ರಾಷ್ಟ್ರೀಯ

ಅಕ್ರಮ ಚಟುವಟಿಕೆಗಳಲ್ಲಿ ಭಾಗಿಗಳಾಗಿರುವ ಸ್ವಯಂ ಘೋಷಿತ ದೇವಮಾನವರು, ಬಾಬಾಗಳನ್ನು ಗಲ್ಲಿಗೇರಿಸಿ: ರಾಮ್ ದೇವ್

Pinterest LinkedIn Tumblr

ಕೋಟಾ(ರಾಜಸ್ಥಾನ): ಅಕ್ರಮ ಚಟುವಟಿಕೆಗಳಲ್ಲಿ ಭಾಗಿಗಳಾಗಿರುವ ಸ್ವಯಂ ಘೋಷಿತ ದೇವಮಾನವರು, ಬಾಬಾಗಳನ್ನು ಗಲ್ಲಿಗೇರಿಸಬೇಕು ಎಂದು ಯೋಗ ಗುರು, ಪತಂಜಲಿ ಸಂಸ್ಥೆಗಳ ಸೂತ್ರಧಾರ ಬಾಬಾ ರಾಮ್ ದೇವ್ ಹೇಳಿದ್ದಾರೆ.

“ಮಿತಿ ಮೀರುವವರನ್ನು ಜೈಲಿಗಟ್ಟುವುದು ಮಾತ್ರವಲ್ಲ, ಮರಣದಂಡನೆ ಶಿಕ್ಷೆ ವಿಧಿಸಬೇಕು” ರಾಮ್ ದೇವ್ ಹೇಳಿದ್ದಾರೆ.

“ಕೇಸರಿ ಬಟ್ಟೆಯೊಂದೇ ಧಾರ್ಮಿಕ ನಾಯಕರ ಮಾನದಂಡವಾಗಬಾರದು, ಎಲ್ಲಾ ಕೆಲಸಗಳಿಗೆ ಒಂದು ಶಿಷ್ಟಾಚಾರವಿದೆ, ಅದರದೇ ಮಿತಿಗಳಿವೆ. ಬಾಬಾ, ಯೋಗಿಗಳಿಗೆ ಸಹ ಇದು ಅನ್ವಯ. ಕೇಸರಿ ಬಣ್ಣದ ಬಟ್ಟೆ ಧರಿಸಿದ ಮಾತ್ರಕ್ಕೆ ಯಾರೂ ದೇವಮಾನವರಾಗುವುದಿಲ್ಲ” ಅವರು ಹೇಳಿದ್ದಾರೆ.

ಸ್ವಯಂಘೊಷಿತ ದೇವಮಾನವನೊಬ್ಬರ ಮೇಲೆ ಅತ್ಯಾಚಾರ, ಹತ್ಯೆ ಪ್ರಕರಣದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ರಾಮ್ ದೇವ್ ಮೇಲಿನಂತೆ ಅಭಿಪ್ರಾಯ ವ್ಯಕ್ತಪಡಿಸಿದರು.

Comments are closed.