ಕರಾವಳಿ

ಮೂವರು ಬೈಕ್ ಚೋರರ ಸೆರೆ : 12 ಬುಲೆಟ್ ಬೈಕ್ ಸಹಿತಾ 20 ಲಕ್ಷ ರೂ. ಮೌಲ್ಯದ 15 ದ್ವಿಚಕ್ರ ವಾಹನ ವಶ

Pinterest LinkedIn Tumblr

ಮಂಗಳೂರು, ನವೆಂಬರ್.15: ಅಂತರ್ ರಾಜ್ಯ ಮೋಟಾರ್ ವಾಹನ ಕಳ್ಳತನದ 15 ಪ್ರಕರಣಗಳನ್ನು ಭೇದಿಸಿ 3 ಜನ ಆರೋಪಿಗಳನ್ನು ಹಾಗೂ 20 ಲಕ್ಷ ರೂ. ಮೌಲ್ಯದ 15 ದ್ವಿಚಕ್ರ ವಾಹನಗಳನ್ನು ಸ್ವಾಧೀನಪಡಿಸಿಕೊಳ್ಳುವಲ್ಲಿ ಉಳ್ಳಾಲ ಪೊಲೀಸ್ ಠಾಣೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.

ಕೇರಳದ ಕಾಸರಗೋಡು ಜಿಲ್ಲೆಯ ಮಂಜೇಶ್ವರ ನಿವಾಸಿ ಶಾಹಿರ್ (23),ಕಾಸರಗೋಡು ಜಿಲ್ಲೆಯ ಉಪ್ಪಳ ನಿವಾಸಿ ಮುಹಮ್ಮದ್ ಆದಿಲ್ (26), ಕಾಸರಗೋಡಿನ ಅಬ್ದುಲ್ ಮುನಾವರ್ @ ಮುನ್ನ (21) ಬಂಧಿತ ಆರೋಪಿಗಳು.

ಆರೋಪಿಗಳನ್ನು ತನಿಖೆಗೆ ಒಳಪಡಿಸಿದಾಗ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಗಳಿಂದ ಬುಲೆಟ್ ಸೇರಿದಂತೆ ಒಟ್ಟು 15 ದ್ವಿಚಕ್ರ ವಾಹನಗಳನ್ನು ಕಳ್ಳತನ ನಡೆಸಿರುವುದು ಪತ್ತೆಯಾಗಿದೆ.

ಉಳ್ಳಾಲ ಠಾಣೆ ವ್ಯಾಪ್ತಿಯ 4 ಪ್ರಕರಣಗಳಲ್ಲಿ ಒಟ್ಟು 4 ಬುಲೆಟ್ ಬೈಕ್‌ಗಳು, ಮಂಗಳೂರು ದಕ್ಷಿಣ ಪೊಲೀಸ್ ಠಾಣೆ ವ್ಯಾಪ್ತಿಯ 6 ಪ್ರಕರಣಗಳಲ್ಲಿ ಒಟ್ಟು 5 ಬುಲೆಟ್ ಬೈಕ್‌ಗಳು ಮತ್ತು 1 ಸ್ಕೂಟರ್, ಮಂಗಳೂರು ಉತ್ತರ ಪೊಲೀಸ್ ಠಾಣಾ ವ್ಯಾಪ್ತಿ 2 ಪ್ರಕರಣಗಳಲ್ಲಿ 1 ಬುಲೆಟ್ ಬೈಕ್ ಮತ್ತು 1 ಮೋಟಾರು ಸೈಕಲ್, ಮಂಗಳೂರು ಉರ್ವ ಪೊಲೀಸ್ ಠಾಣಾ ವ್ಯಾಪ್ತಿ 2 ಪ್ರಕರಣಗಳಲ್ಲಿ ಒಟ್ಟು 2 ಬುಲೆಟ್ ಬೈಕ್, ಮಂಗಳೂರು ಪೂರ್ವ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಒಂದು ಬೈಕ್‌ಗಳನ್ನು ಕಳವು ಮಾಡಲಾಗಿತ್ತು.

