ಕರ್ನಾಟಕ

ರಾಮನಗರಕ್ಕೆ ವರ್ಗಾವಣೆಯಾದ ಖಡಕ್ ಎಸ್ಪಿ ಕೆ. ಅಣ್ಣಾಮಲೈ ಮತ್ತೆ ಚಿಕ್ಕಮಗಳೂರಿಗೆ?

Pinterest LinkedIn Tumblr

ಬೆಂಗಳೂರು: ಕರಾವಳಿಯ ಉಡುಪಿ ಹಾಗೂ ಈ ಹಿಂದೆ ಚಿಕ್ಕಮಗಳುರಿನಲ್ಲಿ ದಕ್ಷ ಅಧಿಕಾರಿ ಎಂದು ಖ್ಯಾತಿ ಗಳಿಸಿದ ಎಸ್ಪಿ ಅಣ್ಣಾಮಲೈ ಅವರನ್ನು ಬಿ.ಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿದ ಬಳಿಕ ರಾಮನಗರಕ್ಕೆ ವರ್ಗಾಯಿಸಿದ್ದರು. ಆದರೇ ಆದೇಶ ರದ್ದು ಪಡಿಸಿ ಅಣ್ಣಾಮಲೈ ಅವರನ್ನು ಚಿಕ್ಕಮಗಳೂರಿಗೆ ಮರು ವರ್ಗಾವಣೆ ಮಾಡುವ ಸಾಧ್ಯತೆ ಹೆಚ್ಚಿದೆ.

ಯಡಿಯೂರಪ್ಪ ಮುಖ್ಯಮಂತ್ರಿಯಾದ ಬಳಿಕ ಕಳೆದ 2 ದಿನಗಳ ಹಿಂದೆ ಚಿಕ್ಕಮಗಳೂರಿನ ಎಸ್ಪಿಯಾಗಿದ್ದ ಅಣ್ಣಾಮಲೈ ಅವರನ್ನು ರಾಮನಗರ ಎಸ್ಪಿಯಾಗಿ ವರ್ಗಾವಣೆಗೊಳಿಸಲಾಗಿದ್ದು ಈ ಬಗ್ಗೆ ಕೆಲ ಆರೋಪವೂ ಕೇಳಿಬಂದಿತ್ತು.

ಈತನ್ಮಧ್ಯೆಯೇ ಶುಕ್ರವಾರದಂದು ಸುಪ್ರಿಂ ಕೋರ್ಟ್ ಬಿ.ಎಸ್.ವೈ. ಶನಿವಾರದಂದೇ ಬಹುಮತ ಸಾಭೀತು ಮಾಡಬೇಕು ಹಾಗೂ ಅಲ್ಲಿಯವರೆಗೂ ಅವರು ಕೈಗೊಳ್ಳುವ ಯಾವುದೇ ಆಡಳಿತಾತ್ಮಕ ಆದೇಶ ಸಿಂಧು ಆಗಲ್ಲ ಎಂದು ಹೇಳಿತ್ತು. ಶನಿವಾರ ವಿಶ್ವಾಸ ಮತ ಯಾಚನೆ ಮಾಡದೆ ಬಿ.ಎಸ್.ವೈ ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿದ್ದು ಸದ್ಯ ಎಚ್.ಡಿ. ಕುಮಾರ ಸ್ವಾಮಿ ನಿಯೋಜಿತ ಮುಖ್ಯಮಂತ್ರಿ ಆಗಿದ್ದಾರೆ.

ಸದ್ಯ ಎಸ್ಪಿ ಕೆ. ಅಣ್ಣಾಮಲೈ ಅವರ ವರ್ಗಾವಣೆ ರದ್ದಾಗುವ ಸಾಧ್ಯತೆ ಹೆಚ್ಚಾಗಿದೆ. ಇನ್ನೊಂದೆರಡು ದಿನಗಳಲ್ಲಿ ಮತ್ತೆ ಚಿಕ್ಕಮಗಳೂರಿನಲ್ಲಿ ಅಣ್ಣಾಮಲೈ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Comments are closed.