ಕರಾವಳಿ

ಐಸ್‌ಕ್ಯೂಬ್‌ನಿಂದ ಹಲವು ಆರೋಗ್ಯ ಸಮಸ್ಯೆ ನಿವಾರಣೆ

Pinterest LinkedIn Tumblr

ರಕ್ತಪರಿಚಲನೆಯನ್ನು ಹೆಚ್ಚಿಸುತ್ತದೆ. ಪ್ರತಿದಿನ ಬೆಳಿಗ್ಗೆ ಐಸ್ ನೀರಿನಲ್ಲಿ ನಿಮ್ಮ ಮುಖವನ್ನು ಮುಳುಗಿಸಿ. ಇದು ನಿಮ್ಮ ರಕ್ತಪರಿಚಲನೆಯನ್ನು ಹೆಚ್ಚಿಸುವುದರೊಂದಿಗೆ ಮುಖದ ಚರ್ಮವನ್ನು ಬಿಗಿಯಾಗಿಸುತ್ತದೆ.

ಫಫಿ ಕಣ್ಣುಗಳ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ.ಸುಮಾರು 10 ನಿಮಿಷಗಳವರೆಗೆ ಐಸ್ ಅನ್ನು ನಿಮ್ಮ ಕಣ್ಣುಗಳ ಮೇಲೆ ಇಟ್ಟುಕೊಂಡರೆ ಫಫಿ ಕಣ್ಣಿನ ಸಮಸ್ಯೆ ಕಡಿಮೆಯಾಗುತ್ತದೆ.

ಮುಖವನ್ನು ತಕ್ಷಣವೇ ಕಾಂತಿಯುಕ್ತವಾಗಿಸುತ್ತದೆ.ಸ್ನಾನದ ನಂತರ ಮಂಜುಗಡ್ಡೆಯಿಂದ ನಿಮ್ಮ ಮುಖವನ್ನು ಉಜ್ಜಬೇಕು. ಇದು ಮುಖದಲ್ಲಿರುವ ರಂಧ್ರಗಳನ್ನು ಕುಗ್ಗಿಸಿ ನಿಮ್ಮ ಮುಖವು ಹೊಳೆಯುವಂತೆ ಮಾಡುತ್ತದೆ.

ನೋವನ್ನು ಕಡಿಮೆ ಮಾಡುತ್ತದೆ.ಐಬ್ರೋ ಮಾಡಿಕೊಳ್ಳುವಾಗ ಆ ಭಾಗದಲ್ಲಿ ಮಂಜುಗಡ್ಡೆಯಿಂದ ಉಜ್ಜಿಕೊಂಡರೆ ನೋವು ತಿಳಿಯುವುದಿಲ್ಲ.

ಮೊಡವೆಯನ್ನು ಕುಗ್ಗಿಸುತ್ತದೆ.ಐಸ್ ಅನ್ನು ನಿಮ್ಮ ಮೊಡವೆಯ ಮೇಲೆ ಸ್ವಲ್ಪ ಸಮಯ ಉಜ್ಜಿದರೆ ಅದು ನಿಮ್ಮ ಮೊಡವೆಯನ್ನು ಕುಗ್ಗಿಸುತ್ತದೆ.

ಉಗುರಿಗೆ ಹಚ್ಚಿದ ಬಣ್ಣವನ್ನು ಬಹುಬೇಗ ಆರಿಸಿಕೊಳ್ಳಬಹುದು ಉಗುರಿಗೆ ಬಣ್ಣವನ್ನು ಹಚ್ಚಿಕೊಂಡ ನಂತರ ಬೆರಳುಗಳನ್ನು ಐಸ್ ನೀರಿನಲ್ಲಿ ಅದ್ದಿ ನಂತರ ಗಾಳಿಯಲ್ಲಿ ಆರಿಸಿದರೆ ಬಹು ಬೇಗ ಆರುತ್ತದೆ.

ಒಂದು ಬೌಲ್‌ನಲ್ಲಿ ಸೌತೆಕಾಯಿ ರಸ, ನಿಂಬೆ ರಸ ಮತ್ತು ಜೇನನ್ನು ಮಿಶ್ರಣ ಮಾಡಿ ಅದನ್ನು ಫ್ರೀಜ್ ಮಾಡಿ. ನಂತರ ಅದರಿಂದ ನಿಮ್ಮ ಮುಖ ಮತ್ತು ಕತ್ತಿನ ಭಾಗಕ್ಕೆ ಚೆನ್ನಾಗಿ ಉಚ್ಚಿ ಮಸಾಜ್ ಮಾಡಿಕೊಳ್ಳಿ. ಇದು ನಿಮ್ಮ ಮುಖವನ್ನು ಸ್ವಚ್ಛವಾಗಿಸುವುದರೊಂದಿಗೆ ಕಾಂತಿಯುಕ್ತವಾಗಿಸುತ್ತದೆ.

Comments are closed.