ಕರಾವಳಿ

ಫೆ.10ರಿಂದ ಫೆ.17ರವರೆಗೆ ಕುದ್ರೋಳಿ ಶ್ರೀ ಕ್ಷೇತ್ರದಲ್ಲಿ ವೈಭವದ ಬ್ರಹ್ಮ ಕಲಶೋತ್ಸವ – ನೂತನ ಧ್ವಜಸ್ತಂಭ ಪ್ರತಿಷ್ಠಾಪನೆ

Pinterest LinkedIn Tumblr

ಮಂಗಳೂರು, ಜನವರಿ 25: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಫೆ.10 ರಿಂದ ಫೆ.17ರವರೆಗೆ ವೈಭವದ ಬ್ರಹ್ಮ ಕಲಶೋತ್ಸವವು ಶಿವಗಿರಿ ಮಠದ ಬ್ರಹ್ಮಶ್ರೀ ವಿಷುದಾನಂದ ಸ್ವಾಮೀಜಿ ಅವರ ಉಪಸ್ಥಿತಿಯಲ್ಲಿ ಹಾಗೂ ಶಿವಗಿರಿ ಮಠದ ಶ್ರೀ ಸುಗುದಾನಂದ ತಂತ್ರಿ ಮತ್ತು ಶ್ರೀ ಕ್ಷೇತ್ರದ ಮುಖ್ಯ ಅರ್ಚಕ ಲಕ್ಷ್ಮಣ ಶಾಂತಿಯವರ ಪೌರೋಹಿತ್ಯದಲ್ಲಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನಡೆಯಲಿದೆ ಎಂದು ಕುದ್ರೋಳಿ ಶ್ರೀ ಕ್ಷೇತ್ರದ ನವೀಕರಣದ ರೂವಾರಿ ಹಾಗೂ ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ತಿಳಿಸಿದರು.

ಗುರುವಾರ ಶ್ರೀ ಕ್ಷೇತ್ರದಲ್ಲಿ ಕಾರ್ಯಕ್ರಮದ ಆಮಂತ್ರಣ ಬಿಡುಗಡೆಗೊಳಿಸಿ ಬಳಿಕ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಫೆ.10 ರಿಂದ ಫೆ.17ರವರೆಗೆ ನಡೆಯಲಿರುವ ಬ್ರಹ್ಮ ಕಲಶ ಉತ್ಸವ ಸಂದರ್ಭದಲ್ಲಿ ಶಿವಗಿರಿ ಮಠದ ಬ್ರಹ್ಮಶ್ರೀ ವಿಷುದಾನಂದ ಸ್ವಾಮೀಜಿ ಅವರ ಉಪಸ್ಥಿತಿಯಲ್ಲಿ ಹಾಗೂ ಶಿವಗಿರಿ ಮಠದ ಶ್ರೀ ಸುಗುದಾನಂದ ತಂತ್ರಿ ಮತ್ತು ಶ್ರೀ ಕ್ಷೇತ್ರದ ಲಕ್ಷ್ಮಣ ಶಾಂತಿಯವರ ಪೌರೋಹಿತ್ಯ ದಲ್ಲಿ ನೂತನ ಧ್ವಜಸ್ತಂಭ ಪ್ರತಿಷ್ಠಾಪನೆಯು ವಿಧಿ ವಿಧಾನಗಳೊಂದಿಗೆ ನಡೆಯಲಿದೆ ಎಂದು ಹೇಳಿದರು.

ಫೆ.10ರಂದು ಸಂಜೆ.6.30ಕ್ಕೆ ಪ್ರಾರ್ಥನೆಯೊಂದಿಗೆ ಧಾರ್ಮಿಕ ಪೂಜಾ ವಿಧಿಗಳು ಆರಂಭಗೊಳ್ಳಲಿದೆ. ಫೆ. 11ರಂದು ಮಹಾಗಣಪತಿ ಹೋಮ, ತ್ರಿಕಾಲ ಗುರುಪೂಜೆ, ತೋರಣ ಮುಹೂರ್ತ , ಉಗ್ರಾಣ ಮುಹೂರ್ತ,ವಿಶ್ವ ಶಾಂತಿ ಹೋಮ ಕುಂಡ ಶುದ್ಧಿ, ಮಹಾಪೂಜೆ, ಫೆ.12ರಂದು ದೀಪಾರಾಧನೆ, ವಾಸ್ತುಕಲಶಾಭಿಷೇಕ, ಫೆ.13ರಂದು ಬೆಳಗ್ಗೆ ಮಹಾಗಣಪತಿ ಹೋಮ, ತ್ರಿಕಾಲ ಗುರುಪೂಜೆ,ತ್ರಿಕಾಲ ಅಂಕುರ ಪೂಜೆ, ಪಂಚಗವ್ಯ ,ಕಲಶ ಮಹಾಭಿಷೇಕ, ಸಂಜೆ 6ಗಂಟೆಯಿಂದ ದೀಪಾರಾಧನ, ಬಿಂಬ ಶುದ್ಧಿ, ಮಹಾಪೂಜೆ ನಡೆಯಲಿದೆ.

ಫೆ.14ರಂದು ಮಹಾ ಪೂಜೆ, ತ್ರಿಕಾಲ ಗುರುಪೂಜೆ, ತ್ರಿಕಾಲ ಅಂಕುರ ಪೂಜೆ,ತ್ರಿಕಾಲ ಭಗವತಿ ಪೂಜೆ, ಶಾಂತಿ ಪೂಜೆ,ಅದ್ಭುತ ಶಾಂತಿ ಹೋಮ, ಕಲಶಾಭಿಷೇಕ, ಮಹಾಪೂಜೆ ದಿಪಾರಾಧನೆ, ಮಹಾ ಪೂಜೆ ನಡೆಯಲಿದೆ. ಫೆ.15ರಂದು ಬೆ.8.15 ಗಂಟೆಗೆ ಗರ್ಭಗುಡಿ ಶಿಖರ ಪ್ರತಿಷ್ಠೆ , ಚಂಡಿಕಾ ಹೋಮ, ಮಹಾ ಪೂಜೆ ನಡೆಯಲಿದೆ.

