ಕರಾವಳಿ

ಕುಂದಾಪುರ ಬೇಳೂರಿನ ‘ಸ್ಪೂರ್ತಿಧಾಮ’ದ ಮಕ್ಕಳಿಗೆ ಏಕಲವ್ಯ ಕತೆ ಹೇಳಿದ್ದರು ಅನಂತ ಕುಮಾರ್!

Pinterest LinkedIn Tumblr

ಕುಂದಾಪುರ: ಬೇಳೂರು ಸ್ಪೂರ್ತಿಧಾಮಕ್ಕೆ ನೀಡುತ್ತಿದ್ದ ಅನುದಾನ ಉಡುಪಿ ಜಿಲ್ಲಾ ಪಂಚಾಯಿತಿ ನಿಲ್ಲಿಸಿದ್ದರಿಂದ ಮಕ್ಕಳ ಊಟಕ್ಕಾಗಿ ಭಿಕ್ಷಾಟನೆ ಮಾಡುತ್ತಿದ್ದ ಸಂದರ್ಭ ಸ್ಪೂರ್ತಿಧಾಮಕ್ಕೆ ಸಂಸದ ಅನಂತ ಕುಮಾರ್ ಭೇಟಿ ನೀಡಿ ಏಕಲವ್ಯನ ಕತೆ ಹೇಳಿದ್ದರು.

ಅಂದು ವಿಧಾನ ಪರಿಷತ್ ಸದಸ್ಯರಾಗಿದ್ದ ಡಾ.ವಿ.ಎಸ್.ಆಚಾರ್ಯ ಜತೆ ಸ್ಪೂರ್ತಿಧಾಮಕ್ಕೆ ಆಗಮಸಿದ ಅನಂತ ಕುಮಾರ್ ಜಿಲ್ಲಾ ಪಂಚಾಯಿತಿ ಅನುದಾನ ನಿಲ್ಲಿಸಿದ ಬಗ್ಗೆ ಮಾಹಿತಿ ಪಡೆದು, ಮಕ್ಕಳು ಊಟಕ್ಕಾಗಿ ಭಿಕ್ಷಾಟನೆ ಮಾಡುತ್ತಿರುವ ಬಗ್ಗೆ ಖೇದ ವ್ಯಕ್ತಪಡಿಸಿ, ಸಂದರ ನಿಧಿಯಿಂದ 10 ಲಕ್ಷ ರೂ.ನೀಡುವುದಾಗಿ ಘೋಷಿಸಿ, ಕೊಟ್ಟ ಮಾತಿನಂತೆ ಅನುದಾನ ನೀಡಿದ್ದರು.

(ಸ್ಪೂರ್ತಿಧಾಮದ ಮುಖ್ಯಕಾರ್‍ಯನಿರ್ವಾಹಕ ಡಾ,ಕೇಶವ ಕೋಟೇಶ್ವರ ಜೊತೆ ಮಾತುಕತೆ. ಈ ವೇಳೆ ವಿ.ಎಸ್. ಆಚಾರ್ಯ ಕೂಡ ಇದ್ದರು.)

ಶಿಕ್ಷಣ ಮಕ್ಕಳ ಹಕ್ಕಾಗಿದ್ದು, ಹಿಂದುಳಿದ ವರ್ಗಗಳ ಮಕ್ಕಳಿಗೆ ಪ್ರೋತ್ಸಾಹ ನೀಡಿದರೆ, ಅವರಲ್ಲಿರುವ ಬುದ್ದಿಮೆತ್ತೆ ಗುರುತಿಸಿ ಉತ್ತೇಜಿಸಿದರೆ ಮುಂದುವರಿಯಲು ಸಾಧ್ಯ. ಏಕಲವ್ಯ ಹಿಂದುಳಿದ ವರ್ಗಕ್ಕೆ ಸೇರಿದ್ದರೂ ದ್ರೋಣರ ಗುರುವಾಗಿಟ್ಟುಕೊಂಡು ಗುರುವನ್ನೇ ಮೀರಿಸಿದ ಶಿಷ್ಯನಾದ ಕತೆ ಹೇಳಿ ಸ್ಪೂರ್ತಿಧಾಮದಲ್ಲಿರುವ ಮಕ್ಕಳು ಏಕಲವ್ಯನಂತೆ ಗುರು ಮೀರಿಸುವ ಶಿಷ್ಯಾಗಬೇಕು. ಎಲ್ಲರಲ್ಲೂ ಬುದ್ದಿಶಕ್ಷಿಯಿದ್ದು, ಅದನ್ನ ಸರಿಯಾಗಿ ಬಳಸಿಕೊಂಡರೆ ಹಿಂದುಳಿದವರೂ ಮುಂದಕ್ಕೆ ಬರಲು ಸಾಧ್ಯ. ಸಮಾಜದ ತಾರತಮ್ಯ ಹೋಗಲಾಡಿಸಲು ಶಿಕ್ಷಣ ಒಂದೇ ಮಾರ್ಗವಾಗಿದ್ದು, ಸಮಾಜದಲ್ಲಿನ ಮೇಲು ಕೀಳು ಹೊಡೆದೋಡಿಸಲು ಶಿಕ್ಷಣವೇ ಪರಿಹಾರ ಎಂದಿದ್ದರು.

ಅನಂತ ಕುಮಾರ್ ಅವರ ಸ್ಪೂರ್ತಿಧಾಮಕ್ಕೆ ಬರಮಾಡಿಕೊಂಡ ಮುಖ್ಯಕಾರ್‍ಯನಿರ್ವಾಹಕ ಡಾ,ಕೇಶವ ಕೋಟೇಶ್ವರ ಅನುದಾನ ಸಮಸ್ಯೆಯಿಂದ ಮಕ್ಕಳ ಊಟಕ್ಕೆ ಆಗುವ ಸಮಸ್ಯೆ ಬಗ್ಗೆ ಮಾಹಿತಿ ನೀಡಿದ್ದು, ವಿದ್ಯಾಭ್ಯಾಸಕ್ಕಾಗಿ ವಸತಿ ಶಾಲೆಗೆ ಬಂದ ಮಕ್ಕಳ ಊಟದ ಸಮಸ್ಯೆ ಆಗಬಾರದು. ಭಿಕ್ಷಾಟನೆ ಮೂಲಕ ಮಕ್ಕಳ ಹಸಿವು ನೀಗಿಸಕೊಳ್ಳಬೇಕು ಎಂದರೆ ಅದು ಅಕ್ಷಮ್ಯ. ಮಕ್ಕಳ ಊಟಕ್ಕಾಗಿ ಅನುದಾನ ನೀಡಲು ಸಿದ್ದ ಎಂಬ ಭರವಸೆ ನೀಡಿ, ಕೊಟ್ಟ ಮಾತು ಉಳಿಸಿಕೊಂಡಿದ್ದರು.

Comments are closed.