ಕರಾವಳಿ

ಇದರ ಸೇವನೆಯಿಂದ ಸಿಗುವುದು ಹಲವು ರೋಗಗಳಿಗೆ ಹಾಗೂ ಸಮಸ್ಯೆಗಳಿಗೆ ಮುಕ್ತಿ

Pinterest LinkedIn Tumblr

ಹೌದು ಬೆಲ್ಲ ತಿನೋದ್ರಿಂದ ತುಂಬಾನೇ ಆರೋಗ್ಯಕ್ಕೆ ಸಹಾಯವಾಗುತ್ತದೆ ಮನೆಯಲ್ಲಿ ಸುಲಭವಾಗಿ ಸಿಗುವಂತ ಈ ಬೆಲ್ಲವು ಹಲವು ರೋಗಗಳಿಗೆ ಹಾಗು ಸಮಸ್ಯೆಗಳಿಗೆ ಮುಕ್ತಿತರುವಂತ ಕೆಲಸವನ್ನು ಮಾಡುತ್ತದೆ. ಹಾಗಾದರೆ ಯಾವೆಲ್ಲ ಸಮಸ್ಯೆಗಳಿಗೆ ಪರಿಹರಿಸುತ್ತದೆ ಎಂಬುದನ್ನು ನೋಡಣ

ನಾವು ಸೇವಿಸುವಂತ ಆಹಾರ ಸರಿಯಾದ ರೀತಿಯಲ್ಲಿ ಜೀರ್ಣವಾಗದೆ ಇದ್ದಾಗ ಬೆಲ್ಲ ತಿನ್ನುವುದು ಒಳ್ಳೆಯದು ಅದು ಹೇಗೆ ಅಂತೀರಾ? ಅಜೀರ್ಣವಾದಾಗ ಸ್ವಲ್ಪ ಬೆಲ್ಲವನ್ನು ಈರುಳ್ಳಿ ಜೊತೆ ತಿಂದರೆ ಇದು ಅಜೀರ್ಣ ಸಮಸ್ಯೆಯನ್ನು ಹೋಗಲಾಡಿಸುತ್ತದೆ. ರಕ್ತ ಹೀನತೆ ಇರುವವರಿಗೆ ಅತ್ಯುತ್ತಮವಾದ ಮನೆಮದ್ದು ಇದಾಗಿದೆ. ಇದರಲ್ಲಿ ಕಬ್ಬಿಣಾಂಶ ಅತ್ಯಧಿಕವಾಗಿದೆ.

ತ್ವಚೆಗೆ ತುಂಬಾ ಒಳ್ಳೆಯದು ಬೆಲ್ಲ. ಮೊಡವೆ ಇದ್ದರೆ ಬೆಲ್ಲವನ್ನು ತಿನ್ನಿ. ಮೊಡವೆಯನ್ನು ನಿಯಂತ್ರಿಸಿ ಕಮ್ಮಿಗೊಳಿಸುತ್ತದೆ. ಇದು ತ್ವಚೆಯ ಹೊಳಪನ್ನು ಹೆಚ್ಚಿಸುತ್ತದೆ.ನಿಯಮಿತವಾದ ಬೆಲ್ಲದ ಸೇವನೆ ಸಂಧಿ ನೋವನ್ನು ಕಡಿಮೆ ಮಾಡುತ್ತದೆ, ಮಂಡಿನೋವು ಕೈಕಾಲು ನೋವುಗಳನ್ನು ಕಮ್ಮಿ ಮಾಡುವಲ್ಲಿ ಬೆಲ್ಲ ಪ್ರಯೋಜನಕಾರಿ..

ನಿಮ್ಮಲಿ ಶೀತದ ಕಾರಣಕ್ಕೆ ಹಲವು ರೀತಿಯ ಈ ಸಮಸ್ಯೆಗಳು ಕಂಡು ಬರೆಯುತ್ತವೆ ಅಂತ ಸಮಯದಲ್ಲಿ ಈ ಕಾಪಾಡ ಸಮಸ್ಯೆಯು ಒಂದು ಆಗಿದೆ ಅವುಗಳಿಗೆ ಮದ್ದಾಗಿ ಈ ಬೆಲ್ಲ ಕೆಲಸ ಮಾಡುತ್ತದೆ. ಗಂಟಲಿನಲ್ಲಿ ಕಟ್ಟಿರುವ ಕಫವನ್ನು ಬೆಲ್ಲ ಕರಗಿಸಿ ತೊಲಗಿಸುತ್ತದೆ. ನೆಗಡಿ, ಕೆಮ್ಮಿನಿಂದ ಉಪಶಮನ ನೀಡುತ್ತದೆ.

ಸ್ತ್ರೀಯರಲ್ಲಿ ಹಾಗೂ ಪ್ರಾಯದ ಹುಡುಗಿಯರಲ್ಲಿ ಮುಟ್ಟಿನ ಸಮಯದಲ್ಲಿ ಅಧಿಕ ನೋವು ಕಾಣಿಸಿದರೆ ಮಾತ್ರೆ ತೆಗೆದುಕೊಳ್ಳುವ ಬದಲು ಬೆಲ್ಲ ಸೇವಿಸುವುದರಿಂದ ನೋವು ಕಡಿಮೆಯಾಗುವುದು..

ಬಿಕ್ಕಳಿಕೆ ಬಂದಾಗ ಸಣ್ಣ ಬೆಲ್ಲದ ಹೆಂಟೆಯನ್ನು ಬಾಯಲ್ಲಿ ಹಾಕಿ ಚೀಪಿ ರಸವನ್ನು ಕುಡಿಯುತ್ತಾ ಇದ್ದರೆ, ಕೂಡಲೇ ಬಿಕ್ಕಳಿಕೆ ನಿಂತು ಹೋಗುತ್ತದೆ.ಮನುಷ್ಯನ ಉತ್ತಮ ಆರೋಗ್ಯಕ್ಕೆ ಏನೆಲ್ಲಾ ಮಾಡುತ್ತಾನೆ ಅವುಗಳ ಜೊತೆಗೆ ಈ ಒಂದು ಸೇವನೆ ಒಳ್ಳೆಯದು ಬೆಲ್ಲ ಮತ್ತು ಬಾಳೆಹಣ್ಣುನ್ನು ತುಪ್ಪದಲ್ಲಿ ಹುರಿದು ತಿಂದರೆ ಶರೀರಕ್ಕೆ ಒಳ್ಳೆಯದು ಬಲ ಹಾಗು ತೂಕ ಹೆಚ್ಚಿಸುತ್ತದೆ..

ಮನುಷ್ಯನಿಗೆ ವಿವಿಧ ಒತ್ತಡಗಳಿಂದ ಹಾಗು ಬೇರೆ ಕಾರಣಗಳಿಂದ ತೆಲೆ ನೋವು ಸಮಸ್ಯೆ ಕಾಣಿಸಿ ಕೊಳ್ಳುತ್ತದೆ ಅಂತ ಸಮಯದಲ್ಲಿ ಬೆಲ್ಲ ಹಾಗು ಎಳ್ಳು ಹಾಲಿನಲ್ಲಿ ಹರೆದು ಹಣೆಗೆ ಹಚ್ಚಿ ಕೊಂಡರೆ ತಲೆನೊವು ಕಡಿಮೆ ಅಗುತ್ತದೆ.

Comments are closed.