ಬಂಟ್ವಾಳ: ದುಷ್ಕೃತ್ಯ ನಡೆಸುವ ಉದ್ದೇಶದಿಂದ ತಲವಾರು ಸಹಿತ ಮಾರಾಕಾಸ್ತ್ರಗಳೊಂದಿಗೆ ಕಾರಿನಲ್ಲಿ ಸಾಗುತ್ತಿದ್ದ ದುಷ್ಕರ್ಮಿಗಳನ್ನು ಪೋಲೀಸರು ಸಿನಿಮೀಯ ಶೈಲಿಯಲ್ಲಿ ಬೆನ್ನಟ್ಟಿ ಫೈರಿಂಗ್ ನಡೆಸಿ ಮೂವರನ್ನು ಬಂಧಿಸಿರುವ ಘಟನೆ ಗುರುವಾರ ತಡರಾತ್ರಿ ಬಂಟ್ವಾಳ ಸಮೀಪ ಮಣಿಹಳ್ಳದಲ್ಲಿ ನಡೆದಿದೆ.
ಬಂಧಿತ ಆರೋಪಿಗಳನ್ನು ಮಾರಿಪಳ್ಳದ ಸದ್ದಾಂ , ಸುರತ್ಕಲ್‌ನ ಮೌಸೀನ್ ಹಾಗೂ ಮಹಮ್ಮದ್ ಇರ್ಶಾದ್ ಬೊಳ್ಳಾಯಿ ಎಂದು ಗುರುತಿಸಲಾಗಿದೆ. ಘಟನೆ ಸಂದರ್ಭ ಇಬ್ಬರು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.ಪರಾರಿಯಾದ ದುಷ್ಕರ್ಮಿಗಳು ಅಮ್ಮೆಮಾರ್ ನಿವಾಸಿಗಳಾದ ಮನ್ಸೂರ್ ಮತ್ತು ಅಮ್ಮಿ ಎಂದು ತಿಳಿದು ಬಂದಿದ್ದು, ಇವರ ಬಂಧನಕ್ಕೆ ಪೋಲೀಸರು ಬಲೆ ಬೀಸಿದ್ದಾರೆ. ಬಂಧಿತ ಆರೋಪಿಗಳಿಂದ ಕಾರು ಸಹಿತಾ ಮಾರಾಕಾಸ್ತ್ರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಬಂಧಿತ ಮೂವರ ಮೇಲೆ ಹಲವು ಪ್ರಕರಣಗಳು ದಾಖಲಾಗಿರುವ ಬಗ್ಗೆ ಪೊಲೀಸರು ತಿಳಿಸಿದ್ದಾರೆ. ಆರೋಪಿ ಸದ್ದಾಂ ಕೊಲೆ ಮತ್ತು ಕೊಲೆಯತ್ನ ಆರೋಪಿಯಾಗಿದ್ದು, ಮೌಸೀನ್ ಸುಮಾರು 14 ಪ್ರಕರಣಗಳಲ್ಲಿ ವಿವಿಧ ಠಾಣೆ ಗಳ ಆರೋಪಿಯಾಗಿದ್ದಾನೆ.
ಬೆಳ್ತಂಗಡಿಯಿಂದ ದರೋಡೆಕೋರರು ಕೆಂಪು ಕಲರ್ ಮಾರುತಿ ಸ್ವಿಪ್ಟ್ ಕಾರಿನಲ್ಲಿ ಬರುತ್ತಿದ್ದಾರೆ ಎಂಬ ಖಚಿತ ಮಾಹಿತಿಯ ಮೇರೆಗೆ ಬಂಟ್ವಾಳ ಪೋಲೀಸರು ಕಾರ್ಯಚರಣೆಗಿಳಿದಿದ್ದರು. ಈ ವೇಳೆ ಬಂಟ್ವಾಳ ದ ಮಣಿಹಳ್ಳದ ಚೆಕ್‌ಪೋಸ್ಟ್‌ನಲ್ಲಿ ಕೆಂಪು ಬಣ್ಣದ ಕಾರನ್ನು ನಿಲ್ಲಿಸಲು ಸೂಚನೆ ನೀಡಿದಾಗ ನಿಲ್ಲಿಸದೆ ಪೋಲೀಸ್ ಸಿಬಂದಿಗಳಗಳ ಮೇಲೆ ಹತ್ತಿಸಲು ಯತ್ನಿಸಿದ್ದಾರೆ. ಈ ವೇಳೆ ಪೊಲೀಸರ ರಕ್ಷಣೆಗೆ ನಗರ ಠಾಣಾ ಎಸ್ ಐ ಚಂದ್ರಶೇಖರ್ ಮತ್ತು ಗ್ರಾಮಾಂತರ ಠಾಣಾ ಎಸ್ ಐ ಪ್ರಸನ್ನ ಅವರು ಫೈರಿಂಗ್ ಮಾಡಿದ್ದಾರೆ.
ಬೆಳ್ತಂಗಡಿ ಚೆಕ್ ಪೋಸ್ಟ್ ನಲ್ಲಿ ಪೋಲೀಸರು ಕಾರು ತಡೆದಾಗ ನಿಲ್ಲಿಸದೆ ಬ್ಯಾರಿಕೇಡ್ ಗೆ ಹೊಡೆದು ಪರಾರಿಯಾಗಿದ್ದು ಆ ಬಳಿಕ ಪುಂಜಾಲಕಟ್ಟೆ ಚೆಕ್‌ಪೋಸ್ಟ್‌ನಲ್ಲೂ ನಿಲ್ಲಿಸದೆ ಪರಾರಿಯಾಗಿದ್ದಾರೆ. ಬೆಳ್ತಂಗಡಿ ಪೋಲೀಸರ ಖಚಿತ ಮಾಹಿತಿಯ ಮೇಲೆ ಪ್ರೋಬೆಷನರಿ ಐ.ಪಿ.ಎಸ್ ಅಕ್ಷಯ್ ಎಮ್ ಹಾಕೆ ಅವರ ನೇತೃತ್ವದಲ್ಲಿ ಬಂಟ್ವಾಳ ಪೋಲೀಸರು ಮಣಿಹಳ್ಳ ಜಂಕ್ಷನ್ ನಲ್ಲಿ ವಾಹನ ನಿಲ್ಲಿಸಲು ಸೂಚನೆ ನೀಡಿದಾಗ ವಾಹನ ನಿಲ್ಲಿಸದೆ ಪೋಲೀಸ್ ಸಿಬಂದಿಗಳ ಮೇಲೆ ಹಾಯಿಸಲು ಮುಂದಾಗಿದ್ದಾರೆ. ಈ ವೇಳೆ ಕಾರಿನ ಮೇಲೆ ಫೈರಿಂಗ್ ನೆಡೆಸಲಾಗಿದೆ.
ಕಾರನ್ನು ಸುತ್ತುವರಿದ ಪೊಲೀಸರು ಐದು ಮಂದಿ ಪೈಕಿ ಮೂವರನ್ನು ಪೋಲೀಸರು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾದರೆ ಇಬ್ಬರು ಪರಾರಿಯಾಗಿದ್ದಾರೆ. ಕಾರಿನಲ್ಲಿ ತಲವಾರು ಸಹಿತ ಮಾರಾಕಾಸ್ತರಗಳು ದೊರೆತಿದ್ದು ಆರೋಪಿಗಳ ಬಗ್ಗೆ ಹೆಚ್ಚಿನ ಮಾಹಿತಿ ಪೋಲೀಸರ ತನಿಖೆ ಯ ಬಳಿಕ ತಿಳಿದು ಬರಬೇಕಿದೆ.
Comments are closed.