ಕರಾವಳಿ

ಶಾಸಕ ವೇದವ್ಯಾಸ ಕಾಮಾತ್‌ರಿಂದ ವಕೀಲರ ಸಂಘದ ಅಹವಾಲು ಸ್ವೀಕಾರ : ಹಂತಹಂತವಾಗಿ ಪರಿಹರಿಸುವ ಭರವಸೆ

Pinterest LinkedIn Tumblr

ಮಂಗಳೂರು : ಮಂಗಳೂರು ವಕೀಲರ ಸಂಘದ ಅಹವಾಲುಗಳನ್ನು ಹಂತಹಂತವಾಗಿ ಪರಿಹರಿಸಲಾಗುವುದು ಎಂದು ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಹೇಳಿದ್ದಾರೆ.

ಅವರು ಶುಕ್ರವಾರ ಕರಂಗಲಪಾಡಿಯಿಂದ ನ್ಯಾಯಾಲಯಕ್ಕೆ ಹೋಗುವ ರಸ್ತೆಯ ಕಾಂಕ್ರೀಟಿಕರಣದ ಕಾಮಗಾರಿಯನ್ನು ಪರಿಶೀಲಿಸಿದರು. ಬಳಿಕ ನ್ಯಾಯಾಲಯ ಸಂಕೀರ್ಣದಲ್ಲಿ ಮಂಗಳೂರು ವಕೀಲರ ಸಂಘದ ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕರು ಕಾಂಕ್ರೀಟಿಕರಣದ ಕಾಮಗಾರಿ ಪ್ರಗತಿಯಲ್ಲಿದೆ. ಇದಕ್ಕೆ ಬೇಕಾದ ಅನುದಾನವನ್ನು ರಾಜ್ಯ ಸರಕಾರದಿಂದ ತರಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.

ಬಳಿಕ ವಕೀಲರ ಸಂಘದಿಂದ ನ್ಯಾಯಾಲಯ ಕಟ್ಟಡದ ಅಭಿವೃದ್ಧಿಗೆ ಆಗಬೇಕಾದ ಕೆಲಸಕಾರ್ಯಗಳ ಬಗ್ಗೆ ಶಾಸಕರ ಗಮನ ಸೆಳೆಯಲಾಯಿತು. ವಕೀಲರ ಅಹವಾಲುಗಳನ್ನು ಆಲಿಸಿದ ಶಾಸಕ ವೇದವ್ಯಾಸ ಕಾಮತ್ ಅವರು ಎಲ್ಲಾ ಸಮಸ್ಯೆಗಳನ್ನು ಹಂತಹಂತವಾಗಿ ಪರಿಹರಿಸುವ ಭರವಸೆ ನೀಡಿದರು.

ನಂತರ ತಮ್ಮೊಂದಿಗೆ ಇದ್ದ ಅಧಿಕಾರಿಗಳಿಗೆ ಈ ಬಗ್ಗೆ ಮುಂದಿನ ವಾರ ವಿಸ್ತ್ರತ ಸಭೆ ನಡೆಸಿ ವಕೀಲರ ಪ್ರಮುಖರೊಂದಿಗೆ ಚರ್ಚಿಸಿ ರೂಪುರೇಶೆ ತಯಾರಿಸುವಂತೆ ಸೂಚನೆ ನೀಡಿದರು.

ವಕೀಲರ ಸಂಘದ ಪ್ರಮುಖರಾದ ಎಂ ಆರ್ ಬಲ್ಲಾಳ್, ಪುಷ್ಪಲತಾ, ದಿನಕರ ಶೆಟ್ಟಿ, ಸುಮನಾ ಶರಣ್, ಸಂತೋಷ್ ನಾಯಕ್, ಜಗದೀಶ್ ಶೇಣವ, ಪ್ರಶಾಂತ್, ಸುಧಾಕರ ಜೋಷಿ, ಚೆಂಗಪ್ಪ ಸಹಿತ ನೂರಾರು ವಕೀಲರು ಉಪಸ್ಥಿತರಿದ್ದರು.

Comments are closed.