ಕರಾವಳಿ

ಬೀಚ್‍ಗಳಲ್ಲಿ ಪ್ರವಾಸಿಗರ ರಕ್ಷಣೆ : ಗೃಹರಕ್ಷಕ ವಿಪತ್ತು ತಂಡಕ್ಕೆ ರೈನ್‍ಕೋಟು,ರೈನ್‍ಬೂಟ್, ಟಾರ್ಚ್ ವಿತರಣೆ

Pinterest LinkedIn Tumblr

ಮಂಗಳೂರು, ಜುಲೈ 11: ಜಿಲ್ಲಾ ವಿಪತ್ತು ನಿರ್ವಹಣಾ ನಿಧಿ ಇದರ ವತಿಯಿಂದ ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಆದೇಶದಂತೆ ಮಳೆಗಾಲದ ಸಮಯದಲ್ಲಿ ಕೆಲಸ ಮಾಡುವ ನೆರೆ ನಿರ್ವಹಣಾ ತಂಡದ ಎಲ್ಲಾ ಗೃಹರಕ್ಷಕರಿಗೆ ರೈನ್‍ಕೋಟ್, ರೈನ್‍ಬೂಟ್, ಟಾರ್ಚ್ ನೀಡಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಸುಳ್ಯ, ಸುಬ್ರಹ್ಮಣ್ಯ, ಬಂಟ್ವಾಳ, ಉಪ್ಪಿನಂಗಡಿಗಳ ನದಿಯ ತೀರದಲ್ಲಿ ಮತ್ತು ನೆರೆ ಉಂಟಾಗುವ ಪ್ರದೇಶಗಳಲ್ಲಿ 25 ಗೃಹರಕ್ಷಕರನ್ನು ನೇಮಿಸಲಾಗಿದೆ. ಅದೇ ರೀತಿ 25 ಗೃಹರಕ್ಷಕರನ್ನು ಸಸಿಹಿತ್ಲು, ಸುರತ್ಕಲ್, ಪಣಂಬೂರು, ತಣ್ಣೀರುಬಾವಿ, ಉಳ್ಳಾಲ, ಸೋಮೇಶ್ವರ, ಮುಕ್ಕ ಬೀಚ್‍ಗಳಲ್ಲಿ ಪ್ರವಾಸಿಗರ ರಕ್ಷಣೆಗಾಗಿ ನೇಮಿಸಲಾಗಿದೆ.

ಅವರಿಗೆ ನೀಡಲಾದ ಈ ಪರಿಕರಗಳನ್ನು ಜಿಲ್ಲಾ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು ಪಣಂಬೂರು, ತಣ್ಣೀರುಬಾವಿ ಮತ್ತು ಸುರತ್ಕಲ್ ಬೀಚ್‍ಗಳಲ್ಲಿ ಕೆಲಸ ಮಾಡುವ ಗೃಹರಕ್ಷಕರಿಗೆ ಹಸ್ತಾಂತರಿಸಿದರು. ಉಪಸಮಾದೇಷ್ಟ ರಮೇಶ್, ಪಣಂಬೂರು ಘಟಕಾಧಿಕಾರಿ ಹರೀಶ್ ಆಚಾರ್ಯ ಮತ್ತು ಹಿರಿಯ ಗೃಹರಕ್ಷಕ ರಮೇಶ್ ಭಂಡಾರಿ ಉಪಸ್ಥಿತರಿದ್ದರು.

Comments are closed.