
ಉಡುಪಿ: ದನದ ವ್ಯಾಪಾರಿ ಹುಸೈನಬ್ಬ ಸಾವಿನ ತನಿಖೆ ಜವಾಬ್ದಾರಿಯನ್ನು ಸಿಐಡಿಗೆ ನೀಡಿ ಆದೇಶವನ್ನು ರಾಜ್ಯ ಸರಕಾರ ಮಾಡಿದೆ.
ಕಳೆದ ತಿಂಗಳ ಅಂತ್ಯದಲ್ಲಿ ಉಡುಪಿಯ ಪೆರ್ಡೂರು ಬಳಿ ದನದ ವ್ಯಾಪರಿಯ ಸಾವಾಗಿತ್ತು. ದನಗಳನ್ನ ಸಾಗಿಸುತ್ತಿದ್ದ ವೇಳೆ ಪೊಲೀಸರ ಸಮ್ಮುಖದಲ್ಲಿ ಬಜರಂಗದಳ ಕಾರ್ಯಕರ್ತರು ಹಲ್ಲೆ ನಡೆಸಿದ್ದರು. ಪೊಲೀಸ್ ಜೀಪಿನಲ್ಲಿ ಹುಸೆನಬ್ಬ ಸಾವನ್ನಪ್ಪಿದ್ದರು. ಮೂವರು ಪೋಲಿಸರು ಸೇರಿದಂತೆ ಹತ್ತು ಮಂದಿ ಬಜರಂಗದಳ ಕಾರ್ಯಕರ್ತರ ಬಂಧನವಾಗಿತ್ತು.
ಇದೀಗ ತನಿಖೆಯ ಜವಾಬ್ದಾರಿ ಸಿಐಡಿ ಹೆಗಲಿಗೆ ರೊರಿಸಿದ್ದು ಎರಡು ಮೂರು ದಿನದಲ್ಲಿ ಉಡುಪಿಗೆ ಸಿಐಡಿ ತಂಡ ಆಗಮಿಸಲಿದೆ ಎನ್ನಲಾಗಿದೆ.
Comments are closed.