ಆರೋಪಿಗಳಿಂದ 15 ದ್ವಿಚಕ್ರ ವಾಹನ ಕಳ್ಳತನ ಪ್ರಕರಣಗಳಲ್ಲಿ ಒಟ್ಟು 12 ಬುಲೆಟ್ ಮೋಟಾರ್ ಸೈಕಲ್ ಗಳನ್ನು ಹಾಗೂ 2 ಮೋಟಾರ್ ಸೈಕಲ್ ಮತ್ತು 1 ಸ್ಕೂಟರ್ ದ್ವಿಚಕ್ರ ವಾಹನ ಸೇರಿದಂತೆ 20 ಲಕ್ಷ ರೂಪಾಯಿ ಮೌಲ್ಯದ ಒಟ್ಟು 15 ದ್ವಿ ಚಕ್ರ ವಾಹನಗಳನ್ನು ಸ್ವಾದೀನಪಡಿಸಿಕೊಳ್ಳಲಾಗಿದೆ.

ಪೊಲೀಸ್‌ ಅಯುಕ್ತರಾದ ಟಿ.ಆರ್.ಸುರೇಶ್, ಐ.ಪಿ.ಎಸ್, ಮಂಗಳೂರು ನಗರ ರವರ ನಿರ್ದೇಶನದಂತೆ, ಹನುಮಂತರಾಯ, ಐ.ಪಿ.ಎಸ್, ಡಿ.ಸಿ.ಪಿ ಕಾನೂನು ಮತ್ತು ಸುವ್ಯವಸ್ಥೆ, ಹಾಗೂ ಶ್ರೀಮತಿ ಉಮಾಪ್ರಶಾಂತ್, ಡಿ.ಸಿ.ಪಿ, ಅಪರಾಧ ಮತ್ತು ಸಂಚಾರ, ರವರುಗಳ ಮಾರ್ಗದರ್ಶನದಲ್ಲಿ ಮಂಗಳೂರು ದಕ್ಷಿಣ ಉಪ ವಿಭಾಗದ ಮಾನ್ಯ ಸಹಾಯಕ ಪೊಲೀಸ್‌ ಅಯುಕ್ತರಾದ ರಾಮರಾವ್‌ ಕೆ ರವರ ಸೂಚನೆಯಂತೆ ಉಳ್ಳಾಲ ಪೊಲೀಸ್‌ ಠಾಣಾ ಪೊಲೀಸ್‌ ನಿರೀಕ್ಷಕರಾದ ಗೋಪಿಕೃಷ್ಣ ಕೆ.ಅರ್‌. ಅವರ ನೇತೃತ್ವದಲ್ಲಿ ಠಾಣಾ ಪಿಎಸ್‌ಐ ಗಳಾದ ವಿನಾಯಕ ತೋರಗಲ್‌ ಮತ್ತು ಗುರಪ್ಪ ಕಾಂತಿ, ಹಾಗೂ ಎ.ಎಸ್.ಐ ಗಳಾದ ವಿಜಯರಾಜ್, ಮೋಹನ್.ಕೆ.ವಿ, ರಾಧಕೃಷ್ಣ ವಳಾಲ್, ವಿಶ್ವನಾಥ ರೈ ಹಾಗೂ ಸಿಬ್ಬಂದಿಗಳಾದ ದಿನೇಶ್‌, ಸುರೇಶ್, ಜಯಪ್ರಕಾಶ್, ಪ್ರವೀಣ್, ಶಾಂತಪ್ಪ, ಪ್ರಶಾಂತ್‌, ವಾಸುದೇವ,   ರಂಜಿತ್‌, ಲಿಂಗರಾಜ್‌,ಚಿದಾನಂದ, ಅಕ್ಬರ್‌, ಸುರೇಶ್‌ ಮುಂತಾದವರು ಪತ್ತೆ ಕಾರ್ಯದಲ್ಲಿ ಸಹಕರಿಸಿರುತ್ತಾರೆ.

Comments are closed.