ಪ್ರಮುಖ ವರದಿಗಳು

ನ್ಯಾಯಾಧೀಶರ ಪತ್ನಿ, ಮಗನ ಮೇಲೆ ಅಂಗ ರಕ್ಷಕನೇ ಗುಂಡು ಹಾರಿಸಿ ಮಾಡಿದ್ದೇನು…?

Pinterest LinkedIn Tumblr

ಗುರುಗ್ರಾಮ: ಸೆಷನ್ಸ್ ಕೋರ್ಟ್ ನ್ಯಾಯಾಧೀಶರ ಪತ್ನಿ ಹಾಗೂ ಮಗನ ಮೇಲೆ ಅಂಗ ರಕ್ಷಕನೇ ಗುಂಡು ಹಾರಿಸಿರುವ ಘಟನೆ ಹರ್ಯಾಣದ ಗುರುಗ್ರಾಮದಲ್ಲಿ ನಡೆದಿದೆ. ನ್ಯಾ.ಕೃಷ್ಣಕಾಂತ್ ಜಿಲ್ಲಾ ನ್ಯಾಯಾಧೀಶರನ್ನು ಭೇಟಿ ಮಾಡಿ ಮಾತುಕತೆ ನಡೆಸುತ್ತಿದ್ದ ವೇಳೆ ಭದ್ರತಾ ಸಿಬ್ಬಂದಿ ಅಧಿಕಾರಿ ಅವರಿಗೆ ಕರೆ ಮಾಡಿ ನಿಮ್ಮ ಪತ್ನಿ ಹಾಗೂ ಮಗನನ್ನು ಗುಂಡಿಕ್ಕಿದ್ದೇನೆ. ಹೋಗಿ ನೋಡಿ ಎಂದು ಹೇಳಿದ್ದಾರೆ.

ಅರ್ಕಾಡಿಯಾ ಮಾರ್ಕೆಟ್ ಗೆ ತೆರಳಿದ್ದ ನ್ಯಾಯಾಧೀಶರ ಪತ್ನಿ ರಿತು ಹಾಗೂ 17 ವರ್ಷದ ಮಗ ಧ್ರುವ್ ನ್ನು ಸಾವಿರಾರು ಮಂದಿ ಎದುರು ತನ್ನ ಸರ್ವಿಸ್ ರಿವಾಲ್ವರ್ ನಿಂದ ದಾಳಿ ಮಾಡಿ ಮಹಿಪಾಲ್ (32) ಪೊಲೀಸ್ ಪೇದೆ ರಕ್ತಸಿಕ್ತವಾಗಿದ್ದ ಧ್ರುವ್ ನ ದೇಹವನ್ನು ಎಳೆದೊಯ್ಯಲು ಯತ್ನಿಸಿದ್ದಾನೆ. ಆದರೆ ವಿಫಲವಾದಾಗ ಅವರನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾನೆ. ಮಹಿಪಾಲ್ ಪರಾರಿಯಾದ ನಂತರ ನ್ಯಾಯಾಧೀಶರ ಕುಟುಂಬದವರ ರಕ್ಷಣೆಗೆ ಸ್ಥಳಿಯರು ಮುಂದಾಗಿದ್ದು ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿದ್ದಾರೆ. ನ್ಯಾಯಾಧೀಶರ ಪತ್ನಿ ರಿತು ಹಾಗೂ ಪುತ್ರ ಧ್ರುವ್ ಅವರ ಸ್ಥಿತಿ ಗಂಭೀರವಾಗಿದೆ.

ಕಳೆದ ಎರಡು ವರ್ಷಗಳಿಂದ ನ್ಯಾಯಾಧೀಶರ ಕುಟುಂಬದವರ ಭದ್ರತಾ ಸಿಬ್ಬಂದಿಯಾಗಿದ್ದ ಮಹಿಪಾಲ್ ಏಕಾ ಏಕಿ ಈ ದೃಷ್ಕೃತ್ಯ ಮಾಡಿರುವ ಹಿಂದಿನ ಉದ್ದೇಶ ಇನ್ನೂ ಬಹಿರಂಗಗೊಂಡಿಲ್ಲ. ಆದರೆ ಆತನನ್ನು ಪೊಲೀಸರು ಬಂಧಿಸಿದ್ದು ತೀವ್ರ ವಿಚಾರಣೆಗೊಳಪಡಿಸಿದ್ದಾರೆ.

ಪ್ರಾಥಮಿಕ ವರದಿಗಳ ಪ್ರಕಾರ ಮಹಿಪಾಲ್ ಖಿನ್ನತೆಯಿಂದ ಬಳಲುತ್ತಿದ್ದು, ಮಾನಸಿಕ ಸಮಸ್ಯೆ ಎದುರಿಸುತ್ತಿದ್ದಾನೆ ಎನ್ನಲಾಗಿದೆ.

Comments are closed.