ಕರ್ನಾಟಕ

ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ವಿಜಯಪುರದಲ್ಲಿ ಇನ್ನಷ್ಟು ಜನರ ಬಂಧನ ಸಾಧ್ಯತೆ

Pinterest LinkedIn Tumblr

ವಿಜಯಪುರ: ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ವಿಜಯಪುರ ಜಿಲ್ಲೆಯ ಪ್ರಮುಖ ಸ್ಥಳವಾಗಿ ಮಾರ್ಪಟ್ಟಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಜನರ ಬಂಧನವಾಗುವ ಸಾಧ್ಯತೆಯಿದೆ.

ಗೌರಿ ಹತ್ಯೆಗೆ ನಾಡಪಿಸ್ತೂಲು ಬಳಸಲಾಗಿದ್ದು ಇದು ಎಸ್ ಐಟಿ ಅಧಿಕಾರಿಗಳು ವಿಜಯಪುರಕ್ಕೆ ತೆರಳಿ ಇಲ್ಲಿ ಬಂದೂಕಿನ ಕಳ್ಳಸಾಗಣೆ ಮಾಡುವವರ ಬಗ್ಗೆ ಹುಡುಕಾಟ ನಡೆಸುವಂತೆ ಮಾಡಿದೆ.

ಮೂಲಗಳಿಂದ ಸಿಕ್ಕಿರುವ ಮಾಹಿತಿ ಪ್ರಕಾರ, ವಿಶೇಷ ತನಿಖಾ ತಂಡದ ವಿವಿಧ ತಂಡ ವಿಜಯಪುರ ಜಿಲ್ಲೆಯಲ್ಲಿ ತಂಗಿದ್ದು ಪ್ರಕರಣವನ್ನು ಮೂಲದಿಂದ ಭೇದಿಸಲು ಹೊರಟಿದೆ. ಜಿಲ್ಲೆಯ ಸುಮಾರು ಸಾವಿರಕ್ಕೂ ಹೆಚ್ಚು ಮಂದಿಯನ್ನು ವಿಶೇಷ ತನಿಖಾ ತಂಡದ ಸದಸ್ಯರು ವಿಚಾರಣೆಗೊಳಪಡಿಸಿದ್ದಾರೆ. ಅದರಲ್ಲೂ ವಿಶೇಷವಾಗಿ ಹಿಂದೂ ಸಂಘಟನೆಗಳ ಸದಸ್ಯರನ್ನು. ವಿಜಯನಗರ ಗಡಿ ದಾಟಿ ಬೇರೆ ರಾಜ್ಯಗಳಿಂದ ಬಂದೂಕನ್ನು ಕಳ್ಳಸಾಗಣೆ ಮಾಡಲಾಗುತ್ತಿದೆಯೇ ಎಂಬ ಬಗ್ಗೆ ತನಿಖಾಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.

ಪಿಸ್ತೂಲ್ ನ್ನು ಅಕ್ರಮವಾಗಿ ಪೂರೈಸುತ್ತಿದ್ದಾರೆ ಎಂಬ ಆರೋಪದ ಮೇಲೆ ರತ್ನಾಪುರ ಜಿಲ್ಲೆಯಲ್ಲಿ ಮನೋಹರ್ ಎಡವೆ ಅವರನ್ನು ಬಂಧಿಸಲಾಗಿತ್ತು. ಎಡವೆಯ ಬಂಧನವಾಗಿದ್ದು ಕೆ ಟಿ ನವೀನ್ ಕುಮಾರ್ ನನ್ನು ಬೆಂಗಳೂರಿನಲ್ಲಿ ಬಂಧಿಸಿದ ನಂತರ. ಕೊಲೆಗೆ ಬೆಂಬಲ ನೀಡಿದ ಆರೋಪದ ಮೇಲೆ ನವೀನ್ ನ ಬಂಧನವಾಗಿದೆ.

ಎಡವೆ ಬಂಧಿಸಿ ತಿಂಗಳು ಕಳೆದ ನಂತರ ಪೊಲೀಸರು ವಿಜಯಪುರದಲ್ಲಿ ಪರಶುರಾಮ ವಾಗ್ಮರೆ ಮತ್ತು ಸುನಿಲ್ ಸುನಿಲ್ ಮಡಿವಳ್ಳಪ್ಪ ಅಗಸರನನ್ನು ಸಿಂಧಗಿಯಲ್ಲಿ ಬಂಧಿಸಿದೆ.

Comments are closed.