ರಾಷ್ಟ್ರೀಯ

ಸಮೀಕ್ಷೆಯೊಂದರ ಪ್ರಕಾರ ಮೋದಿ ವಿಶ್ವದ 3ನೇ ಪ್ರಭಾವಿ ನಾಯಕ, ಸುಷ್ಮಾ ಸ್ವರಾಜ್ ಅಗ್ರ ನಾಯಕಿ!

Pinterest LinkedIn Tumblr

ಜಿನಿವಾ: ಜಾಗತಿಕ ಸಮೀಕ್ಷೆಯೊಂದು ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವದ ಮೂರನೇ ಅತ್ಯಂತ ಪ್ರಭಾವಿ ನಾಯಕ ಹಾಗೂ ಮಹಿಳೆಯರ ಪೈಕಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಅಗ್ರಸ್ಥಾನದಲ್ಲಿದ್ದಾರೆ ಎಂದು ಸಾರಿದೆ.

ಪ್ರಧಾನಿ ತಮ್ಮ ಟ್ವೀಟರ್ ಖಾತೆಯಲ್ಲಿ 42 ದಶಲಕ್ಷ ಅನುಯಾಯಿಗಳನ್ನು ಹೊಂದಿದ್ದು ಮೂರನೇ ಸ್ಥಾನದಲ್ಲಿದ್ದಾರೆ. ಇನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 52 ದಶಲಕ್ಷ ಹಾಗೂ ಕ್ರೈಸ್ತ ಧರ್ಮ ಗುರು ಪೋಪ್ ಫ್ರಾನ್ಸಿಸ್ ಅವರು 47 ದಶಲಕ್ಷ ಅನುಯಾಯಿಗಳನ್ನು ಹೊಂದಿದ್ದು ಕ್ರಮವಾಗಿ ಮೊದಲ ಮತ್ತು ಎರಡನೇ ಸ್ಥಾನದಲ್ಲಿದ್ದಾರೆ.

ಕಳೆದ 12 ತಿಂಗಳಲ್ಲಿ ಡೊನಾಲ್ಡ್ ಟ್ರಂಪ್ ತಮ್ಮ ಟ್ವೀಟರ್ ಖಾತೆ ಬಳಿಸಿ 264 ದಶಲಕ್ಷ ಪ್ರತಿಕ್ರಿಯೆ ನೀಡಿದ್ದಾರೆ. ಮೋದಿ ಅವರು 52 ದಶಲಕ್ಷ ಮತ್ತು ಪೋಪ್ ಅವರು 12 ದಶಲಕ್ಷ ಸಂವಾದ ನಡೆಸಿದ್ದಾರೆ ಎಂದು ಡಿಜಿಟಲ್ ವೇದಿಕೆ ಟ್ವಿಪ್ಲಾಮಸಿ ತಿಳಿಸಿದೆ.

ಅಗ್ರ ಹತ್ತು ಪ್ರಭಾವಿ ಟ್ವೀಟರ್ ಖಾತೆಗಳ ಪಟ್ಟಿಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರ ಹೆಸರೂ ಸೇರಿದ್ದು ಇವರು 11 ದಶಲಕ್ಷ ಅನುಯಾಯಿಗಳನ್ನು ಹೊಂದಿದ್ದಾರೆ.

Comments are closed.