ಫೆ.16ರಂದು ಮಹಾಗಣಪತಿ ಹೋಮ, ತ್ರಿಕಾಲ ಗುರುಪೂಜೆ, ಮಹಾಪೂಜೆ ನಡೆಯಲಿದೆ. ಫೆ.17ರಂದು ಬೆ.5ಕ್ಕೆ ಮಹಾಗಣಪತಿ ಹೋಮ, ಗುರುಪೂಜೆ, ರಾಜ ಗೋಪು ರ ಶಿಖರ ಪ್ರತಿಷ್ಠೆ, ಕಲಶಾಭಿಷೇಕ, ಅಧಿವಾಸಂ, ವೀರಕಾಂಡ ಪೀಠ ಪೂಜೆ, ಕಲಶಾಭಿಷೇಕ, ಧ್ವಜಾರೋಹಣ,ಮಧ್ಯಾಹ್ನ 12.15 ಗಂಟೆಗೆ ಬ್ರಹ್ಮಕ ಲಶಾ ಭಿಷೇಕ, ವಿಶೇಷ ಪೂಜೆ, ನೈವೇದ್ಯ ಪೂಜೆ,ಪ್ರಸನ್ನ ಪೂಜೆ, ಮಹಾ ಮಂಗಳಾ ರತಿ, ಮಹಾ ಅನ್ನ ಸಂತರ್ಪಣೆ ನಡೆಯಲಿದೆ. ಶ್ರೀ ಕ್ಷೇತ್ರದಲ್ಲಿ ವರ್ಷಾವಧಿ ಜಾತ್ರೋತ್ಸವ ಹಾಗೂ ಶಿವರಾತ್ರಿ ಮಹೋತ್ಸವ ಫೆ.27ರಿಂದ ಮಾರ್ಚ್ 6ರವರೆಗೆ ನಡೆಯಲಿದೆ ಎಂದು ಜನಾರ್ದನ ಪೂಜಾರಿ ತಿಳಿಸಿದರು.

ಕೇತ್ರಾಡಳಿತ ಮಂಡಳಿಯ ಕೋಶಾಧಿಕಾರಿ ಪದ್ಮ ರಾಜ್ ಆರ್ (ಆಡ್ವಕೇಟ್) ಅವರು ಮಾತನಾಡಿ, ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಫೆ.10ರಿಂದ ಫೆ.17ರವರೆಗೆ ನೂತನ ಧ್ವಜ ಸ್ತಂಭ ಪ್ರತಿಷ್ಠಾಪನೆ ಹಾಗೂ ಬ್ರಹ್ಮ ಕಲಶ ಉತ್ಸವ ಹಾಗು ಫೆ.27ರಿಂದ ಮಾರ್ಚ್ 6ರವರೆಗೆ ನಡೆಯಲಿರುವ ಜಾತ್ರಾಮಹೋತ್ಸವ ಕಾರ್ಯಕ್ರಮದ ಸಂದರ್ಭದಲ್ಲಿ ಫೆ.೧೫ರಿಂದ ಫೆ.೧೭ರವರೆಗೆ ಪ್ರತಿನಿತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಜಿಲ್ಲೆಯ ಪ್ರಸಿದ್ಧ ತಂಡಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಫೆ.13ರಂದು ಬೃಹತ್ ಹೊರೆಕಾಣಿಕೆ :

ಫೆ.13ರಂದು ಸಂಜೆ 4 ಗಂಟೆಗೆ ನಗರದ ಕೇಂದ್ರ ಮೈದಾನದಿಂದ ಬೃಹತ್ ಹೊರೆಕಾಣಿಕೆ ಮೆರವಣಿಗೆ ನಡೆಯಲಿದ್ದು, ಇದರಲ್ಲಿ ಕರಾವಳಿ ಜಿಲ್ಲೆಯ 500ಕ್ಕೂ ಅಧಿಕ ವಾಹನಗಳು, ಸಾವಿರಾರು ಭಕ್ತರು ಭಾಗವಹಿಸಲಿದ್ದಾರೆ ಎಂದು ಪದ್ಮ ರಾಜ್ ಅವರು ಹೇಳಿದರು.

ಕ್ಷೇತ್ರಾಡಳಿತ ಮಂಡಳಿಯ ಅಧ್ಯಕ್ಷ ಎಚ್.ಎಸ್.ಸಾಯಿರಾಮ್, ಮಾಜಿ ಸಚಿವೆ ಸುಮಾ ವಸಂತ್, ಶ್ರೀ ಕ್ಷೇತ್ರದ ಆಡಳಿತ ಮಂಡಳಿ ಕಾರ್ಯದರ್ಶಿ ಬಿ.ಮಾದವ ಸುವರ್ಣ, ಶ್ರೀಕ್ಷೇತ್ರ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ಊರ್ಮಿಳಾ ರಮೇಶ್, ದೇವಸ್ಥಾನ ಅಭಿವೃದ್ಧಿ ಸಮಿತಿಯ ಸದಸ್ಯರಾದ ರವಿಶಂಕರ ಮಿಜಾರ್,ಡಾ.ಬಿ.ಜಿ ಸುವರ್ಣ, ದೇವೇಂದ್ರ ಪುಜಾರಿ, ಡಿ.ಡಿ.ಕಟ್ಟೆಮಾರ್, ಡಾ.ಅನಸೂಯ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Comments are closed.