ಕರಾವಳಿ

ತುರ್ತು ನಿರ್ವಹಣೆ ಕಾಮಗಾರಿ ಹಿನ್ನೆಲೆ : ಹೆದ್ದಾರಿ ಅಧಿಕಾರಿಗಳಿಂದ ಗುರುಪುರ ಸೇತುವೆ ಪರಿಶೀಲನೆ

Pinterest LinkedIn Tumblr

ಮಂಗಳೂರು, ಜೂನ್.28: ಮಂಗಳೂರು – ಮೂಡಬಿದ್ರೆ ರಸ್ತೆಯ ಕೈಕಂಬ ಸಮೀಪವಿರುವ ಗುರುಪುರ ಸೇತುವೆಯನ್ನು ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಗುರುವಾರ ಬೆಳಗ್ಗೆಯಿಂದ ಪರಿಶೀಲನೆ ಆರಂಭಿಸಿದ್ದಾರೆ.

ಈ ವೇಳೆ ಸೇತುವೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದ್ದು,.ಈ ಮಾರ್ಗದಲ್ಲಿ ಸಂಚರಿಸುವ ವಾಹನಗಳು ಬೆಳಗ್ಗೆ 6 ಗಂಟೆಯಿಂದ ಸುಮಾರು 3 ರಿಂದ 5 ತಾಸು ವಾಮಂಜೂರು- ಪಚ್ಚನಾಡಿ-ಬೋಂದೆಲ್-ಕಾವೂರು-ಬಜ್ಪೆ- ಕೈಕಂಬ ಮಾರ್ಗದಲ್ಲಿ ಸಂಚರಿಸಬಹುದು.

ಗುರುಪುರ ಸೇತುವೆ ತುರ್ತು ನಿರ್ವಹಣೆ ಕಾಮಗಾರಿ ಪರಿಶೀಲನೆ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ 5 ಗಂಟೆಯಿಂದ 10 ಗಂಟೆಯವರೆಗೆ ಸೇತುವೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ.

ಕೈಕಂಬದಿಂದ ಮಂಗಳೂರು ಕಡೆಗೆ ಬರುವ ಎಲ್ಲಾ ವಾಹನಗಳು ಇದೇ ಮಾರ್ಗದಲ್ಲಿ ಸಂಚರಿಸಬಹುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

Comments are closed.