ಕರ್ನಾಟಕ

ದಿನಪತ್ರಿಕೆಯ ಜಾಹಿರಾತೊಂದು ಬರೋಬರಿ 33 ವರ್ಷದ ಬಳಿಕ ಸಹೋದರರನ್ನು ತಾಯಿಯ ಮಡಿಲು ಸೇರಿಸಿತು !

Pinterest LinkedIn Tumblr

ಮಡಿಕೇರಿ; ದಿನಪತ್ರಿಕೆಯ ಜಾಹಿರಾತಿನ ಬಳಿಕ ಒಡೆದು ಹೋಗಿದ್ದ ಕುಟುಂಬವೊಂದು 33 ವರ್ಷಗಳ ಬಳಿಕ ಒಂದಾಗಿದೆ.

ಪೋಷಕರಿಂದ ದೂರಾಗಿದ್ದ ಇಬ್ಬರು ಸಹೋದರರು 33 ವರ್ಷಗಳ ಬಳಿಕ ಜಿಲ್ಲಾ ದಿನಪತ್ರಿಕೆಯ ಜಾಹಿರಾತಿನ ಬಳಿಕ ತಮ್ಮ ತಾಯಿಯ ಮಡಿಲು ಸೇರಿದ್ದಾರೆ.

1980ರಲ್ಲಿ ಆನಂದ್ ನಾಯರ್ ಕೆಲವನ್ನು ಹುಡುಕಿ ಮುಂಬೈಗೆ ತೆರಳಿದ್ದರು. ಆನಂದ್ ನಾಯರ್ ಅವರ ತಂದೆ ಕುಮಾರ್ ಹಾಗೂ ತಾಯಿ ತಂಡಮ್ಮ ಅವರಿಗೆ 5 ಮಕ್ಕಳಿದ್ದು, 50 ವರ್ಷಗಳ ಹಿಂದೆ ಕೇರಳದಿಂದ ಕೊಡಗು ಜಿಲ್ಲೆಗೆ ಬಂದು ನೆಲೆಯೂರಿದ್ದರು.

ಕೆಲಸವನ್ನು ಹುಡುಕಿಕೊಂಡು ಆನಂದ್ ಅವರು ಮುಂಬೈಗೆ ತೆರಳಿದ ಬಳಿಕ ಪೋಷಕರಿಗೆ ಪತ್ರಗಳನ್ನು ಬರೆಯುವ ಮೂಲಕ ಆನಂದ್ ಅವರು ಕುಟುಂಬ ಸದಸ್ಯರೊಂದಿಗೆ ಸಂಪರ್ಕದಲ್ಲಿದ್ದರು. ಆನಂದ್ ಅವರ ಕಿರಿಯ ಸಹೋದರ ತನ್ನ ಅಣ್ಣನಂತೆ ಕೆಲಸ ಮಾಡುತ್ತೇನೆಂದು ಹೇಳಿ 12 ವರ್ಷದಲ್ಲಿದ್ದ ಸಂದರ್ಭದಲ್ಲಿಯೇ ಮುಂಬೈಗೆ ಓಡಿ ಬಂದಿದ್ದ. ಬಳಿಕ ಇಬ್ಬರೂ ಆಗಾಗ ಪೋಷಕರಿಗೆ ಪತ್ರಗಳನ್ನು ಬರೆಯುತ್ತಿದ್ದರು. ಇದಾದ ಕೆಲ ದಿನಗಳ ಬಳಿಕ ಪತ್ರ ಬರೆಯುವುದನ್ನೂ ನಿಲ್ಲಿಸಿದ್ದರು.

ಆನಂದ್ ಅವರ ಪೋಷಕರು ಎಸ್ಟೇಟ್ ವೊಂದರಲ್ಲಿ ದಿನಗೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಮೊಬೈಲ್, ಇಂಟರ್ನೆಟ್ ಸೇವೆ ಇಲ್ಲದ ಕಾರಣ ಮಕ್ಕಳು ಹಾಗೂ ಕುಟುಂಬಸ್ಥರ ನಡುವಿನ ಸಂಪರ್ಕ ಕಡಿದು ಹೋಗಿತ್ತು.

