ರಾಷ್ಟ್ರೀಯ

ಪ್ರಧಾನಿ ಮೋದಿ ಹತ್ಯೆಗೆ ಮಾವೋ ಉಗ್ರರಿಂದ ಸಂಚು: ರಾಜೀವ್ ಗಾಂಧಿ ಹತ್ಯೆ ಯತ್ನ ಮಾದರಿಯಲ್ಲಿಯೇ ಸಂಚು ! ಪುಣೆ ಪೊಲೀಸರಿಂದ ಬಯಲು

Pinterest LinkedIn Tumblr

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರ ಹತ್ಯೆಗೆ ಮಾವೋವಾದಿ ಉಗ್ರರು ಸಂಚು ರೂಪಿಸುತ್ತಿರುವ ಘಟನೆಯನ್ನು ಪುಣೆ ಪೊಲೀಸರು ಬಯಲಿಗೆಳೆದಿದ್ದಾರೆ.

ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಅವರ ಹತ್ಯೆ ಶ್ರೀಲಂಕಾದ ತಮಿಳು ಉಗ್ರಗಾಮಿ ಸಂಘಟನೆ ಎಲ್‌ಟಿಟಿಇ ಸಂಚು ರೂಪಿಸಿದ ಮಾದರಿಯಲ್ಲೇ ಮೋದಿ ಅವರ ಹತ್ಯೆಗೂ ಸಂಚು ಹೂಡುತ್ತಿರುವುದು ಪತ್ತೆಯಾಗಿದೆ.

ಪಶ್ಚಿಮ ಬಂಗಾಳ ಮೂಲದ ಮಾವೋವಾದಿ ಕಿಶನ್ ಎಂಬುವರು ರೋನಾ ಜೇಕಬ್ ಎಂಬುವರಿಗೆ ಪತ್ರ ಬರೆದಿದ್ದು ಅದರಲ್ಲಿ ಶ್ರೀಲಂಕಾದಲ್ಲಿ ರಾಜೀವ್ ಗಾಂಧಿ ಅವರಿಗೆ ಗೌರವಾರ್ಥ ಪರೇಡ್ ನಡೆಯುತ್ತಿದ್ದಾಗ ಓರ್ವ ತನ್ನ ಕೈಯಲ್ಲಿದ್ದ ಬಂದೂಕಿನಿಂದ ರಾಜೀವ್ ಗಾಂಧಿ ಅವರ ತಲೆಗೆ ಗಂಭೀರವಾಗಿ ಹೊಡೆದಿದ್ದರು. ಇದೇ ರೀತಿಯಲ್ಲಿ ಮೋದಿ ಅವರ ಹತ್ಯೆ ಮಾಡುವ ಕುರಿತಂತೆ ಬರೆಯಲಾಗಿದೆ ಎಂದು ಪುಣೆ ಪೊಲೀಸರು ತಿಳಿಸಿದ್ದಾರೆ.

ಯಾವುದೇ ಸಭೆ ಸಮಾರಂಭಗಳಲ್ಲಿ ಪ್ರಧಾನಿ ಮೋದಿ ಅವರು ಭಾಗಹಿಸಿದರೆ ಈ ವೇಳೆ ಅವರು ಸುಲಭವಾಗಿ ಜನರ ಜೊತೆ ಬೆರೆಯುತ್ತಾರೆ. ಅಲ್ಲಿ ನೆರೆದಿರುವಂತಹ ಅಭಿಮಾನಿಗಳ ಕೈ ಕುಲುಕುತ್ತಾರೆ ಇದನ್ನೇ ಬಳಸಿಕೊಂಡು ಕಿಶನ್ ಮೋದಿ ಅವರ ಹತ್ಯೆಗೆ ಸಂಚು ರೂಪಿಸಿದ್ದ ಎಂಬ ವಿಚಾರವನ್ನು ಪೊಲೀಸರು ಬಹಿರಂಗಪಡಿಸಿದ್ದಾರೆ.

2008ರ ಮುಂಬೈ ಸರಣಿ ಬಾಂಬ್ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್ ಇತ್ತೀಚೆಗಷ್ಟೇ ಸಭೆಯೊಂದರಲ್ಲಿ ಪ್ರಧಾನಿ ಮೋದಿ ಅವರನ್ನು ಹತ್ಯೆ ಮಾಡುವ ಬೆದರಿಕೆ ಹಾಕಿದ್ದಾನೆ.

ಮಹಾರಾಷ್ಟ್ರದ ಕೋರೆಗಾಂವ್ ಭೀಮ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಪುಣೆ ಪೊಲೀಸರು ಕೋರ್ಟ್ ಗೆ ವರದಿ ಸಲ್ಲಿಸಿದ್ದು ಅದರಲ್ಲಿ ಈ ವಿಷಯವನ್ನು ತಿಳಿಸಿದ್ದಾರೆ.

Comments are closed.