ಕರಾವಳಿ

ಸಕ್ಕರೆ ಕಾಯಿಲೆಯ ಸಮಸ್ಯೆಇರುವವರು ಗಮನಹರಿಸಬೇಕಾದ ವಿಷಯ…!

Pinterest LinkedIn Tumblr

ಸಕ್ಕರೆ ಕಾಯಿಲೆಯವರಾಗಲಿ ಅಥವಾ ಅವರ ಸಂಬಂಧಿಕರು ಸ್ವಲ್ಪ ಗಮನಹರಿಸಬೇಕಾದ ವಿಷಯವೇನೆಂದರೆ ಸಕ್ಕರೆ ಕಾಯಿಲೆಯ ಸಮಸ್ಯೆಗಳು ಸಮಯ ಕಳೆದಂತೆ ಯಾವುದೇ ವ್ಯಕ್ತಿಯಲ್ಲಿ ಹೆಚ್ಚುತ್ತಾ ಹೋಗಬಹುದು.

ನಿಯಂತ್ರಣವಿಲ್ಲದ ಅಥವಾ ಸರಿಯಾಗಿ ನಿಯಂತ್ರಿಸದೆ ಇರುವ ಸಕ್ಕರೆ ಕಾಯಿಲೆ ರೋಗಿಗಳಲ್ಲಿ ನರಗಳ ತೊಂದರೆಯನ್ನೂ ಉಂಟುಮಾಡಬಹುದು, ಎಲ್ಲ ಅಂಗಾಂಗಗಳ , ನರಗಳ, ಕಾರ್ಯದಲ್ಲಿ ವ್ಯತ್ಯಯ ಉಂಟಾಗುವುದನ್ನು ನೀವು ತಿಳಿದಿರುವುದಾದರೂ ಸೂಕ್ಷ್ಮ ನರಗಳು ಸಕ್ಕರೆ ಕಾಯಿಲೆಗೆ ಬೇಗನೆ ತುತ್ತಾಗಿ ನಿಷ್ಕ್ರಿಯವಾಗಬಹುದು.

ಕೈ ಕಾಲುಗಳ ನರ ಸಂಬಂಧಿತ ಬಾದೆಯು ಶರೀರದ ಒಳಗಿರುವ ಅಂಗಾಂಗಗಳ ಭಾಗದ ನರ ಸಂಬಂಧಿತ ಸಮಸ್ಯೆಯು ಬೇರೆಯೇ ಇರುತ್ತದೆ.

ಈ ಕಾರಣದಿಂದಾಗಿ ಕೈ ಕಾಲು ಉರಿ, ಜೋಮು, ಸೆಳೆತ, ಮರಗಟ್ಟುವುದು, ಸ್ಪರ್ಶತೆ ತಿಳಿಯದೆ ಇರುವುದು ಗಾಯಗಳು ವಾಸಿಯಾಗದಿರುವುದು ಇತ್ಯಾದಿ ಸಮಸ್ಯೆ ಕಂಡುಬರಬಹುದು, ಆದರೆ ಶರೀರದ ಒಳಭಾಗಗಳ ಅಂಗಗಳಿಗೆ ಸ್ಪರ್ಶ ಅಥವಾ ನೋವಿನ ನರಗಳ ಸಮಸ್ಯೆ ಸಕ್ಕರೆ ಕಾಯಿಲೆಯವರಲ್ಲಿ ಉಂಟಾದರೆ ಯಾವುದೇ ರೀತಿಯ ಅನಾಹುತವಾದರೂ ರೋಗಿಗಳಿಗೆ ತಿಳಿಯದೇ ಇರಬಹುದು.

ಈ ಕಾರಣಕ್ಕಾಗಿ ಬಹು ವರ್ಷಗಳಿಂದ ನರಳುತ್ತಿರುವ ಸಕ್ಕರೆ ಕಾಯಿಲೆ ರೋಗಿಗಳು ನೋವಿಲ್ಲದ ಹೃದಯಾಘಾತವನ್ನು ತಕ್ಷಣ ಗುರುತಿಸಲು ಸಾಧ್ಯವಾಗುವುದಿಲ್ಲ, ತಕ್ಷಣ ವಿಪರೀತ ಬೆವರುವಿಕೆ, ತಲೆ ಸುತ್ತುವುದು, ಉಸಿರಾಟ ಕಷ್ಟವಾಗುವುದು, ಸುಸ್ತು, ವಾಂತಿ ಇತ್ಯಾದಿ ರೋಗ ಲಕ್ಷಣಗಳು ಅಂತಹವರಲ್ಲಿ ಕಂಡುಬರುವುದು.

ಈ ದೃಷ್ಟಿಯಿಂದ ಯಾವುದೇ ಸಕ್ಕರೆ ಕಾಯಿಲೆ ರೋಗಿಗಳಿಗೆ ಎಚ್ಚರಿಕೆ, ಈ ಸಮಸ್ಯೆಯು ಪುರುಷರು ಮತ್ತು ಮಹಿಳೆಯರಲ್ಲೂ ಕಂಡು ಬರುತ್ತದೆ, ಈ ರೀತಿಯ ಸಮಸ್ಯೆಯ ಪ್ರತಿ 100 ಸಕ್ಕರೆ ಕಾಯಿಲೆ ರೋಗಿಗಳಲ್ಲಿ ಒಬ್ಬರಿಗೆ ನೋವಿಲ್ಲದ ಹೃದಯಾಘಾತ ಎಂದು ವಿಶ್ಲೇಷಣೆ ತಿಳಿಸಿದೆ, ಸರಿಯಾದ ಸಮಯದಲ್ಲಿ ಚಿಕಿತ್ಸೆ ನೀಡದೆ ಹೋದರೆ ಮರಣವು ಸಂಭವಿಸುವ ಸಾಧ್ಯತೆ ಜಾಸ್ತಿ ಅದರಲ್ಲೂ ರಾತ್ರಿಯ ವೇಳೆ ಉಂಟಾದರೆ ಹಾರ್ಟ್ ಅಟ್ಯಾಕ್ ಎಂದು ಗುರುತಿಸಲು ರೋಗಿಗಾಗಲಿ, ಮನೆಯವರಿಗಾಗಲಿ ಗೊತ್ತಾಗುವುದಿಲ್ಲ.

Comments are closed.