ಕರಾವಳಿ

‘ಸುಶ್ರುತ ಸಂಹಿತೆ’ ಎಂದೇ ಹೆಸರುವಾಸಿ ಈ ಎಣ್ಣೆಯ ವಿಶೇಷ ಬಲ್ಲಿರಾ..?

Pinterest LinkedIn Tumblr

ಆಯುರ್ವೇದದ ಪ್ರಾಚೀನ ಗ್ರಂಥಗಳಲ್ಲೊಂದಾದ ‘ಸುಶ್ರುತ ಸಂಹಿತೆ’ಯಲ್ಲಿ ತೆಂಗಿನೆಣ್ಣೆಯನ್ನು ‘ಹೃದ್ಯಂ’ ಎಂದಿದ್ದಾರೆ. ಅಂದರೆ ‘ಹೃದಯಕ್ಕೆ ಅತಿ ಹಿತಕರ’ ಎಂದರ್ಥ. ಆದರೆ ಇತರ ಕಂಪನಿಗಳ ಎಣ್ಣೆಯ ಮಾರುಕಟ್ಟೆಯನ್ನು ವಿಸ್ತರಿಸಲು ತೆಂಗಿನ ಎಣ್ಣೆಯ ಕುರಿತು ಅಪಪ್ರಚಾರ ಮಾಡಲಾಗಿದೆ.

ಪ್ರಕೃತಿ ನಮಗೆ ಕೊಟ್ಟಿರುವ ಅನಂತ ಉಡುಗೊರೆಗಳಲ್ಲಿ ತೆಂಗು ಶ್ರೇಷ್ಟವಾದುದು. ಇದರ ಬೇರೆ ಬೇರೆ ರೂಪಗಳಾದ ತಿರುಳು, ಎಳನೀರು, ಎಣ್ಣೆ ಮತ್ತು ಹಾಲು ಸೌಂದರ್ಯ ಹೆಚ್ಚಿಸುವ ಸರ್ವೋತ್ತಮ ಸಾಧನಗಳು.
ಕೊಬ್ಬರಿ ಎಣ್ಣೆ ಬೇಗ ನಮ್ಮ ಚರ್ಮದೊಂದಿಗೆ ವಿಲೀನಗೊಂಡು ಒಣ ಮತ್ತು ಸುಕ್ಕುಗಳಿರುವ ಚರ್ಮವನ್ನು ನುಣುಪಾಗಿಸುತ್ತದೆ. ವರ್ಜಿನ್ ಕೊಬ್ಬರಿ ಎಣ್ಣೆಯಲ್ಲಿರುವ ಆಂಟಿ ಆಕ್ಸಿಡೆಂಟ್, ತ್ವಚೆಯನ್ನು ಫ್ರೀ ರಾಡಿಕಲ್ಸ್ ನಿಂದ ರಕ್ಷಿಸಿ, ವಯೋಸಹಜ ಸುಕ್ಕನ್ನೂ ದೂರ ಮಾಡುತ್ತದೆ.

ದಕ್ಷಿಣ ಭಾರತದ ಮಹಿಳೆಯರ ತಲೆಗೂದಲು ಉತ್ತರ ಭಾರತೀಯರಿಗಿಂತ ದಟ್ಟವಾಗಿ, ನೀಳವಾಗಿ ಮತ್ತು ಕಪ್ಪಾಗಿರುವುದನ್ನು ಗಮನಿಸಿರಬಹುದು. ಆಹಾರದಲ್ಲಿ ಮತ್ತು ಕೂದಲಿಗೂ ಅವರು ಉಪಯೋಗಿಸುವ ತೆಂಗು, ಕೊಬ್ಬರಿ ಎಣ್ಣೆಯೇ ಇದಕ್ಕೆ ಕಾರಣ. ಕೂದಲ ಮೂಲದಿಂದಲೇ ಪೋಷಣೆ ಒದಗಿಸಿ ಕೂದಲ ನೈಸರ್ಗಿಕ ಆರೋಗ್ಯವನ್ನು ಕಾಪಾಡುತ್ತದೆ.

ತೆಂಗಿನ ತುರಿಯ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿ 30 ನಿಮಿಷ ಬಿಟ್ಟು ತಣ್ಣೀರಿನಿಂದ ತೊಳೆದರೆ ಚರ್ಮ ಇಡೀದಿನ ಲವಲವಿಕೆಯಿಂದ ಕೂಡಿರುತ್ತದೆ. ತುಟಿಯು ಒಡೆದಿದ್ದರೆ ರಾತ್ರಿ ಮಲಗುವ ಮುನ್ನ ಹಾಗೂ ಬೆಳಗ್ಗೆ ಎದ್ದಾಗ ಸ್ವಲ್ಪ ಕೊಬ್ಬರಿ ಎಣ್ಣೆಯನ್ನು ಲೇಪಿಸಿ. ಇದರಿಂದ ತುಟಿಯ ಆರ್ದ್ರತೆ ಉಳಿಯುತ್ತದೆ. ಒಡೆದ ಹಿಮ್ಮಡಿಗೆ, ರಾತ್ರಿ ಮಲಗುವ ಮುನ್ನ ಪೆಟ್ರೋಲಿಯಂ ಜೆಲ್ಲಿಯೊಂದಿಗೆ ಕೊಬ್ಬರಿ ಎಣ್ಣೆ ಸೇರಿಸಿ ಹಚ್ಚಿ. ಸ್ನಾನದ ಮೊದಲು ಇಡೀ ದೇಹಕ್ಕೆ ಲಘುವಾಗಿ ಕೊಬ್ಬರಿ ಎಣ್ಣೆಯಲ್ಲಿ ಮಸಾಜ್ ಮಾಡಿ. ಸುಸ್ತು, ಟೆನ್ಶನ್ ದೂರವಾಗಿ ದೇಹ ಹಗುರಾಗುತ್ತದೆ. ಸ್ನಾನದ ನಂತರ ಟರ್ಕಿ ಟವೆಲಿನಲ್ಲಿ ಮೃದುವಾಗಿ ಒರೆಸಿಕೊಳ್ಳಿ. ಇದರಿಂದ ಜಿಡ್ಡಿನಂಶ ಉಳಿದು ತ್ವಚೆ ತಾಜಾ ಆಗಿರುತ್ತದೆ.

ಕೊಬ್ಬರಿ ಎಣ್ಣೆಯ ಕೊಬ್ಬು, ತಾಯಿಯ ಹಾಲಿನ ಕೊಬ್ಬಿಗೆ ಸಮನಾದುದು. ರೋಗಪ್ರತಿರೋಧಕ ಶಕ್ತಿಯನ್ನೂ ಇದು ಹೆಚ್ಚಿಸುತ್ತದೆ. ಇಂದೇ ಕೊಬ್ಬರಿ ಎಣ್ಣೆಯನ್ನು ಬಳಸಲು ಪ್ರಾರಂಭಿಸಿ ಮತ್ತು ರೂಪ ಲಾವಣ್ಯವನ್ನು ಹೆಚ್ಚಿಸಿಕೊಳ್ಳಿ.

Comments are closed.