ಪ್ರಮುಖ ವರದಿಗಳು

ವಿಪಕ್ಷಗಳ ಅವಿಶ್ವಾಸ ನಿರ್ಣಯ ವಿರುದ್ಧ ಗೆದ್ದ ಪ್ರಧಾನಿ ಮೋದಿ! ಯುಪಿಎಗೆ ತೀವ್ರ ಮುಖಭಂಗ

Pinterest LinkedIn Tumblr

ನವದೆಹಲಿ: ಕಾಂಗ್ರೆಸ್ ನೇತೃತ್ವದ ಯುಪಿಎಗೆ ತೀವ್ರ ಮುಖಭಂಗವಾಗಿದ್ದು ವಿಪಕ್ಷಗಳ ಅವಿಶ್ವಾಸ ನಿರ್ಣಯ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರದ ಭರ್ಜರಿ ಗೆಲುವು ಸಾಧಿಸಿದೆ.

ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯ ಸೋಲು ಕಂಡಿದೆ. ಮ್ಯಾಜಿಕ್ ನಂಬರ್ ಗೆ 248 ಮತಗಳು ಬೇಕಿದ್ದು ನರೇಂದ್ರ ಮೋದಿ ಸರ್ಕಾರಕ್ಕೆ 325 ಮತಗಳು ಬಂದಿವೆ. ಕಾಂಗ್ರೆಸ್ ನೇತೃತ್ವದ ಯುಪಿಎ ಅವಿಶ್ವಾಸ ನಿರ್ಣಯ ಪರವಾಗಿ 126 ಮತಗಳನ್ನು ಪಡೆದಿದೆ.

451 ಸಂಸದರು ಲೋಕಸಭೆಯಲ್ಲಿ ಹಾಜರಿದ್ದು ಬಟನ್ ಒತ್ತುವ ಮೂಲಕ ಮತ ಚಲಾಯಿಸಿದರು. ಇನ್ನು ಮೋದಿ ಸರ್ಕಾರದ ಪರವಾಗಿ 325 ಮತಗಳು ಬಂದಿದ್ದು 199 ಮತಗಳ ಅಂತರದಿಂದ ಗೆಲುವು ಸಾಧಿಸಿದೆ.

ಇದಕ್ಕೂ ಮುನ್ನ ಮಾತನಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಪ್ರತಿಪಕ್ಷಗಳಿಗೆ ಪಾಯಿಂಟ್‌ ಪಾಯಿಂಟ್‌ ಬೈ ತಿರುಗೇಟು ನೀಡಿದರು.

ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ನೀಡಿರುವ ಪ್ರತಿ ಪ್ರಶ್ನೆಗಳಿಗೂ ಮೋದಿ ತಮ್ಮದೇ ಶೈಲಿಯಲ್ಲಿ ತಿರುಗೇಟು ನೀಡಿದರು.

ಪ್ರಧಾನಿ ನನ್ನ ಕಣ್ಣಿನಲ್ಲಿ ಕಣ್ಣಿಟ್ಟು ನೋಡಿ ಮಾತನಾಡಲು ಸಾಧ್ಯವಿಲ್ಲ ಎಂದಿದ್ದಾರೆ. ಹೌದು ನನಗೆ ನೋಡಲು ಆಗುವುದಿಲ್ಲ, ಏಕೆಂದರೆ ನಾನು ಬಡ ತಾಯಿಯ ಮಗ. ನಿಮ್ಮ ಕಣ್ಣಿನಲ್ಲಿ ಕಣ್ಣಿಟ್ಟವರನ್ನು ನೀವು ಯಾವ ರೀತಿ ಮಾಡಿದ್ದೀರಿ ಎಂಬುದು ಎಲ್ಲರಿಗೂ ಗೊತ್ತಿದೆ. ಹೀಗಾಗಿ ನಾನು ಕಣ್ಣಿನಲ್ಲಿ ಕಣ್ಣಿಡುವುದಿಲ್ಲ. ಅವರ ಕಣ್ಣು ಮಿಟಿಕಿಸುವ ಆಟವನ್ನು ಇಡೀ ದೇಶ ನೋಡಿದೆ ಎಂದರು.

ನಾನು ನಿಮ್ಮ ರೀತಿಯಲ್ಲಿ ಸೌದಾಗರ್‌ ಅಲ್ಲ, ನಾನು ಚೌಕೀದರಾ, ಭಾಗಿದಾರ. ಬಡವರ ದುಃಖ ನಿವಾರಿಸುವಲ್ಲಿ ಭಾಗಿದಾರ, ಯುವ ಸಮುದಾಯದ ಕನಸುಗಳನ್ನು ಸಾಕಾರಗೊಳಿಸುವಲ್ಲಿ ಭಾಗಿದಾರ ಎಂದರು.

ಆಂಧ್ರಪ್ರದೇಶ ವಿಭಜನೆಯ ಜಾಲದಲ್ಲಿ ಚಂದ್ರಬಾಬು ನಾಯ್ಡು ಸಿಲುಕಿಕೊಂಡಿದ್ದಾರೆ. ಆದರೆ ಟಿಆರ್‌ಎಸ್‌ನ ಕೆಸಿ ಚಂದ್ರಶೇಖರ್‌ ಪ್ರಬುದ್ಧತೆ ತೋರಿದರು. ಆದರೆ ಅಂದಿನ ಕಾಂಗ್ರೆಸ್‌ ಸರಕಾರ ತಾಯಿಯನ್ನು ರಕ್ಷಿಸಿ, ಮಕ್ಕಳಿಗೆ ಪೆಟ್ಟು ನೀಡಿತು ಎಂದು ಮೋದಿ ತಿಳಿಸಿದರು.

ಸದನದಲ್ಲಿ ಬಿಜೆಪಿಗೆ ಪೂರ್ಣ ಬಹುಮತವಿದ್ದರೂ ಅವಿಶ್ವಾಸ ನಿರ್ಣಯ ಮಂಡನೆ ಮಾಡಿರುವುದು ಏಕೆ ಎಂದು ಮೋದಿ ಪ್ರಶ್ನಿಸಿದರು.

ಮೂರು ದಶಕದ ನಂತರ ಏಕೈಕ ಪಕ್ಷವೊಂದು ಭಾರಿ ಬಹುಮತ ಗಳಿಸಿದೆ. ಆದರೂ ಸರಕಾರವನ್ನು ಉರುಳಿಸುವ ಪ್ರಯತ್ನ ನಡೆದಿರುವುದು ಸೂಕ್ತವಲ್ಲ ಎಂದು ಮೋದಿ ತಿಳಿಸಿದರು.

Comments are closed.