ರಾಷ್ಟ್ರೀಯ

ಪ್ರಧಾನಿ ಮೋದಿಗೆ ಅಮೆರಿಕದ ನಾರ್ತ್ ವೆಸ್ಟ್ರನ್ ಯುನಿವರ್ಸಿಟಿಯಿಂದ ಕೊಡಮಾಡಲಾಗುವ ಫಿಲಿಪ್ ಕೋಟ್ಲರ್ ಪ್ರಶಸ್ತಿ

Pinterest LinkedIn Tumblr

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಗೆ ಅಮೆರಿಕದ ನಾರ್ತ್ ವೆಸ್ಟ್ರನ್ ಯುನಿವರ್ಸಿಟಿಯಿಂದ ಕೊಡಮಾಡಲಾಗುವ ಚೊಚ್ಚಲ ಫಿಲಿಪ್ ಕೋಟ್ಲರ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

ವಿಶ್ವಮಟ್ಟದಲ್ಲಿ ಅದ್ವಿತೀಯ ಸಾಧಕ ನಾಯಕರಿಗೆ ಈ ಪ್ರಶಸ್ತಿಯನ್ನು ಈ ಬಾರಿಯಿಂದ ಪ್ರತಿ ವರ್ಷ ನೀಡಲಾಗುತ್ತದೆ. ಪ್ರಶಸ್ತಿಗೆ ಭಾಜನರಾದ ಮೊದಲ ವಿಶ್ವನಾಯಕ ಎಂಬ ಹೆಗ್ಗಳಿಕೆಗೆ ಪ್ರಧಾನಿ ನರೇಂದ್ರ ಮೋದಿ ಪಾತ್ರರಾಗಿದ್ದಾರೆ. ಪೀಪಲ್, ಪ್ರಾಫಿಟ್ ಮತ್ತು ಪ್ಲಾನೆಟ್ ಎಂಬ ಮೂರು ಅಂಶಗಳನ್ನಿಟ್ಟುಕೊಂಡು ಅರ್ಹ ಸಾಧಕರನ್ನು ಪ್ರಶಸ್ತಿಗಾಗಿ ಆಯ್ಕೆ ಮಾಡಲಾಗುತ್ತದೆ.

ಭಾರತಕ್ಕೆ ಪ್ರಧಾನಿ ಮೋದಿ ನೀಡಿರುವ ಅದ್ಭುತ ನಾಯಕತ್ವದ ಕೊಡುಗೆಯನ್ನು ಗುರಿತಿಸಿ ಪ್ರಶಸ್ತಿಗೆ ಅವರನ್ನು ಆಯ್ಕೆ ಮಾಡಲಾಗಿದೆ. ಫಿಲಿಪ್‌ ಕೋಟ್ಲರ್‌ ಅವರು ನಾರ್ತ್‌ ವೆಸ್ಟರ್ನ್ ಯುನಿವರ್ಸಿಟಿಯ ಅತ್ಯಂತ ಪ್ರತಿಭಾನ್ವಿತ ಮಾರ್ಕೆಟಿಂಗ್‌ ಪ್ರೊಫೆಸರ್‌ ಆಗಿದ್ದು ಅನಾರೋಗ್ಯದ ನಿಮಿತ್ತ ಪ್ರಶಸ್ತಿ ಪ್ರದಾನಕ್ಕೆ ಗೈರಾಗಿದ್ದರು. ಅವರ ಪರವಾಗಿ ಜಾರ್ಜಿಯದ ಎಮರಿ ವಿವಿ ಯ ಜಗದೀಶ್‌ ಸೇಟ್‌ ಅವರು ಪ್ರಧಾನಿ ಮೋದಿ ಅವರಿಗೆ ಫಿಲಿಪ್‌ ಕೋಟ್ಲರ್‌ ಪ್ರಶಸ್ತಿ ನೀಡಿ ಗೌರವಿಸಿದರು.

Comments are closed.