ಕರಾವಳಿ

ಜಾರ್ಜ್ ಫೆರ್ನಾಂಡಿಸ್ ನಿಧನಕ್ಕೆ ಶಾಸಕ ಕಾಮಾತ್, ಮಾಜಿ ಶಾಸಕರಾದ ಲೋಬೋ, ಕಾರ್ಣಿಕ್ ಸಂತಾಪ

Pinterest LinkedIn Tumblr

ಮಂಗಳೂರು : ಭಾರತ ಸರಕಾರದ ಮಾಜಿ ರಕ್ಷಣಾ ಸಚಿವ ಜಾರ್ಜ್ ಫೆರ್ನಾಂಡಿಸ್ ರವರ ನಿಧನಕ್ಕೆ ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್, ಮಾಜಿ ಶಾಸಕ ಜೆ.ಆರ್. ಲೋಬೊ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಸಂತಾಪ ವ್ಯಕ್ತಪಡಿಸಿದ್ದಾರೆ.

ಶಾಸಕ ವೇದವ್ಯಾಸ ಕಾಮತ್ ಸಂತಾಪ :

ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿಯವರ ಸಂಪುಟದಲ್ಲಿ ರಕ್ಷಣಾ ಸಚಿವರಾಗಿ, ಒಂಭತ್ತು ಬಾರಿ ಲೋಕಸಭೆಗೆ ಆಯ್ಕೆಯಾಗಿ ದೂರಸಂಪರ್ಕ, ರೈಲ್ವೆ, ಬೃಹತ್ ಕೈಗಾರಿಕೆಯಂತಹ ಇಲಾಖೆಗಳ ಸಚಿವರಾಗಿ, ಕರಾವಳಿಯ ಜೀವನಾಡಿ ಕೊಂಕಣ ರೈಲ್ವೆಯ ಪ್ರೇರಕ ಶಕ್ತಿಯಾಗಿದ್ದ ಮಂಗಳೂರಿನವರಾದ ಶ್ರೀ ಜಾರ್ಜ್ ಮ್ಯಾಥ್ಯು ಫೆರ್ನಾಂಡಿಸ್ ಅವರ ನಿಧನಕ್ಕೆ ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಸಂತಾಪ ವ್ಯಕ್ತಪಡಿಸಿದ್ದಾರೆ.

ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಸಂತಾಪ :

ಈ ದೇಶಕಂಡ ಧೀಮಂತ ರಾಜಕಾರಣಿ, ಮೌಲ್ಯಗಳಿಗಾಗಿ ಬದುಕಿದ ಸರಳ ಸಜ್ಜನ ಜನ ನಾಯಕ, ಭಾರತ ಸರಕಾರದ ಮಾಜಿ ರಕ್ಷಣಾ ಸಚಿವ ಜಾರ್ಜ್ ಫೆರ್ನಾಂಡಿಸ್ ರವರ ನಿಧನಕ್ಕೆ ವಿಧಾನ ಪರಿಷತ್ತಿನ ಮಾಜಿ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ರವರು ಸಂತಾಪವನ್ನು ವ್ಯಕ್ತಪಡಿಸಿದ್ದಾರೆ. ಸಜ್ಜನ ರಾಜಕಾರಣಿಯಾಗಿದ್ದ ಶ್ರೀಯುತರ ನಿಧನ ದೇಶಕ್ಕೆ ತುಂಬಲಾರದ ನಷ್ಟ. ಶ್ರೀಯುತರನ್ನು ಕಳೆದುಕೊಂಡ ದು:ಖವನ್ನು ತಡೆದುಕೊಳ್ಳುವ ಶಕ್ತಿಯನ್ನು ಭಗವಂತ ನಾಡಿನ ಜನತೆಗೆ ನೀಡಲಿ ಎಂದು ಕ್ಯಾಪ್ಟನ್ ಕಾರ್ಣಿಕ್ ರವರು ತಮ್ಮ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ.

ಜೆ.ಆರ್. ಲೋಬೊ ಸಂತಾಪ :

ಮಾಜಿ ಕೇಂದ್ರ ಸಚಿವ ಜೋರ್ಜ್ ಫೆರ್ನಾಂಡಿಸ್ ಅವರ ನಿಧನಕ್ಕೆ ಮಾಜಿ ಶಾಸಕ ಜೆ.ಆರ್. ಲೋಬೊ ಸಂತಾಪ ಸಂತಾಪ ವ್ಯಕ್ತಪಡಿಸಿದ್ದಾರೆ.

ಒಬ್ಬ ರಾಷ್ಟ್ರೀಯವಾದಿ, ರಾಷ್ಟ್ರ ರಾಜಕಾರಣದ ನೈಜ ಪ್ರತಿನಿಧಿ, ರೈಲ್ವೆ ಸುಧಾರಣೆ, ಕಾರ್ಮಿಕ ಕಲ್ಯಾಣ ಜೊತೆಗೆ ರಕ್ಷಣಾ ಸಚಿವರಾಗಿ ಕರಾವಳಿಗೆ ಸೀಬರ್ಡ್ ಹಾಗೂ ಕೊಂಕಣ ರೈಲ್ವೆ ಯೋಜನೆಯ ಮೂಲಕ ಇವರು ನೀಡಿದ ಕೊಡುಗೆ ಯಾವತ್ತೂ ಸ್ಮರಣೀಯ. ಅವರ ಆತ್ಮಕ್ಕೆ ಸದ್ಗತಿ ಸಿಗಲೆಂದು ಪ್ರಾರ್ಥಿಸೋಣ. ಅವರ ಬದುಕು ನಮಗೆಲ್ಲರಿಗೂ ಆದರ್ಶವಾಗಿರಲಿ ಎಂದು ಆಶಿಸೋಣ ಎಂದವರು ತಿಳಿಸಿದ್ದಾರೆ.

Comments are closed.