ಕರಾವಳಿ

ಎಂಎಲ್​ಸಿ ಬಿ.ಎಂ.ಫಾರೂಕ್​ ಮಗಳ ಮದುವೆ : ಮುಖ್ಯಮಂತ್ರಿ ಕುಮಾರಸ್ವಾಮಿ ಕುಟುಂಬ ಸಹಿತಾ ಗಣ್ಯರ ದಂಡು ಮಂಗಳೂರಿನಲ್ಲಿ..

Pinterest LinkedIn Tumblr

ಮಂಗಳೂರು / ಉಳ್ಳಾಲ, ನವೆಂಬರ್. 17: ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಹಾಗೂ ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ ಅವರು ಕುಟುಂಬ ಸಮೇತ ಉಳ್ಳಾಲದ ಸೋಮೇಶ್ವರದಲ್ಲಿ ಶುಕ್ರವಾರ ನಡೆದ ಎಂಎಲ್​ಸಿ ಬಿ.ಎಂ.ಫಾರೂಕ್​ ಅವರ ಮಗಳ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ವಿಧಾನ ಪರಿಷತ್ ಸದಸ್ಯ, ಫಿಝಾ ಗ್ರೂಪ್‍ ಮಾಲಕ ಬಿ.ಎಂ ಫಾರೂಕ್ ಅವರ ಪುತ್ರಿ ಫಿಝಾ ಹಾಗೂ ಕೇರಳದ ಉದ್ಯಮಿ ರೋಶನ್ ಅವರ ನಿಖಾಹ್ ಸಮಾರಂಭ ಉಳ್ಳಾಲ ಕಡಲ ತೀರದ ವಿಶಾಲ ಬಂಗ್ಲೆಯ ಕ್ಯಾಂಪಸ್‍ನಲ್ಲಿ ಶುಕ್ರವಾರ ಸಂಜೆ ನಡೆಯಿತು.

ಮದುವೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹಾಗೂ ಕುಟುಂಬದ ಸದಸ್ಯರು ಸೇರಿದಂತೆ ಗಣ್ಯರು ಭಾಗವಹಿಸಿ, ಬಿ.ಎಂ.ಫಾರೂಕ್ ಅವರ ಆತಿಥ್ಯ ಸ್ವೀಕರಿಸಿದರು. ಬಿಗಿ ಬಂದೋಬಸ್ತ್​ನಲ್ಲಿ ಮಂಗಳೂರು ವಿಮಾನ ನಿಲ್ದಾಣದಿಂದ ನೇರವಾಗಿ ಕಾರಿನಲ್ಲಿ‌ ಬಂದಿಳಿದ ಮುಖ್ಯಮಂತ್ರಿ ಕುಮಾರಸ್ವಾಮಿ, ಹೆಚ್.ಡಿ.ರೇವಣ್ಣ, ಹೆಚ್.ಡಿ.ದೇವೇಗೌಡ, ಅನಿತಾ ಕುಮಾರಸ್ವಾಮಿ, ದೇವೇಗೌಡರ ಪತ್ನಿ ಚೆನ್ನಮ್ಮ ಹಾಗೂ ಕುಟುಂದವರನ್ನು ಬಿ.ಎಂ.ಫಾರೂಕ್ ಹಾಗೂ ಮಾಜಿ ಶಾಸಕ ಮೊಯ್ದಿನ್ ಬಾವ ಸ್ವಾಗತಿಸಿದರು.

ಫಾರೂಕ್ ಅವರ ಮನೆ ಸೇರಿದಂತೆ ಕ್ಯಾಂಪಸ್‍ನ್ನು ವಿದ್ಯುತ್ ದೀಪ, ಹೂವಿನಿಂದ ಅಲಂಕರಿಸಲಾಗಿತ್ತು. ಫಾರೂಕ್ ಪುತ್ರಿ ವಧುವಿಗೆ ಹಾಗೂ ವರ ರೋಶನ್‍ಗೆ ನಿಖಾಹ್ ಹಾಗೂ ವಿಶ್ರಾಂತಿಗಾಗಿ ವಿಶೇಷ ವೇದಿಕೆ ನಿರ್ಮಿಸಲಾಗಿತ್ತು. ಮನೆಯ ಮುಂಭಾಗದಲ್ಲಿ ಅತಿಥಿಗಳನ್ನು ಸ್ವಾಗತಿಸಿದ ಬಳಿಕ ಮನೆಯ ಹಿಂಭಾಗದ ಸಮುದ್ರತಟದ ಕ್ಯಾಂಪಸ್‍ನಲ್ಲಿ ಭೋಜನ, ಸಂಗೀತ ರಸಿಕರಿಗಾಗಿ ಗಝಲ್ ಏರ್ಪಡಿಸಲಾಗಿತ್ತು.

ಮುಖ್ಯಮಂತ್ರಿ ಕುಮಾರಸ್ವಾಮಿ, ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ, ಅವರ ಪತ್ನಿ ಚೆನ್ನಮ್ಮ, ಕುಮಾರ ಸ್ವಾಮಿ ಪತ್ನಿ ಶಾಸಕಿ ಅನಿತಾ ಕುಮಾರ ಸ್ವಾಮಿ, ಸಚಿವ ಎಚ್.ಡಿ. ರೇವಣ್ಣ, ಪತ್ನಿ ಭವಾನಿ ರೇವಣ್ಣ, ಕುಮಾರಸ್ವಾಮಿ ಪುತ್ರ ಚಿತ್ರನಟ ನಿಖಿಲ್ ಗೌಡ, ಯುವ ನಾಯಕ ಪ್ರಜ್ವಲ್, ಸಚಿವ ಜಮೀರ್ ಅಹ್ಮದ್, ಸಂಸದ ಎಲ್. ಶಿವರಾಮೇಗೌಡ, ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್, ವಿಧಾನ ಪರಿಷತ್ ಸದಸ್ಯ ಭೋಜೇಗೌಡ, ಶಾಸಕ ಬಸವರಾಜ್ ಹೊರಟ್ಟಿ, ಫಾರೂಕ್ ಅವರ ಸಹೋದರ ಮಂಗಳೂರು ಉತ್ತರ ಕ್ಷೇತ್ರದ ಮಾಜಿ ಶಾಸಕ ಮೊಯ್ದಿನ್ ಬಾವ, ಮಾಜಿ ಸಚಿವರಾದ ಅಮರನಾಥ ಶೆಟ್ಟಿ, ಬಿ. ರಮನಾಥ ರೈ ಮೊದಲಾದವರು ಭಾಗವಹಿಸಿ ವಧುವರರನ್ನು ಹಾರೈಸಿ ಬಳಿಕ ಸಮುದ್ರ ತಟದಲ್ಲಿ ನಡೆದ ಔತಣ ಕೂಟದಲ್ಲಿ ಪಾಲ್ಗೊಂಡರು.

Comments are closed.