
ಮಂಗಳೂರು: ಸೋಮವಾರ ವಿಧಿವಶರಾದ ಕೇಂದ್ರ ಸಚಿವ ಅನಂತಕುಮಾರ್ ಅವರ ಬಗ್ಗೆ ಫೇಸ್ಬುಕ್ನಲ್ಲಿ ಕೀಳುಮಟ್ಟದ ಪೋಸ್ಟ್ ಹಾಕುವ ಮೂಲಕ ವಿಕೃತಿ ಮೆರೆದಿರುವ ಫೇಸ್‌ಬುಕ್ ಪೇಜ್ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.
ಅನಂತಕುಮಾರ್ ಸಾವಿನ ಬೆನ್ನಲ್ಲೇ ಮಂಗಳೂರು ಮುಸ್ಲಿಮ್ಸ್’ ಎನ್ನುವ ಫೇಸ್‌ಬುಕ್ ಪೇಜ್ ನಲ್ಲಿ ಕೇಂದ್ರ ಸಚಿವರ ಬಗ್ಗೆ ಅವಹೇಳನಕಾರಿಯಾಗಿ ಕೀಳುಮಟ್ಟದ ಪೋಸ್ಟ್ ಅನ್ನು ತನ್ನ ಖಾತೆಯಲ್ಲಿ ಪ್ರಕಟಿಸಿತ್ತು. ಇದು ಭಾರಿ ಆಕ್ರೋಶಕ್ಕೆ ಗುರಿಯಾಗಿತ್ತು.
ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಮಂಗಳೂರು ದಕ್ಷಿಣದ ಪಾಂಡೇಶ್ವರ ಠಾಣೆ ಪೊಲೀಸರು ‘ಮಂಗಳೂರು ಮುಸ್ಲಿಮ್ಸ್’ ಫೇಸ್‌ಬುಕ್ ಪೇಜ್ ವಿರುದ್ಧ ಐಟಿ ಕಾಯ್ದೆ ನಿಯಮಾವಳಿ ಪ್ರಕಾರ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.

ಇದೇ ಫೇಸ್‌ಬುಕ್ ಪೇಜ್ ಮೋದಿ, ಯೋಗಿ ಆದಿತ್ಯನಾಥ ಇನ್ನೂ ಕೆಲವರ ಸಾವನ್ನು ಕೋರಿ ಪೋಸ್ಟ್ ಮಾಡಿತ್ತು. ಅಷ್ಟೆ ಅಲ್ಲದೆ, ಕಮೆಂಟ್‌ಗಳಲ್ಲೂ ಸಹ ಕೀಳು ಭಾಷೆಯನ್ನು ಬಳಸಿತ್ತು.
ಮಂಗಳೂರು ಮುಸ್ಲಿಂ ಈ ಮುಂಚೆ ಸಹ ವಿವಾದಾತ್ಮಕ ಪೋಸ್ಟ್‌ಗಳನ್ನು ಹಾಕಿ ಸುದ್ದಿಯಾಗಿತ್ತು. ಈ ಬಾರಿಯ ಅನಂತ್ ಕುಮಾರ್ ಬಗೆಗಿನ ಪೋಸ್ಟ್ ಬಗ್ಗೆ ಭಾರಿ ಆಕ್ರೋಶ ವ್ಯಕ್ತಪಡಿಸಿದ್ದರು, ಮುಸ್ಲಿಂ, ಹಿಂದೂ ಎಲ್ಲರೂ ಪೋಸ್ಟ್‌ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಮಾತ್ರವಲ್ಲದೇ ಇಂತಹ ಪೋಸ್ಟ್ ಮಾಡಿರುವ ಕಿಡಿಗೇಡಿಗಳನ್ನು ಶೀಘ್ರವೇ ಬಂಧಿಸುವಂತೆ ಒತ್ತಾಯಿಸಲಾಗಿದೆ.
ಕಮೆಂಟ್ ಬಗ್ಗೆ ನೆಟ್ಟಿಗರ ಆಕ್ರೋಷ ; ಬಂಧನಕ್ಕೆ ಆಗ್ರಹ
ಇದೀಗ ಮಂಗಳೂರು ಮುಸ್ಲಿಂ ಫೇಸ್ ಬುಕ್ ಪೇಜ್ ವಿರುದ್ಧ ನೆಟ್ಟಿಗರು ಕಮೆಂಟ್ ಗಳ ಸುರಿಮಳೆ ಗೈದಿದ್ದಾರೆ. ‘ಮುಸ್ಲಿಂ ನಾಮಧಾರಿ ಆದರೆ ಸಾಲೋದಿಲ್ಲ. ನಿಜವಾದ ಮುಸಲ್ಮಾನನಾಗಬೇಕು ಈ ಪೇಜನ್ನು ತನಿಖೆಗೆ ಒಳಪಡಿಸಿ . ಸಾವನ್ನು ಸಂಭ್ರಮಿಸುವ ವಿಕೃತ ಮನೋಭಾವ ಉಳ್ಳವ ಮುಸಲ್ಮಾನನಾಗಲಾರ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.
ಕೆಲವರು ತಮ್ಮ ಕಮೆಂಟ್ ನಲ್ಲಿ ಅನಂತ ಕುಮಾರ್ ಅವರ ಸಾವನ್ನು ಸಂಭ್ರಮಿಸಿದ ‘ಮಂಗಳೂರು ಮುಸ್ಲಿಂ’ ಫೇಸ್ ಬುಕ್ ಪೇಜ್ ನವರು ಭಯೋತ್ಪಾದರು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾವನ್ನು ಸಂಭ್ರಮಿಸುವ ಯಾರೊಬ್ಬನನ್ನು ಸಮರ್ಥಿಸಲು ಸಾಧ್ಯವಿಲ್ಲ. ಈ ಫೇಸ್ ಬುಕ್ ಪೇಜ್ ಅನ್ನು ತನಿಖೆಗೆ ಒಳಪಡಿಸಿ. ಈ ಅವಹೇಳಕಾರಿ ಪೋಸ್ಟ್ ಪ್ರಕಟಿಸಿದವರನ್ನು ಬಂಧಿಸಿ ಎಂದು ಒತ್ತಾಯ ಕೂಡ ಕೇಳಿಬರತೊಡಗಿದೆ. ಉಗ್ರರು ಎಂದಾದರೂ ಶ್ರದ್ಧಾಂಜಲಿ ಹೇಳಬಹುದೇ ಎಂದು ನೆಟ್ಟಿಗರು ಪ್ರಶ್ನಿಸಿ ಚಾಟಿ ಏಟು ನೀಡಿದ್ದಾರೆ.
Comments are closed.