ವರ್ಷಗಳ ಬಳಿಕ ಇಬ್ಬರೂ ಸಹೋದರರು ಮದುವೆ ಮಾಡಿಕೊಂಡು ಮುಂಬೈನಲ್ಲಿಯೇ ನೆಲೆಯೂರಿದರು. ಆನಂದ್ ಅವರ ತಂದೆ ಅನಾರೋಗ್ಯಕ್ಕೀಡಾಗಿ, ಅಂತಿಮ ಕ್ಷಣದಲ್ಲಿ ತನ್ನ ಮಕ್ಕಳನ್ನು ನೋಡಬೇಕೆಂದು ಬಯಸಿದ್ದರು. ಈ ವೇಳೆ ಆನಂದ್ ಅವರ ಹಳೆಯ ವಿಳಾಸಕ್ಕೆ ಟೆಲಿಗ್ರಾಂ ಕಳುಹಿಸಲಾಗಿದೆ. ಆದರೆ, ಆ ವಿಳಾಸದಲ್ಲಿ ಆ ರೀತಿಯ ವ್ಯಕ್ತಿಗಳು ಯಾರೂ ಇಲ್ಲವೆಂದು ಕುಟುಂಬಸ್ಥರಿಗೆ ತಿಳಿದುಬಂದಿದೆ.

33 ವರ್ಷಗಳ ಬಳಿಕ ಆನಂದ್ ಅವರು ತಂದೆ, ತಾಯಿ ಬದುಕಿರುವುದಿಲ್ಲ ಎಂದು ತಿಳಿದು, ಕುಟುಂಬಸ್ಥರನ್ನಾದರೂ ಸಂಪರ್ಕಿಸಲು ಯತ್ನ ನಡೆಸಿದ್ದಾರೆ. ಎರಡು ದಿನಗಳ ಹಿಂದಷ್ಟೇ ಕುಟುಂಬಸ್ಥರನ್ನು ಭೇಟಿ ಮಾಡುವ ಸಲುವಾಗಿ ಮಡಿಕೇರಿಗೆ ಬಂದಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿದಾಗ ಸ್ಥಳ ದಟ್ಟ ಅರಣ್ಯದಂತೆ ಕಾಣಿಸಿತು. ಅಲ್ಲಿ ಸರಿಯಾದ ರಸ್ತೆ. ವಿದ್ಯುತ್ ವ್ಯವಸ್ಥೆಗಳಿರಲಿಲ್ಲ. ನಾವು ಬೆಳೆದ ಸ್ಥಳ ಸಂಪೂರ್ಣವಾಗಿ ಬದಲಾಗಿದೆ ಎಂದು ಶೇಖರ್ ಅವರು ಹೇಳಿದ್ದಾರೆ.

ಕುಟುಂಬಸ್ಥರು ಕಾಣದೇ ಹೋದ ಬಳಿಕ ಶೇಖರ್ ಹಾಗೂ ಆನಂದ್ ಇಬ್ಬರೂ ಜಿಲ್ಲಾ ದಿನಪತ್ರಿಕೆಯೊಂದರ ಮೊರೆ ಹೋಗಿದ್ದಾರೆ. ಪೊಲೀಸರಿಗೂ ದೂರು ನೀಡಿದ್ದಾರೆ. ಮಾರನೇ ದಿನ ಪತ್ರಿಕೆಯ ಸಂಪಾದಕರು ಆನಂದ್ ಅವರಿಗೆ ಕರೆ ಮಾಡಿ, ಕುಟುಂಬಸ್ಥರು ಸಿಕ್ಕಿರುವ ವಿಚಾರವನ್ನು ತಿಳಿಸಿದ್ದಾರೆ.

ದಿನಪತ್ರಿಕೆಗೆ ಎಷ್ಟು ಧನ್ಯವಾದ ಹೇಳಿದರೂ ಸಾಲದು. ನನ್ನ ತಾಯಿ, ಸಹೋದರರು ಹಾಗೂ ಸಹೋದರಿಯರನ್ನು ಮರಳಿ ಸಿಕ್ಕಿದ್ದಾರೆ. ಇದು ದಿನಪತ್ರಿಕೆಯಿಂದ ಸಾಧ್ಯವಾಯಿತು.

ಮಡಿಕೇರಿ ಗೌಡ ಸಮಾಜದ ಬಳಿಯ ಆನಂದ್ ಅವರ ಕುಟುಂಬಸ್ಥರು ನೆಲೆಯೂರಿದ್ದು, 33 ವರ್ಷದ ಬಳಿಕ ಮಕ್ಕಳನ್ನು ನೋಡಿದ ಬಳಿಕ ತಂಗಮ್ಮ ಅವರ ಸಂತಸ ಮುಗಿಲು ಮುಟ್ಟಿದೆ.

ಇದಕ್ಕಿಂತಲೂ ದೊಡ್ಡ ಸಂಸತ ನನ್ನ ಜೀವನದಲ್ಲಿ ಬೇರೊಂದಿಲ್ಲ ತಂಗಮ್ಮ ಅವರು ಹೇಳಿದ್ದಾರೆ.

Comments are closed.