ಪ್ರಮುಖ ವರದಿಗಳು

ಅಪಘಾತದಲ್ಲಿ ಇಬ್ಬರು ನರಳಾಡುತ್ತಿದ್ದರೆ ಜನ ಮನುಷತ್ವವನ್ನೇ ಮರೆತು ಸೆಲ್ಫಿ ತೆಗೆಯಲು ಮುಗಿಬಿದ್ದಿದ್ದರು ! ಕೊನೆಗೂ ಜನರೆದುರೇ ಪ್ರಾಣಪಕ್ಷಿ ಹಾರಿಹೋಯಿತು…!

Pinterest LinkedIn Tumblr

ಜೈಸಾಲ್ಮೆರ್: ಸೆಲ್ಫಿ ಎಂಬ ಮಾಯಾಜಾಲ ಮನುಷ್ಯತ್ವವನ್ನೇ ಕಳೆದುಕೊಳ್ಳುವಂತೆ ಮಾಡಿದೆ. ಸೆಲ್ಫಿ ಮೋಹಕ್ಕೆ ಸಿಲುಕದವರಿಲ್ಲ ಎನ್ನಬಹುದಾದ ಪರಿಸ್ಥಿತಿ ಸದ್ಯದ ಮಟ್ಟಿಗೆ ಅಂತು ಕಾಣಸಿಗುತ್ತಿದೆ.

ಬರ್ಮೆರ್ ಜಿಲ್ಲೆಯಲ್ಲಿ ನಿನ್ನೆ ಮಧ್ಯಾಹ್ನ 2 ಗಂಟೆ ಸುಮಾರಿಗೆ ಮೂವರು ಬೈಕ್ ನಲ್ಲಿ ಹೋಗುತ್ತಿದ್ದಾಗ ಸ್ಕೂಲ್ ಬಸ್ ವೊಂದು ಡಿಕ್ಕಿಯಾಗಿ ಅಪಘಾತ ಸಂಭವಿಸಿತ್ತು. ಅಪಘಾತದಲ್ಲಿ ಪರ್ಮನಂದ ಸ್ಥಳದಲ್ಲೇ ಸಾವನ್ನಪ್ಪಿದ್ದು, ಗೇಮರಾಮ್ ಮತ್ತು ಚಂದರಾಮ್ ಎಂಬುವರು ತೀವ್ರತರ ಗಾಯದಿಂದ ನಡುರಸ್ತೆಯಲ್ಲೇ ಒದ್ದಾಡುತ್ತಿದ್ದರು. ಸಹಾಯಕ್ಕೆ ಬಾರದ ಜನತೆ ಸೆಲ್ಫಿ ಮತ್ತು ವಿಡಿಯೋ ಚಿತ್ರೀಕರಣ ಮಾಡುವುದರಲ್ಲಿ ಬ್ಯುಸಿಯಾಗಿದ್ದರು.

ಪರಿಣಾಮ ತೀವ್ರ ರಕ್ತಸ್ರಾವದಿಂದ ನರಳಾಡುತ್ತಿದ್ದ ಗೇಮರಾಮ್ ಮತ್ತು ಚಂದರಾಮ್ ಒಂದು ಗಂಟೆಗೂ ಹೆಚ್ಚು ಕಾಲ ಜೀವದ ಜತೆ ಹೋರಾಟ ನಡೆಸಿ ಮೃತಪಟ್ಟಿದ್ದಾರೆ. ಸಹಾಯಕ್ಕೆ ಮುಂದಾಗಬೇಕಿದ್ದ ಜನರು ಮಾತ್ರ ಸೆಲ್ಫಿ ಮತ್ತು ವಿಡಿಯೋ ಮಾಡುವುದರಲ್ಲಿ ಬ್ಯುಸಿಯಾಗಿದ್ದರು. ಸರಿಯಾದ ಸಮಯಕ್ಕೆ ಅವರನ್ನು ಆಸ್ಪತ್ರೆಗೆ ಸೇರಿಸಿದ್ದರೆ ಬದುಕುವ ಸಾಧ್ಯತೆ ಹೆಚ್ಚಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಗುಜರಾತ್ ಸಿಮೆಂಟ್ ಫ್ಯಾಕ್ಟರಿಯಲ್ಲಿ ಈ ಮೂವರು ದಿನಗೂಲಿಗಳಾಗಿ ಕೆಲಸ ಮಾಡುತ್ತಿದ್ದರು. ಕೆಲಸ ನಿಮಿತ್ತ ರಾಜಸ್ತಾನಕ್ಕೆ ಬಂದಿದ್ದ ಇವರು ಗುಜರಾತ್ ಗೆ ಹಿಂದಿರುಗುವಾಗ ಈ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Comments are closed.