ಕರಾವಳಿ

ಗಂಟಾಲ್‌ಕಟ್ಟೆ ಇಮ್ತಿಯಾಝ್ ಕೊಲೆಯತ್ನ ಪ್ರಕರಣ : ಮತ್ತೋರ್ವ ಆರೋಪಿಯ ಸೆರೆ

Pinterest LinkedIn Tumblr

ಮಂಗಳೂರು, ಅಕ್ಟೋಬರ್.28: ಕರಿಂಜೆ ಗ್ರಾಮದ ಗಂಟಾಲ್‌ಕಟ್ಟೆಯ ಬದ್ರಿಯಾ ಹೊಟೇಲ್ ಮಾಲಕ ಇಮ್ತಿಯಾಝ್ ಕೊಲೆಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವ ಆರೋಪಿಯನ್ನು ವಾಮಂಜೂರಿನಲ್ಲಿ ಮೂಡುಬಿದಿರೆ ಪೊಲೀಸರು ವಶಕ್ಕೆ ಪಡೆಸಿದ್ದಾರೆ.

ಬಂಧಿತ ಆರೋಪಿಯನ್ನು ಸುರತ್ಕಲ್ ಸಮೀಪದ ಹೊಸಬೆಟ್ಟು ಮಿತ್ತೋಟ್ಟು ನಿವಾಸಿ ಗುರುಪ್ರಸಾದ್ ಯಾನೆ ಗುರುರಾಜ್ (36) ಎಂದು ಗುರುತಿಸಲಾಗಿದೆ.

ಕರಿಂಜೆ ಗ್ರಾಮದ ಗಂಟಾಲ್‌ಕಟ್ಟೆಯ ಬದ್ರಿಯಾ ಹೊಟೇಲ್‌ನ್ನು ಇಮ್ತಿಯಾಝ್ ಕಳೆದ ಒಂದು ವರ್ಷದಿಂದ ಮಸೀದಿ ಬಳಿ ನಡೆಸಿಕೊಂಡು ಹೋಗುತ್ತಿದ್ದರು. ದಿನಾಂಕ: 24-09-2018 ರಂದು 06.00 ಗಂಟೆಗೆ ಹೋಟೆಲ್‌ಗೆ ಬಂದು ಎಂದಿನಂತೆ ಹೋಟೆಲಿನಲ್ಲಿ ಇರುವ ಸಮಯ ಇನೋವಾ ಕಾರ್‌ವೊಂದರಲ್ಲಿ ಬಂದ ವ್ಯಕ್ತಿಯು ಹೋಟೆಲಿಗೆ ಬಂದು ಇಂತಿಯಾಜ್ ರವರಲ್ಲಿ 10 ಚಹ ಬೇಕೆಂದು ಆರ್ಡರ್ ಮಾಡಿದ್ದು, ಇಂತಿಯಾಜ್ ರವರು ಚಹ ಮಾಡಲೆಂದು ಅಡಿಗೆ ಕೋಣೆಗೆ ಹೋದ ಸಮಯದಲ್ಲಿ ಚಹ ಆರ್ಡರ್ ಮಾಡಿದ ವ್ಯಕ್ತಿಯ ಜೊತೆಯಲ್ಲಿ ಇತರೆ ಮೂವರು ಹೋಟೆಲ್‌‌ನ ಒಳಗೆ ತಲ್ವಾರ್‌ನೊಂದಿಗೆ ಬಂದು ಇಂತಿಯಾಜ್ ರವರಿಗೆ ತಲ್ವಾರ್‌ನಿಂದ ಕಡಿದಿದ್ದು, ಆ ಸಮಯ ಇಂತಿಯಾಜ್ ಹಿಂದಿನ ಬಾಗಿಲಿನಿಂದ ಹೊರಗೆ ಓಡಿ ತಪ್ಪಿಸಿಕೊಂಡಿರುತ್ತಾನೆ.

ಈ ಘಟನೆ ನಡೆಯುವ ಸಂದರ್ಭ ಹಾಜರಿದ್ದ ಇಬ್ರಾಹೀಂ ನೀಡಿದ ದೂರಿನಂತೆ ಮೂಡುಬಿದಿರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನ್ಯಾಯಾಲಯವು ಆರೋಪಿ ಗುರುಪ್ರಸಾದ್ ನನ್ನು 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ.

Comments are closed.