ಕರಾವಳಿ

ಕ್ಯಾಪ್ಟನ್ ಬ್ರಿಜೇಶ್ ಚೌಟ ಸಾರಥ್ಯದಲ್ಲಿ ಬಂಗ್ರ ಕೂಳೂರಿನಲ್ಲಿ ನಡೆದ ಹೊನಲು ಬೆಳಕಿನ ಮಂಗಳೂರು ಕಂಬಳೋತ್ಸವದ ಫಲಿತಾಂಶ

Pinterest LinkedIn Tumblr

ಮಂಗಳೂರು: ಬಿಜೆಪಿ ಮುಖಂಡ ಹಾಗೂ ತಲಪಾಡಿ ದೊಡ್ಡಮನೆಯ ಕ್ಯಾಪ್ಟನ್ ಬ್ರಿಜೇಶ್ ಚೌಟ ಸಾರಥ್ಯದಲ್ಲಿ ನಗರದ ಬಂಗ್ರ ಕೂಳೂರು ಗೋಲ್ಡ್‌ಫಿಂಚ್ ಸಿಟಿಯ ರಾಮ-ಲಕ್ಷ್ಮಣ ಜೋಡುಕರೆಯಲ್ಲಿ ರವಿವಾರ ನಡೆದ ಎರಡನೇ ವರ್ಷದ ಹೊನಲು ಬೆಳಕಿನ ಮಂಗಳೂರು ಕಂಬಳೋತ್ಸವ ಮಂಗಳೂರಿನ ಜನತೆಯ ಹಬ್ಬವಾಗಿ ಪರಿವರ್ತನೆಗೊಂಡು ಮನಸೂರೆಗೊಂಡಿತು.

ಸಿಂಗಾರಗೊಂಡ ಕೋಣಗಳ ಗತ್ತು, ಒಮ್ಮೊಮ್ಮೆ ತುಂಟಾಟಕ್ಕೆ ಪ್ರಯತ್ನ, ಗದರಿಸಿ ನಿಯಂತ್ರಿಸುವ ಕೋಣಗಳ ಪರಿಚಾರಕರು, ಕಹಳೆಯ ನಿನಾದ, ಕರೆಯಲ್ಲಿ ಧಾವಿಸಿ ಬರುವ ಕೋಣಗಳನ್ನು ಗಂತಿನಲ್ಲಿ ಹೆಸರೆತ್ತಿ ಹುರಿದುಂಬಿಸಿ ಕರೆಯುವ ಕೋಣಗಳ ಮೇಲ್ವಿಚಾರಕರು… ಹೀಗೆ ಅಲ್ಲಿ ನೋಡುಗರ ಪಾಲಿಗೆ ಅಲ್ಲಿ ಒಂದು ಗಮ್ಮತ್ತಿನ ವಾತಾವರಣ ಸೃಷ್ಟಿಯಾಗಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ನಗರ ನಿವಾಸಿಗಳು ಭೇಟಿ ನೀಡಿ ಕಂಬಳವನ್ನು ವೀಕ್ಷಿಸಿ ಆನಂದಿಸಿದರು. ಮಕ್ಕಳು ಕುತೂಹಲದಿಂದ ವೀಕ್ಷಿಸಿದರು.

ಅವಿಭಜಿತ ದಕ್ಷಿಣ ಕನ್ನಡ ಸಹಿತ ವಿವಿಧೆಡೆಗಳಿಂದ ನೇಗಿಲು ಹಿರಿಯ ಮತ್ತು ಕಿರಿಯ, ಹಗ್ಗ ಹಿರಿಯ ಮತ್ತು ಕಿರಿಯ, ಕನೆ ಹಲಗೆ, ಅಡ್ಡ ಹಲಗೆ ಸೇರಿ ವಿವಿಧ ವಿಭಾಗಗಳಲ್ಲಿ 101ಕ್ಕೂ ಅಧಿಕ ಕಂಬಳ ಕೋಣಗಳ ಜೋಡಿಗಳು ಭಾಗವಹಿಸಿದ್ದವು.

