ಕರಾವಳಿ

ದೇಹದ ದಾಹಕ್ಕೆ ಸಕ್ಕರೆ ಪಾನಕಕ್ಕಿಂತ ಬೆಲ್ಲದ ಪಾನಕ ಉತ್ತಮ

Pinterest LinkedIn Tumblr

ಸತ್ವಪೂರ್ಣ ಸಿಹಿ ಪದಾರ್ಥ ಎಲ್ಲವೂ ನಮ್ಮ ದೇಹಕ್ಕೆ ಶಕ್ತಿಯನ್ನು ಒದಗಿಸುವ ಅಮೂಲ್ಯ ವಸ್ತು, ಯಾವುದಾದರೊಂದು ಬಗೆಯ ಪಾಯಸವನ್ನು ಹಾಗಾಗೆ ಸೇವಿಸುತ್ತಿರುವುದು ಒಳ್ಳೆಯದು, ಆ ಮೂಲಕ ಹಳೆ ಬೆಲ್ಲ ದೇಹ ಗತವಾಗಿ ನಮ್ಮ ಆರೋಗ್ಯ ಸುಧಾರಿಸುವುದು, ಬಾಳೆಹಣ್ಣು ಕೊಬ್ಬರಿ ಮತ್ತು ಹಳೆಬೆಲ್ಲ ಸೇರಿಸಿ ತಯಾರಿಸಿದ ರಸಾಯನ ಸಂಪೂರ್ಣ ಶಕ್ತಿ ಆಹಾರ.

ಸಿಹಿ ಮೊಸರಿನೊಂದಿಗೆ ಸ್ವಲ್ಪ ಹಳೆಬೆಲ್ಲವನ್ನು ಕುದಿಸಿ ಸೇವಿಸುವುದರಿಂದ ಮೂಗಿನಿಂದ ಸಿಂಬಳ ಸುರಿಯುತ್ತಿದ್ದರೆ ಕಡಿಮೆಯಾಗುವುದು. ಗೋಲಿ ಗಾತ್ರ ಹಸುವಿನ ತುಪ್ಪದಲ್ಲಿ ಅಷ್ಟೇ ಗಾತ್ರ ಬೆಲ್ಲ ಸೇರಿಸಿ ಪ್ರತಿದಿನ ಬೆಳಗ್ಗೆ ಸೇವಿಸಿ, ಈ ಕ್ರಮ ನಾಲ್ಕೈದು ದಿನಗಳು ಅನುಸರಿಸಿದರೆ ತಲೆನೋವು ಗುಣವಾಗುವುದು.

ಒಂದು ವರ್ಷ ಹಳೆಯದಾದ ಬೆಲ್ಲವು ಹೆಚ್ಚು ಗುಣಕಾರಿ, ಈ ಹಳೆಬೆಲ್ಲ ಮತ್ತು ಕರಿಎಳ್ಳು ಸಮ ಪ್ರಮಾಣದಲ್ಲಿ ತೆಗೆದುಕೊಂಡು ಹಾಲಿನೊಂದಿಗೆ ನುಣ್ಣಗೆ ಅರೆಯಿರಿ, ಈ ಚಟ್ನಿಗೆ ತುಪ್ಪ ಸೇರಿಸಿ ಕಾಯಿಸಿ ಬಿಸಿಯಾಗಿರುವಾಗಲೇ ಹಣೆಗೆ, ಕಪಾಲಗಳಿಗೆ ಹಚ್ಚಿ ತಲೆನೋವು ನಿವಾರಣೆಯಾಗುವುದು.

ಸ್ವಲ್ಪ ತುಪ್ಪದೊಂದಿಗೆ ಹಳೆಬೆಲ್ಲವನ್ನು ಕುದಿಸಿ ಬಿಸಿ ಮಾಡಿ, ಬಿಸಿಯಾದ ಈ ಮಿಶ್ರಣವನ್ನು ಹುಳುಕಿರುವ ಭಾಗಕ್ಕೆ ಲೇಪಿಸಿ ಕಟ್ಟು ಕಟ್ಟುವುದರಿಂದ ಗುಣ ಕಂಡು ಬರುವುದು.ದಾಹ ಶಾಂತಿಗೆ ಸಕ್ಕರೆ ಪಾನಕಕಿಂತ ಬೆಲ್ಲದ ಪಾನಕ ಉತ್ತಮ, ಈ ಮಾಹಿತಿ ನಿಮಗೆ ಇಷ್ಟವಾದರೆ ಮರೆಯದೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

Comments are closed.