ಕರಾವಳಿ

ನಂತೂರು ರಸ್ತೆ ಅಪಘಾತ : ಪತ್ನಿ ಸ್ಥಳದಲ್ಲೇ ಮೃತ್ಯು : ಆಸ್ಪತ್ರೆಗೆ ದಾಖಲಾಗಿದ್ದ ಪತಿಯೂ ಮೃತ್ಯು

Pinterest LinkedIn Tumblr

ಮಂಗಳೂರು, ಜೂನ್.13: ನಗರದ ನಂತೂರು ವೃತ್ತದ ಬಳಿ ಮಂಗಳವಾರ ಸಂಜೆ ನಡೆದ ಟೆಂಪೊ ಮತ್ತು ದ್ವಿಚಕ್ರ ವಾಹನ ನಡುವಿನ ಅಪಘಾತದಲ್ಲಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಮುಹಮ್ಮದ್ ಸಮೀರ್ (32) ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಕಾಪು ನಿವಾಸಿ ಮೊಹಮ್ಮದ್ ಸಮೀರ್ ಅವರು ತಮ್ಮ ಪತ್ನಿ ಪುತ್ತೂರಿನ ಅಮ್ರೀನ್ (20) ಅವರ ಜೊತೆ ಮಂಗಳವಾರ ಸಂಜೆ ಸಂಬಂಧಿಕರ ಮನೆಗೆಂದು ಕಾಪುವಿನಿಂದ ಮಂಗಳೂರಿಗೆ ದ್ವಿಚಕ್ರ ವಾಹನದಲ್ಲಿ ಹೊರಟಿದ್ದರು. ಸಮೀರ್ ಚಲಾಯಿಸುತ್ತಿದ್ದ ವಾಹನ ನಂತೂರ್ ವೃತ್ತ ತಲುಪುತ್ತಿದ್ದಂತೆ ಈಚರ್ ಟೆಂಪೊವೊಂದು ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದಿದೆ. ಪರಿಣಾಮವಾಗಿ ಇಬ್ಬರೂ ರೆಸ್ತಗೆಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದರು.

ಅಪಘಾತದಲ್ಲಿ ಗಂಭೀರಗಾಯಗೊಂಡಿದ್ದ ಅಮ್ರೀನ್ ಅವರು ಸ್ಥಳದಲ್ಲೇ ಮೃತಪಟ್ಟಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಅಮ್ರೀನ್ ಅವರ ಪತಿ ಮೊಹಮ್ಮದ್ ಸಮೀರ್ ಅವರನ್ನು ತಕ್ಷಣ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ತೀವ್ರನಿಗಾ ಘಟಕದಲ್ಲಿ ಚಿಕಿತ್ಸೆಗೊಳ ಪಡಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಮೀರ್ ಅವರು ರಾತ್ರಿ ಮೃತಪಟ್ಟಿದ್ದಾರೆ. ಇಬ್ಬರ ಮೃತದೇವಹವು ಖಾಸಗಿ ಆಸ್ಪತ್ರೆಯಲ್ಲಿಡಲಾಗಿದೆ.

ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ಅಪಘಾತ ಪ್ರಕರಣ ದಾಖಲಾಗಿದೆ.

ನಂತೂರು ಬಳಿ ದ್ವಿಚಕ್ರ ವಾಹನಕ್ಕೆ ಟೆಂಪೋ ಢಿಕ್ಕಿ : ಪತ್ನಿ ಸ್ಥಳದಲ್ಲೇ ಮೃತ್ಯು – ಪತಿ ಗಂಭೀರ

Comments are closed.