ಕರಾವಳಿ

ದ.ಕ.ಜಿಲ್ಲಾ ವಾರ್ತಾಧಿಕಾರಿ ಬಿ.ಎ.ಖಾದರ್ ಷಾರಿಗೆ ಸೀನಿಯರ್ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಭಡ್ತಿ

Pinterest LinkedIn Tumblr

ಮಂಗಳೂರು, ಜೂನ್.8: ದ.ಕ ಜಿಲ್ಲಾ ವಾರ್ತಾ ಮತ್ತು ಪ್ರಚಾರ ಇಲಾಖೆಯ ಅಧಿಕಾರಿ ಬಿ.ಎ.ಖಾದರ್ ಷಾ ಅವರಿಗೆ ಭಡ್ತಿ ಲಭಿಸಿದೆ. ಷಾ ಅವರಿಗೆ ಸೀನಿಯರ್ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಭಡ್ತಿ ನೀಡಲಾಗಿದೆ ಎಂದು ತಿಳಿದು ಬಂದಿದೆ.

2010 ರಲ್ಲಿ ಚಿಕ್ಕಮಗಳೂರಿನಲ್ಲಿ ವಾರ್ತಾಧಿಕಾರಿ ಆಗಿ ಕೆಲಸ ನಿರ್ವಹಿಸಿದ ಬೈಕಂಪಾಡಿ ಅಬ್ದುಲ್ ಖಾದರ್ ಷಾ 2013 ರಲ್ಲಿ ಉಡುಪಿಗೆ ವರ್ಗಾವಣೆಯಾದರು. ಅಲ್ಲಿ ನಾಲ್ಕು ತಿಂಗಳು ಕರ್ತವ್ಯ ನಿರ್ವಹಿಸಿದ ನಂತರ ಮಂಗಳೂರಿಗೆ ವಾರ್ತಾಧಿಕಾರಿಯಾಗಿಯೇ ವರ್ಗಾವಣೆಗೊಂಡರು.

ಕಳೆದ ಐದು ವರ್ಷಗಳಿಂದ ಮಂಗಳೂರಿನಲ್ಲಿ ಕರ್ತವ್ಯ ನಿರ್ವಾಹಿಸುತ್ತಿರುವ ಷಾ ಅವರು, ಅಧಿಕಾರ ವಹಿಸಿದ ನಂತರ ಅವರು ಮೊದಲು ಮಾಡಿದ ಕೆಲಸ ಅಂದರೆ ಹಸ್ತಚಾಲಿತ ಸಂವಹನ ವ್ಯವಸ್ಥೆಯನ್ನು ಡಿಜಿಟಲೀಕರಣ ಮಾಡಿದ್ದು.

ಮಂಗಳೂರಿನಲ್ಲಿ 2013 ರಲ್ಲಿ ಮಾನ್ಯತೆ ಪಡೆದ ಪತ್ರಕರ್ತರ ಸಂಖ್ಯೆ 35 ಮಾತ್ರ ಇತ್ತು ಈಗ ಅದು 55ಕ್ಕೆ ಏರಿದೆ. ಪತ್ರಕರ್ತರೊಂದಿಗೆ ಉತ್ತಮ ಸಂಬಂಧ ಬೆಳೆಸಿ ಕೊಂಡಿರುವ ಷಾ ಅವರು ಪತ್ರಕರ್ತರ ಕಲ್ಯಾಣಕ್ಕಾಗಿ ಅರೋಗ್ಯ ಕಾರ್ಡ್ ಗಳು ಮತ್ತು ಇನ್ನಿತರ ಸೌಲಭ್ಯಗಳನ್ನು ಒದಗಿಸಿ ಕೊಟ್ಟ ಒರ್ವ ದಕ್ಷ ಅಧಿಕಾರಿ.

ಮಂಗಳೂರು ಪತ್ರಕರ್ತರಿಗೆ ಅತೀ ಶೀಘ್ರವಾಗಿ ವಾಟ್ಸ್ ಆಪ್ ಮೂಲಕ ಮಾಹಿತಿಗಳು ದಿನದ ಸುದ್ದಿಗಳನ್ನು ಸರಿಯಾದ ಸಮಯಕ್ಕೆ ರವಾನೆ ಮಾಡುವ ವ್ಯವಸ್ಥೆಯನ್ನು ಬಿ.ಎ.ಖಾದರ್ ಷಾ ಸಮರ್ಪಕವಾಗಿ ವ್ಯವಸ್ಥೆಗೊಳಿಸಿ ಪತ್ರಕರ್ತರಿಗೆ ಅನುಕೂಲ ಮಾಡಿ ಕೊಟ್ಟಿದ್ದಾರೆ.

ಮಂಗಳೂರು ಲೊಕೋಪಯೋಗಿ ಕಟ್ಟಡದ ಎರಡನೇ ಮಹಡಿಯಲ್ಲಿ ಶಿಥಿಲಾವಸ್ಥೆಯಲ್ಲಿದ್ದ ವಾರ್ತಾ ಇಲಾಖೆಯನ್ನು ನವೀಕರಣಗೊಳಿಸುವ ಪ್ರಕ್ರಿಯೆ ಆರಂಭಿಸಿದವರು ಖಾದರ್ ಷಾ. ಪ್ರತ್ಯೇಕ ಶೌಚಾಲಯವಿಲ್ಲದ ಕಛೇರಿಗೆ ಅದರ ವ್ಯವಸ್ಥೆಯನ್ನು ಮಾಡುವಲ್ಲಿ ಯಶಸ್ವೀಯಾಗಿದ್ದಾರೆ.

ವಾರ್ತಾ ಇಲಾಖೆಗೆಂದೇ ಪ್ರತ್ಯೇಕ ಕಟ್ಟಡ ಗಾಂಧೀ ಭವನದ ನೀಲಿ ನಕಾಶೆಯನ್ನು ಸಿದ್ಧ ಪಡಿಸಿ ಸ್ಥಳಾನ್ವೇಷಣೆಯಲ್ಲಿದ್ದಾರೆ. ಅವರ ಬಡ್ತಿಯ ಆದೇಶದ ಪ್ರತಿ ಸರಕಾರದಿಂದ ಇನ್ನಷ್ಟೇ ಅವರ ಕೈ ತಲುಪಬೇಕಿದೆ. ಅದರೆ ಬಡ್ತಿಯಾಗಿ ಅವರು ಇಲ್ಲೇ ಉಳಿಯುತ್ತಾರೋ ಬೇರೆಡೆಗೆ ವರ್ಗಾವಣೆಯಾಗುತ್ತಾರೋ ಎಂದು ಆದೇಶ ಕೈಸೇರಿದ ಬಳಿಕವಷ್ಟೇ ತಿಳಿದು ಬರಬೇಕಿದೆ.

Comments are closed.