ಕರಾವಳಿ

ಕುಂದಾಪುರ: ವಸತಿ ಯೋಜನೆ ಫಲಾನುಭವಿಗಳಿಗೆ ಮರಳು ಲಭ್ಯ

Pinterest LinkedIn Tumblr

ಉಡುಪಿ: ಕುಂದಾಪುರ: ವಸತಿ ಯೋಜನೆ ಫಲಾನುಭವಿಗಳಿಗೆ ಮರಳು ಲಭ್ಯ ಕುಂದಾಪುರ ತಾಲೂಕಿನ ಕೋಡಿ ವ್ಯಾಪ್ತಿಯಲ್ಲಿ ಮರಳು ಲಭ್ಯವಿದ್ದು, ಅವಶ್ಯಕತೆಗನುಗುಣವಾಗಿ ವಸತಿ ಯೋಜನೆ ಫಲಾನುಭವಿಗಳು ಗ್ರಾಮ ಪಂಚಾಯತ್ ಶಿಫಾರಸು ಪತ್ರ ಪಡೆದು, ಸಹಾಯಕ ಕಾರ್ಯನಿವಾಹಕ ಅಭಿಯಂತರರು, ಲೋಕೋಪಯೋಗಿ ಇಲಾಖೆ, ಕುಂದಾಪುರ ಇವರಿಗೆ ನೀಡಿ , ಮರಳನ್ನು ಪಡೆಯಬಹುದಾಗಿದೆ.

ವಸತಿ ಯೋಜನೆ ಫಲಾನುಭವಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ಉಡುಪಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments are closed.