ಕಂಬಳೋತ್ಸವದ ಫಲಿತಾಂಶ:

ಕನೆಹಲಗೆ: ಬಾರ್ಕೂರು ಶಾಂತಾರಾಮ ಶೆಟ್ಟಿ
(6.5 ಕೋಲು ನಿಶಾನೆಗೆ ನೀರು ಹಾಯಿಸಿದ್ದಾರೆ)

ಹಗ್ಗ ಹಿರಿಯ:

ಪ್ರಥಮ: ಕೂಳೂರು ಪೊಯ್ಯೆಲು ಪಿ.ಆರ್.ಶೆಟ್ಟಿ
ದ್ವಿತೀಯ: ಮೂಡಬಿದ್ರಿ ನಿವ್ ಪಡಿವಾಲ್ಸ್ ಹಾರ್ದಿಕ್ ಹರ್ಷವರ್ಧನ ಪಡಿವಾಲ್

ಹಗ್ಗ ಕಿರಿಯ:

ಪ್ರಥಮ: ಮಾಣಿ ಸಾಗು ಹೊಸಮನೆ ಉಮೇಶ್ ಮಹಾಬಲ ಶೆಟ್ಟಿ
ದ್ವಿತೀಯ: ಮೂಡಬಿದ್ರಿ ಹೊಸಬೆಟ್ಟು ಏರಿಮಾರು ಬರ್ಕೆ ಚಂದ್ರಹಾಸ ಸಾಧು ಸನಿಲ್

ನೇಗಿಲು ಹಿರಿಯ:

ಪ್ರಥಮ: ಬೋಳದ ಗುತ್ತು ಜಗದೀಶ್ ಶೆಟ್ಟಿ
ದ್ವಿತೀಯ: ಕೌಡೂರು ಬೀಡು ತುಷಾರ್ ಮಾರಪ್ಪ ಭಂಡಾರಿ

ನೇಗಿಲು ಕಿರಿಯ:

ಪ್ರಥಮ: ಮಿಜಾರು ಪ್ರಸಾದ್ ನಿಲಯ ಶಕ್ತಿ ಪ್ರಸಾದ್ ಶೆಟ್ಟಿ
ದ್ವಿತೀಯ: ಮುಂಡ್ಕೂರು ಮುಲ್ಲಡ್ಕ ರವೀಂದ್ರ ಶೆಟ್ಟಿ

ಅಡ್ಡಹಲಗೆ:

ಪ್ರಥಮ: ಮೋರ್ಲ ಗಿರೀಶ್ ಆಳ್ವ
ದ್ವಿತೀಯ: ಬೋಳಾರ ತ್ರಿಶಾಲ್ ಕೆ ಪೂಜಾರಿ

ಚಿನ್ನದ ಬಹುಮಾನ : ವಿಜೆತರಿಗೆ ಕನೆ ಹಲಗೆ ವಿಭಾಗದಲ್ಲಿ ನಿಗದಿತ ನಿಶಾನೆಗೆ ನೀರು ಹಾಯಿಸಿದ ಕೋಣಗಳಿಗೆ ಪ್ರಥಮ ಎರಡು ಪವನು, ದ್ವಿತೀಯ ಒಂದು ಪವನು, ಹಗ್ಗ ನೇಗಿಲು ಹಿರಿಯ ವಿಭಾಗದಲ್ಲಿ ಪ್ರಥ‌ಮ ಎರಡು ಪವನು, ದ್ವಿತೀಯ ಒಂದು ಪವನು, ಅಡ್ಡ ಹಲಗೆ ಹಗ್ಗ, ನೇಗಿಲು, ಕಿರಿಯ ವಿಭಾಗದಲ್ಲಿ ಪ್ರಥಮ ಒಂದು ಪವನು, ದ್ವಿತೀಯ ಅರ್ಧ ಪವನು ಚಿನ್ನ ಬಹುಮಾನ ನೀಡಲಾಯಿತು. ನಿಖರ ಫ‌ಲಿತಾಂಶ ಪಡೆಯಲು ಲೇಸರ್‌ ಬೀಂ ನೆಟ್ ವರ್ಕ್‌ ಸಿಸ್ಟಂ, ವೀಡಿಯೋ ದಾಖಲೀಕಣ, ಚಿತ್ರೀಕರಣ ವ್ಯವಸ್ಥೆ ಮಾಡಲಾಗಿತ್ತು.

Comments are closed.