಕಸಭೆಗೆ ಆಯ್ಕೆಯಾಗಿ ದೂರಸಂಪರ್ಕ, ರೈಲ್ವೆ, ಬೃಹತ್ ಕೈಗಾರಿಕೆಯಂತಹ ಇಲಾಖೆಗಳ ಸಚಿವರಾಗಿ, ಕರಾವಳಿಯ ಜೀವನಾಡಿ ಕೊಂಕಣ ರೈಲ್ವೆಯ ಪ್ರೇರಕ ಶಕ್ತಿಯಾಗಿದ್ದ ಮಂಗಳೂರಿನವರಾದ ಶ್ರೀ ಜಾರ್ಜ್ ಮ್ಯಾಥ್ಯು ಫೆರ್ನಾಂಡಿಸ್ ಅವರ ನಿಧನ ದೇಶಕ್ಕೆ ತುಂಬಲಾರದ ನಷ್ಟ ಎಂದವರು ತಿಳಿಸಿದ್ದಾರೆ.

Comments are closed.