ಪ್ರಮುಖ ವರದಿಗಳು

ಬಿಗ್​ಬಾಸ್​ ಮನೆಯಿಂದ ಮೊದಲ ವಾರವೇ ಔಟ್ ಆದ ಕ್ರಿಕೆಟ್ ಆಟಗಾರ್ತಿ !

Pinterest LinkedIn Tumblr

ಕಲರ್ಸ್ ಸೂಪರ್ ಸುದ್ದಿವಾಹಿನಿಯಲ್ಲಿ ಪ್ರಸಾರಗೊಳ್ಳುತ್ತಿರುವ ಕನ್ನಡ ಜನಪ್ರೀಯ ರಿಯಾಲಿಟಿ ಶೋ ಬಿಗ್​ಬಾಸ್​ 6ನೇ ಆವೃತ್ತಿ ವೇಗ ಪಡೆದುಕೊಳ್ಳುತ್ತಿದ್ದು, ಮನೆಯಿಂದ ಮೊದಲ ವಾರವೇ ಸ್ಪರ್ಧಿವೊಬ್ಬರು ಹೊರಬಿದ್ದಿದ್ದು, ಬಿಗ್‌ಬಾಸ್‌ನ ಮೊದಲ ಎಲಿಮಿನೇಟರ್ ಯಾರು ಎನ್ನುವ ಕುತೂಹಲಕ್ಕೆ ತೆರೆ ಬಿದ್ದಿದೆ.

ಬಿಗ್​ಬಾಸ್​ ಮನೆಯಿಂದ ಶನಿವಾರ ರಕ್ಷಿತಾ ರೈ ಹೊರಬಿದ್ದಿದ್ದಾರೆ. ಶನಿವಾರ ಕಿಚ್ಚ ಸುದೀಪ್ ನಡೆಸಿಕೊಡುವ ‘ವಾರದ ಕಥೆ ಕಿಚ್ಚನ ಜೊತೆ’ ಕಾರ್ಯಕ್ರಮದ ಕೊನೆಯಲ್ಲಿ ಔಟ್ ಆಗಿದ್ದು, ಈ ವೇಳೆ ರಕ್ಷಿತಾ ರೈ ಅಳುತ್ತಲೇ ಮನೆಯಿಂದ ಹೊರಬಂದರು.

ಬಿಗ್​ಬಾಸ್​ ಮನೆಯಲ್ಲಿ ಮೊದಲ ವಾರವೇ ಶಶಿ, ರೀಮಾ, ಆಂಡಿ, ರವಿ, ಸೋನು, ಆಡಮ್, ಆನಂದ್, ನಯನಾ, ಮುರಳಿ, ರಕ್ಷಿತಾ ಮತ್ತು ಅಕ್ಷತಾ ಈ ಬಾರಿ ಮನೆಯಿಂದ ಹೊರಹೋಗಲು ನಾಮಿನೇಟ್ ಆಗಿದ್ದರು. ಇದರಂತೆ ಇಂದು ಮನೆ ಸದಸ್ಯರೊಂದಿಗೆ ಮಾತುಕತೆ ನಡೆಸಿದ ಕಿಚ್ಚ ಸುದೀಪ್​ ಕೊನೆಯದಾಗಿ ಮನೆಯಿಂದ ಕ್ರಿಕೆಟರ್​ ಧೋನಿ ಫ್ಯಾನ್​ ಎಂದು ಹೇಳಿಕೊಂಡು ಬಂದಿದ್ದ ಕ್ರಿಕೆಟರ್​ ರಕ್ಷಿತಾ ಅವರನ್ನ ಔಟ್​ ಮಾಡಿದ್ದಾರೆ.

ಎಲ್ಲರೊಂದಿಗೆ ಮಾತನಾಡುತ್ತ ಬಂದ ಸುದೀಪ್​ ಕೊನೆಯದಾಗಿ ಮೊದಲ ವಾರ ಮನೆಯಿಂದ ಮೊದಲ ಎಲಿಮಿನೇಟರ್ ಆಗಿ ರಕ್ಷಿತಾ ಹೊರಹೋಗುತ್ತಿದ್ದಾರೆ ಎಂದು ಸುದೀಪ್ ಘೋಷಿಸಿದರು, ಇದರೊಂದಿಗೆ ಉಳಿದ ಸ್ಪರ್ಧಿಗಳು ಸೇಫ್​ ಆಗಿದ್ದಾರೆ.

ವಾರದ ಕತೆ ಕಿಚ್ಚನ ಜೊತೆ ಆರಂಭವಾಗುತ್ತಿದ್ದಂತೆ ಸುದೀಪ್ ಮೊದಲಿಗೆ ಇದೇ ಮೊದಲ ಸೀಸನ್ ಒಂದೇ ವಾರದಲ್ಲಿ ಇಷ್ಟೊಂದು ಕತೆ ಆಗಿರೊದು ಎಂದು ತಮ್ಮ ಮಾತು ಶುರು ಮಾಡಿದ್ರು. ಆನಂದ್ ಅವರನ್ನು ಮೊದಲು ಮಾತಾಡಿಸಿದ ಸುದೀಪ್ ನಿಮ್ಮಅಡ್ಡ ಹೆಸರೇನು ಎಂದಾಗ ಕಣ್ಣಪ್ಪ ಅಂತಾರೆ, ಹೇಗೆ ಎಲ್ಲರ ಅಡ್ಡ ಹೆಸ್ರು ಸುದೀಪ್ ಕೇಳಿದ್ರು. ಇನ್ನು ಕೊನೆಯದಾಗಿ ಸುದೀಪ್ ಅವರ ಜೊತೆ ಸ್ಪರ್ಧಿಗಳು ಚರ್ಚೆ, ಮಾತುಕತೆ ಎಲ್ಲವೂ ನಡೆಯಿತು. ಇದೀಗ ಮನೆಯಿಂದ ಔಟ್​ ಆಗಿರುವ ಕ್ರಿಕೆಟರ್ ರಕ್ಷಿತಾ ಅವರನ್ನ ಉಳಿದ ಸದಸ್ಯರು ಆತ್ಮೀಯವಾಗಿ ಬಿಳ್ಕೋಟ್ಟರು.

Comments are closed.